ಮುದೇನೂರು ಬಳಿ ಈಜಲು ತೆರಳಿದ್ದ ಮೂವರು ತುಂಗಾಭದ್ರಾ ನದಿಯಲ್ಲಿ ಮುಳುಗಿ ಸಾವು

| Updated By: ಆಯೇಷಾ ಬಾನು

Updated on: Jan 02, 2023 | 2:14 PM

ಜಲು ತೆರಳಿದ್ದ ಮೂವರು ತುಂಗಾಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದ ಬಳಿ ನಡೆದಿದೆ.

ಮುದೇನೂರು ಬಳಿ ಈಜಲು ತೆರಳಿದ್ದ ಮೂವರು ತುಂಗಾಭದ್ರಾ ನದಿಯಲ್ಲಿ ಮುಳುಗಿ ಸಾವು
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ
Follow us on

ಹಾವೇರಿ: ಈಜಲು ತೆರಳಿದ್ದ ಮೂವರು ತುಂಗಾಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದ ಬಳಿ ನಡೆದಿದೆ. ನವೀನ್ ಕುರಗುಂದ(20), ವಿಕಾಸ್ ಪಾಟೀಲ್(20), ನೇಪಾಳ ಮೂಲದ ಪ್ರೇಮ್ ಬೋರಾ(25) ಮೃತ ದುರ್ದೈವಿಗಳು. ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇನ್ನೂ ಕೂಡ ಮೃತದೇಹಗಳು ಪತ್ತೆಯಾಗಿಲ್ಲ. ತೀವ್ರ ಶೋಧ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: ಉಗ್ರರಿಂದ ನಾಲ್ವರ ಹತ್ಯೆ ಬೆನ್ನಲ್ಲೇ ರಜೌರಿಯಲ್ಲಿ ಬಾಂಬ್ ಸ್ಫೋಟ; ಒಂದು ಮಗು ಸಾವು, ಐವರಿಗೆ ಗಾಯ

ತಲೆಯನ್ನ‌ ಜಜ್ಜಿ ವ್ಯಕ್ತಿಯ ಬರ್ಬರ ಕೊಲೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಗೇಟ್ ಬಳಿ ಕಳೆದ ರಾತ್ರಿ ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಶವ ಎಸೆಯಲಾಗಿದೆ. ತಲೆಯನ್ನ ಮಚ್ಚಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿ ನಂತರ ಬಟ್ಟೆಗಳನ್ನು ಕಿತ್ತುಕೊಂಡು ಶವವನ್ನು ಬೆತ್ತಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ‌ ವಿಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧಾರವಾಡದ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಕಳ್ಳತನ

ಧಾರವಾಡ ನಗರದ ಕೋರ್ಟ್ ಸರ್ಕಲ್ ಬಳಿ ಇರುವ ಸೊಸೈಟಿಯಲ್ಲಿ ಕಳೆದ ರಾತ್ರಿ ಕಳ್ಳತನ ನಡೆದಿದೆ. ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಗೆ ಸೇರಿದ ಸೊಸೈಟಿ ಇದಾಗಿದ್ದು ಸುಮಾರು 20 ಲಕ್ಷ ನಗದು ಹಾಗೂ 20 ಲಕ್ಷ‌ ರೂ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಸಿಸಿಟಿವಿ ಹಾಗೂ ಸೊಸೈಟಿಯ ದಾಖಲೆಗಳನ್ನು ಖದೀಮರು ಸುಟ್ಟಿ ಹಾಕಿದ್ದಾರೆ. ಕಳ್ಳರು ಸಿಸಿಟಿವಿಯ ಡಿವಿಆರ್ ಹೊತ್ತೊಯ್ದಿದ್ದಾರೆ. ಸ್ಥಳಕ್ಕೆ ಎಸಿಪಿ ವಿಜಯ ತಳವಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:14 pm, Mon, 2 January 23