ಇಲ್ಲಿನ ಮೂಢನಂಬಿಕೆಯ ಪ್ರತೀತಿ ಮಕ್ಕಳ ಜೀವಕ್ಕೇ ತಂದೊಡ್ಡಿದೆ ಫಜೀತಿ

| Updated By: ಆಯೇಷಾ ಬಾನು

Updated on: Jun 17, 2020 | 2:23 PM

ಹಾವೇರಿ: ಜಗತ್ತು ವೈಜ್ಞಾನಿಕವಾಗಿ ಸಾಕಷ್ಟು ಮುಂದುವರೆದಿದ್ರೂ ಜನರಲ್ಲಿನ‌ ಬಹಳಷ್ಟು ಮೂಢನಂಬಿಕೆಗಳು ಮಾತ್ರ ಹಾಗೇ ಉಳಿದಿವೆ. ಇದಕ್ಕೊಂದು ನಿದರ್ಶನ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ಹಜರತ್ ಪೀರ ಸಯ್ಯದ್​ ಅಲ್ಲಾವುದ್ದೀನ್ ಶಾ ದರ್ಗಾದಲ್ಲಿ ನಡೆಯುವ ವಿಚಿತ್ರ ಆಚರಣೆ. ಹರಕೆ ತೀರಿಸುವ ಸಲುವಾಗಿ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟ ಅಂದ ಹಾಗೆ ಇಲ್ಲಿಗೆ ಬರುವ ಭಕ್ತರು ಈ ಮೂಢನಂಬಿಕೆಯ ಭಾಗವಾಗಿ ತಮ್ಮ ತಮ್ಮ ಹಸುಗೂಸುಗಳನ್ನು ತೊಟ್ಟಿಲು ಒಂದರಲ್ಲಿ ಕಟ್ಟಿ ದರ್ಗಾದ ಆವರಣದಲ್ಲಿರುವ ಬಾವಿಯೊಳಕ್ಕೆ ಇಳಿಸಿ ನೀರು ಮುಟ್ಟಿಸುತ್ತಾರೆ. […]

ಇಲ್ಲಿನ ಮೂಢನಂಬಿಕೆಯ ಪ್ರತೀತಿ ಮಕ್ಕಳ ಜೀವಕ್ಕೇ ತಂದೊಡ್ಡಿದೆ ಫಜೀತಿ
Follow us on

ಹಾವೇರಿ: ಜಗತ್ತು ವೈಜ್ಞಾನಿಕವಾಗಿ ಸಾಕಷ್ಟು ಮುಂದುವರೆದಿದ್ರೂ ಜನರಲ್ಲಿನ‌ ಬಹಳಷ್ಟು ಮೂಢನಂಬಿಕೆಗಳು ಮಾತ್ರ ಹಾಗೇ ಉಳಿದಿವೆ. ಇದಕ್ಕೊಂದು ನಿದರ್ಶನ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ಹಜರತ್ ಪೀರ ಸಯ್ಯದ್​ ಅಲ್ಲಾವುದ್ದೀನ್ ಶಾ ದರ್ಗಾದಲ್ಲಿ ನಡೆಯುವ ವಿಚಿತ್ರ ಆಚರಣೆ.

ಹರಕೆ ತೀರಿಸುವ ಸಲುವಾಗಿ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟ
ಅಂದ ಹಾಗೆ ಇಲ್ಲಿಗೆ ಬರುವ ಭಕ್ತರು ಈ ಮೂಢನಂಬಿಕೆಯ ಭಾಗವಾಗಿ ತಮ್ಮ ತಮ್ಮ ಹಸುಗೂಸುಗಳನ್ನು ತೊಟ್ಟಿಲು ಒಂದರಲ್ಲಿ ಕಟ್ಟಿ ದರ್ಗಾದ ಆವರಣದಲ್ಲಿರುವ ಬಾವಿಯೊಳಕ್ಕೆ ಇಳಿಸಿ ನೀರು ಮುಟ್ಟಿಸುತ್ತಾರೆ. ಸುಮಾರು ವರ್ಷಗಳ ನಂತರ ಮಕ್ಕಳಾದ ದಂಪತಿಗಳು ಈ ರೀತಿಯಾಗಿ ಹರಕೆ ತೀರಿಸುವ ಪ್ರತೀತಿ ಇಲ್ಲಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಆದರೆ, ಪುಟ್ಟ ಮಕ್ಕಳನ್ನು ಬಾವಿಯೊಳಕ್ಕೆ ಇಳಿಸುವಾಗ ಸ್ವಲ್ಪ ಯಾಮಾರಿದ್ರೂ ಕಂದಮ್ಮಗಳ ಪ್ರಾಣಕ್ಕೇ ಕುತ್ತು. ಜೊತೆಗೆ ಮಗುವನ್ನ ಬಾವಿಯಲ್ಲಿ ಬಿಡುವಾಗ ಅವುಗಳು ಚೀರಾಡಿ ಅಳುತ್ತಿರುತ್ತವೆ. ಆದರೂ ಹರಕೆ ತೀರಿಸಲೇಬೇಕು ಎನ್ನುವ ಕಾರಣಕ್ಕೆ ಇಲ್ಲಿಗೆ ಬರುವ ತಂದೆ-ತಾಯಿಗಳು ಅದರ ಬಗ್ಗೆ ಹೆಚ್ಚು ಗಮನ ಹರಿಸೋದಿಲ್ಲ.

ಹರಕೆ ತೀರಿಸುವ ನೆಪದಲ್ಲಿ ದರ್ಗಾದಲ್ಲಿ ನಡೆಯುವ ಈ ವಿಚಿತ್ರ ಪದ್ಧತಿ ನಮ್ಮಲ್ಲಿ ಮೂಢನಂಬಿಕೆಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಒಳ್ಳೆಯ ಉದಾಹರಣೆ. ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಎಂಬ ಕಾರಣಕ್ಕೆ ಇಲ್ಲಿಗೆ ಬರುವ ಭಕ್ತರು ಈ ಆಚರಣೆ ಕೈಬಿಡಲು ಒಪ್ಪುತ್ತಿಲ್ಲ.

ಅಂದ ಹಾಗೆ, ಇದು ತಾಲೂಕು ಮತ್ತು ಜಿಲ್ಲಾಡಳಿತದ ಗಮನಕ್ಕೂ ಸಹ ಬಂದಿದೆ. ಆದರೂ ಈ ಪ್ರತೀತಿಗೆ ಜಾಣಕುರುಡಾಗಿರುವುದು ನಿಜಕ್ಕೂ ವಿಪರ್ಯಾಸ. -ಪ್ರಭುಗೌಡ.ಎನ್.ಪಾಟೀಲ

Published On - 5:01 pm, Tue, 16 June 20