ಹಾವೇರಿಯಲ್ಲಿ ಅತ್ತಿಗೆಯನ್ನು ಹತ್ಯೆಗೈದು ನಾದಿನಿ ನೇಣಿಗೆ ಶರಣು!

| Updated By: sandhya thejappa

Updated on: Oct 31, 2021 | 12:00 PM

ಪೊಲೀಸರೊಂದಿಗೆ ನಾಲ್ಕು ಜನ ಊರಿನವರನ್ನು ಕರೆದುಕೊಂಡು, ಬಾಗಿಲು ಒಡೆದು ಒಳಗೆ ಬನ್ನಿರಿ ಅಂತಾ ಬರೆದಿಟ್ಟು, ಅದನ್ನು ಬಾಗಿಲಿಗೆ ನೇತು ಹಾಕಿ ಮಂಜುಳಾ ನೇಣಿಗೆ ಶರಣಾಗಿದ್ದಾರೆ.

ಹಾವೇರಿಯಲ್ಲಿ ಅತ್ತಿಗೆಯನ್ನು ಹತ್ಯೆಗೈದು ನಾದಿನಿ ನೇಣಿಗೆ ಶರಣು!
ಬಾಗಿಲಿನಲ್ಲಿ ಹಾಳೆಯನ್ನು ನೇತು ಹಾಕಿದ್ದಾರೆ
Follow us on

ಹಾವೇರಿ: ಅತ್ತಿಗೆಯನ್ನು ಹತ್ಯೆಗೈದು ನಾದಿನಿ ನೇಣಿಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಮ್ಯಾಗೇರಿ ಓಣಿಯಲ್ಲಿ ನಡೆದಿದೆ. ಸುತ್ತಿಗೆಯಿಂದ ಅತ್ತಿಗೆ ತಲೆಗೆ ಹೊಡೆದು ಕೊಲೆ ಮಾಡಿದ ಬಳಿಕ ನಾದಿನಿ ನೇಣಿಗೆ ಶರಣಾದ್ದಾರೆ. ಈ ಘಟನೆ ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸ್ಥಳಕ್ಕೆ ಸ್ಥಳಕ್ಕೆ ಶಿಗ್ಗಾಂವಿ ಡಿವೈಎಸ್ಪಿ ಕಲ್ಲೇಶಪ್ಪ ಹಾಗೂ ಸಿಪಿಐ ಬಸವರಾಜ ಹಲಬಣ್ಣವರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

66 ವರ್ಷದ ಜಯಶ್ರೀ ಪಾಟೀಲ್ ಹತ್ಯೆಯಾದ ಅತ್ತಿಗೆ. 50 ವರ್ಷದ ಮಂಜುಳಾ ಪಾಟೀಲ್ ಕೊಲೆ ಮಾಡಿ ನೇಣಿಗೆ ಶರಣಾದ ನಾದಿನಿ. ನಾದಿನಿ ಮಂಜುಳಾ ಮನೆಯಲ್ಲಿದ್ದ ಸುತ್ತಿಗೆಯಿಂದ ಅತ್ತಿಗೆ ಜಯಶ್ರೀ ತಲೆಗೆ ಹೊಡೆದು ಆನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರೊಂದಿಗೆ ನಾಲ್ಕು ಜನ ಊರಿನವರನ್ನು ಕರೆದುಕೊಂಡು, ಬಾಗಿಲು ಒಡೆದು ಒಳಗೆ ಬನ್ನಿರಿ ಅಂತಾ ಬರೆದಿಟ್ಟು, ಅದನ್ನು ಬಾಗಿಲಿಗೆ ನೇತು ಹಾಕಿ ಮಂಜುಳಾ ನೇಣಿಗೆ ಶರಣಾಗಿದ್ದಾರೆ.

ಮಾರಕಾಸ್ತ್ರಗಳಿಂದ ಹಲ್ಲೆ
ಕೌಟುಂಬಿಕ ಕಲಹ ಹಿನ್ನೆಲೆ ಮಾರಕಾಸ್ತ್ರಗಳಿಂದ ತಮ್ಮ ತನ್ನ ಅಣ್ಣನ ಮೇಲೆ ಹಲ್ಲೆ ಮಾಡಿದ್ದಾನೆ. ಬೆಳಗಾವಿಯ ಟಿಳಕವಾಡಿಯಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಪ್ರಕಾಶ್ ಮಜುಕರ್ ಸ್ಥಿತಿ ಗಂಭೀರವಾಗಿದೆ. ಸದ್ಯ  ಪ್ರಕಾಶ್ ಮಜುಕರ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತ್ಯವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಸಹೋದರನ್ನ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ

ದೇಶಾದ್ಯಂತ ಸರ್ಕಾರಿ ಕಚೇರಿಗಳನ್ನು ಗಲ್ಲ ಮಂಡಿಗಳನ್ನಾಗಿ ಪರಿವರ್ತಿಸುವ ಎಚ್ಚರಿಕೆ ನೀಡಿದ ರಾಕೇಶ್​ ಟಿಕಾಯತ್​

Puneeth Rajkumar: ಎಂದೂ ಮರೆಯಾಗದ ಬೆಟ್ಟದ ಹೂವು; ಕಾಫಿನಾಡ ದಟ್ಟಕಾನನದಲ್ಲಿ ಪುನೀತ್ ಹೆಜ್ಜೆ ಗುರುತುಗಳು

Published On - 11:55 am, Sun, 31 October 21