ಹಾವೇರಿ: ಕಾವಿ ತೊಟ್ಟು ಮನೆ ಮನೆಗೆ ತೆರಳಿ ಜನರಿಂದ ಹಣ ಸಂಗ್ರಹಿಸ್ತಿದ್ದ ಇಬ್ಬರು ವ್ಯಕ್ತಿಗಳಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಬಳಿ ಇರೋ ಜೇಕಿನಕಟ್ಟಿ ರಸ್ತೆಯಲ್ಲಿ ನಡೆದಿದೆ. ಕಾವಿ ತೊಟ್ಟು ಹಿಂದೂ ಧರ್ಮಕ್ಕೆ ಅಪಮಾನ ಮಾಡ್ತಿದ್ದೀರಿ ಎಂದು ಗ್ರಾಮಸ್ಥರು ಥಳಿಸಿದ್ದಾರೆ.
ಕಾವಿ ತೊಟ್ಟು ಮನೆಮನೆಗೆ ತೆರಳಿ ಜನರಿಂದ ಹಣ ಸಂಗ್ರಹಿಸ್ತಿದ್ದ ಇಬ್ಬರು, ಹಣ ಸಂಗ್ರಹದ ಬಳಿಕ ಗ್ರಾಮದ ಹೊರವಲಯಕ್ಕೆ ಬಂದು ಕಾವಿ ಕಳಚಿ ಬೇರೆ ಬಟ್ಟೆ ತೊಟ್ಟು ಓಡಾಡ್ತಿದ್ದರು. ಹೀಗಾಗಿ ಇಬ್ಬರನ್ನೂ ಬೆನ್ನಟ್ಟಿ ಹಿಡಿದು ಗ್ರಾಮಸ್ಥರು ಧರ್ಮದೇಟು ನೀಡಿ ಬುದ್ದಿ ಹೇಳಿ ಕಳಿಸಿದ್ದಾರೆ. ಕಾವಿ ತೊಟ್ಟು ಮನೆಮನೆಗೆ ತೆರಳಿ ಜನರಿಗೆ ಇಲ್ಲಸಲ್ಲದ್ದು ಹೇಳಿ ಜನರ ಬಳಿ ಹಣ ವಸೂಲಿ ಮಾಡ್ತಿದ್ದರು. ಕಾವಿ ತೊಟ್ಟು ಹಿಂದೂ ಧರ್ಮಕ್ಕೆ ಅವಮಾನ ಮಾಡ್ತಿದ್ದೀರಿ ಅಂತಾ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹಲ್ಲೆಗೆ ಒಳಗಾದ ಇಬ್ಬರು ವ್ಯಕ್ತಿಗಳು ಮಾದಾಪುರ, ಕಾರಡಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾವಿ ತೊಟ್ಟು ಮನೆಮನೆಗೆ ಹೋಗಿ ಜನರಿಂದ ಹಣ ಸಂಗ್ರಹಿಸ್ತಿದ್ದರು. ಹೀಗಾಗಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದ ಇಬ್ಬರು ನಕಲಿ ಸ್ವಾಮೀಜಿಗಳಿಗೆ ಧರ್ಮದೇಟು ನೀಡಿ ಕಳಿಸಿದ್ದ ವಿಡಿಯೋ ವೈರಲ್ ಆಗಿದೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇಬ್ಬರು ನೈಜೀರಿಯನ್ ಡ್ರಗ್ ಪೆಡ್ಲರ್‌ಗಳ ಬಂಧನ
ಬೆಂಗಳೂರಿನಲ್ಲಿ ಆಫ್ರಿಕನ್ ಡ್ರಗ್ ಪೆಡ್ಲರ್ ಗಳ ಹಾವಳಿ ಹೆಚ್ಚಾಗಿದೆ. ಸಿಸಿಬಿ ಪೊಲೀಸರು ಇಬ್ಬರು ಪೆಡ್ಲರ್ಸ್ ಸೆರೆ ಹಿಡಿದಿದ್ದಾರೆ. ಮಿಚಲ್ ಜಾನ್ಸನ್, ಚಿನೇದು ಲಾರೆನ್ಸ್ ಬಂಧಿತರು. ಮುಂಬೈನಿಂದ ಎಂಡಿಎಂಎ ಡ್ರಗ್ಸ್ ತರುತ್ತಿದ್ದ ಆರೋಪಿಗಳು ಬೆಂಗಳೂರಿನಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದರು ಎಂದು ತಿಳಿದು ಬಂದಿದೆ. ವಿದ್ಯಾರ್ಥಿ ಹಾಗೂ ಪರಿಚಯಸ್ಥರಿಗೆ ಎಂಡಿಎಂಎ ಮಾರಾಟ ಮಾಡ್ತಿದ್ದರು. ಬ್ಯುಸಿನೆಸ್ ವೀಸಾ ಅಡಿಯಲ್ಲಿ ಭಾರತಕ್ಕೆ ಬಂದಿದ್ದ ಆರೋಪಿಗಳು, ಈ ಹಿಂದೆಯೂ ಇಂದಿರಾನಗರ ಹಾಗೂ ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ಸಿಕ್ಕಿಬಿದ್ದಿದ್ದರು. ಬಂಧಿತರಿಂದ 20 ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್ ಹಾಗೂ ಎರಡು ಮೊಬೈಲ್ ತೂಕದ ಯಂತ್ರ ವಶಕ್ಕೆ ಪಡೆಯಲಾಗಿದೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಂದ್ರಮಾನ ಯುಗಾದಿ ಹಬ್ಬವನ್ನ ಧಾರ್ಮಿಕ ಹಬ್ಬವನ್ನಾಗಿ ಆಚರಿಸಲು ನಿರ್ಧರಿಸಿದ ಧಾರ್ಮಿಕ ಮತ್ತು ದತ್ತಿ ಇಲಾಖೆ
‘ಡೇಂಜರಸ್’ ಹುಡುಗಿಯರನ್ನು ಬೆಂಗಳೂರಿಗೆ ಕರೆತಂದು ಪರಿಚಯ ಮಾಡಿಸಿದ ರಾಮ್ ಗೋಪಾಲ್ ವರ್ಮಾ
Published On - 4:54 pm, Thu, 31 March 22