ಕೇಂದ್ರ ಸಚಿವ ನಾರಾಯಣಸ್ವಾಮಿ ಆಗಮನದ ವೇಳೆ ಹಾವೇರಿಯ ಬಿಜೆಪಿ ಕಾರ್ಯಕರ್ತರ ಜೇಬಿಗೆ ಬಿತ್ತು ಕತ್ತರಿ, 20 ಸಾವಿರ ಮಂಗಮಾಯ!

ಸುಮಾರು 20 ಸಾವಿರ ಹಣ ಕಳೆದುಕೊಂಡವರು ಕಂಗಾಲಾಗಿದ್ದಾರೆ,

ಕೇಂದ್ರ ಸಚಿವ ನಾರಾಯಣಸ್ವಾಮಿ ಆಗಮನದ ವೇಳೆ ಹಾವೇರಿಯ ಬಿಜೆಪಿ ಕಾರ್ಯಕರ್ತರ ಜೇಬಿಗೆ ಬಿತ್ತು ಕತ್ತರಿ, 20 ಸಾವಿರ ಮಂಗಮಾಯ!
ಹಾವೇರಿಗೆ ಆಗಮಿಸಿದ ಕೇಂದ್ರ ಸಚಿವ ನಾರಾಯಣಸ್ವಾಮಿ
Follow us
| Updated By: guruganesh bhat

Updated on:Aug 19, 2021 | 6:10 PM

ಹಾವೇರಿ: ಬಿಜೆಪಿ ನಡೆಸುತ್ತಿರುವ ಜನಾಶೀರ್ವಾದ ಕಾರ್ಯಕ್ರಮಕ್ಕಾಗಿ  ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಇಂದು ಹಾವೇರಿ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಕೆಲವು ಖದೀಮರು ಕೈಚಳಕ ತೋರಿದ್ದು ಹಾವೇರಿ ನಗರದ ಮೈಲಾರ ಮಹಾದೇವಪ್ಪ ಸಭಾಭವನದ ಬಳಿ ಮೂವರ ಜೇಬು ಕತ್ತರಿಸಿ 20 ಸಾವಿರಕ್ಕೂ ಹೆಚ್ಚು ಹಣವನ್ನು ಲಪಟಾಯಿಸಿದ್ದಾರೆ. ಹಣ ಕಳೆದುಕೊಂಡ ಮೂವರೂ ಬಿಜೆಪಿ ಕಾರ್ಯಕರ್ತರು ಎಂದು ಹೇಳಲಾಗಿದ್ದು, ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲ್ಲಕೋಟಿ ಅವರ 15 ಸಾವಿರ, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ನಜೀರ್ ನದಾಫ್ ಅವರ 20 ಸಾವಿರ ಕಳ್ಳತನವಾಗಿದೆ. ಬ್ಯಾಡಗಿ ಎಂಎಲ್ಎ ವಿರೂಪಾಕ್ಷಪ್ಪ ಬಳ್ಳಾರಿ ಅವರು ಜೇಬಿನಿಂದ ಹಣ ಎಗರಿಸಲೂ ಕಳ್ಳರು ಪ್ರಯತ್ನಿಸಿದ್ದರು. ಜತೆಗೆ ಸುಮಾರು 15 ಮೊಬೈಲ್ ಕಳ್ಳತನವಾಗಿವೆ. ಆದರೆ ಈವರೆಗೆ ಈ ಕಳ್ಳತನಗಳ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ಅಧಿಕಾರದಲ್ಲಿದ್ದಾಗ ಯಾವುದೇ ವರದಿ ಬಗ್ಗೆಯೂ ಮಾತಾಡದ ವಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ವರದಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ಯ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಬೇಕಿಲ್ಲ. ಏಕೆಂದರೆ ಇಗಾಗಲೇ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಬಗ್ಗೆ ಚರ್ಚೆ ನಡೆದಿದೆ ಎಂದು ಅವರು ತಿಳಿಸಿದರು. ಗುಂಡು ಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾಗೆ ಸ್ವಾಗತ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಆ ಘಟನೆ ಯಾವ ಸಮಯದಲ್ಲಿ ಹೇಗಾಯ್ತು ಎಂದು ಅರಿವಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: 

Janardhan Reddy: ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಷರತ್ತುಬದ್ಧ ಅನುಮತಿ ನೀಡಿದ ಸುಪ್ರೀಂಕೋರ್ಟ್ 

ಜಾಮೀನು ಆದೇಶಕ್ಕೆ ಕಾಯುತ್ತಿರುವ ಹಿಂಡಲಗ ಜೈಲು ಸಿಬ್ಬಂದಿ: ಧಾರವಾಡದಲ್ಲಿ ವಿನಯ್ ಕುಲಕರ್ಣಿ ಬೆಂಬಲಿಗರ ಸಂಭ್ರಮಾಚರಣೆ

(Union Minister Narayana Swamy arrived to Haveri 3 BJP activists lost 20 thousand by pickpocketing)

Published On - 3:29 pm, Thu, 19 August 21

ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಾಮೆಂಟ್ ಮಾಡಲ್ಲ: ಡಿಕೆ ಶಿವಕುಮಾರ್
ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಾಮೆಂಟ್ ಮಾಡಲ್ಲ: ಡಿಕೆ ಶಿವಕುಮಾರ್
ರೈತರ ಜಮೀನು ಯಾವ ಕಾರಣಕ್ಕೂ ವಕ್ಫ್ ಬೋರ್ಡ್​ಗೆ ಹೋಗಲ್ಲ: ಸಿದ್ದರಾಮಯ್ಯ
ರೈತರ ಜಮೀನು ಯಾವ ಕಾರಣಕ್ಕೂ ವಕ್ಫ್ ಬೋರ್ಡ್​ಗೆ ಹೋಗಲ್ಲ: ಸಿದ್ದರಾಮಯ್ಯ
ಪುನೀತ್ 3ನೇ ವರ್ಷದ ಪುಣ್ಯಸ್ಮರಣೆ; ಅಪ್ಪು ದೇವಾಲಯದಲ್ಲಿ ವಿಶೇಷ ಪೂಜೆ
ಪುನೀತ್ 3ನೇ ವರ್ಷದ ಪುಣ್ಯಸ್ಮರಣೆ; ಅಪ್ಪು ದೇವಾಲಯದಲ್ಲಿ ವಿಶೇಷ ಪೂಜೆ