ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಸಮ್ಮತಿ ನೀಡಿದ ದೇವೇಗೌಡ

|

Updated on: May 26, 2020 | 5:54 PM

ಬೆಂಗಳೂರು: ಇತ್ತೀಚೆಗೆ ಅರವತ್ತಾರನೇ ದಾಂಪತ್ಯ ವಸಂತಕ್ಕೆ ಕಾಲಿಟ್ಟ ಮಣ್ಣಿನ ಮಗ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರಾಜ್ಯಸಭೆ ಮೂಲಕ ಸಂಸತ್ತನ್ನು ಪ್ರವೇಶಿಸಲು ಹಸಿರು ನಿಶಾನೆ ನೀಡಿದ್ದಾರೆ. ಮೇಲ್ಮನೆ ಮೇಲಾಟಕ್ಕೆ ಮತ್ತೆ ತೆರೆಮರೆಯಲ್ಲಿ ಹಳೇ ದೋಸ್ತಿಗಳ ಹೊಸ ರಾಜಕೀಯ ಶುರುವಾಗಿದೆ. ರಾಷ್ಟ್ರ ರಾಜಕೀಯದ ಅಖಾಡಕ್ಕೆ ಇಳಿಯಲು ಮತ್ತೊಮ್ಮೆ ದೇವೇಗೌಡರು ರೆಡಿಯಾಗಿದ್ದಾರೆ. ವಿಧಾನಸಭೆಯಿಂದ ರಾಜ್ಯಸಭೆ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್​ಡಿಡಿ ಕಣಕ್ಕಿಳಿಯಲಿದ್ದಾರೆ. ಜೂನ್ 25ರಂದು ಕುಪೇಂದ್ರ ರೆಡ್ಡಿ ಸ್ಥಾನ ತೆರವಾಗಲಿದೆ. ಹಾಗಾಗಿ ರಾಜ್ಯಸಭೆ ಸ್ಥಾನಕ್ಕೆ ಸ್ಪರ್ಧೆ ಮಾಡುವುದಾಗಿ ಇತ್ತೀಚೆಗೆ […]

ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಸಮ್ಮತಿ ನೀಡಿದ ದೇವೇಗೌಡ
Follow us on

ಬೆಂಗಳೂರು: ಇತ್ತೀಚೆಗೆ ಅರವತ್ತಾರನೇ ದಾಂಪತ್ಯ ವಸಂತಕ್ಕೆ ಕಾಲಿಟ್ಟ ಮಣ್ಣಿನ ಮಗ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರಾಜ್ಯಸಭೆ ಮೂಲಕ ಸಂಸತ್ತನ್ನು ಪ್ರವೇಶಿಸಲು ಹಸಿರು ನಿಶಾನೆ ನೀಡಿದ್ದಾರೆ. ಮೇಲ್ಮನೆ ಮೇಲಾಟಕ್ಕೆ ಮತ್ತೆ ತೆರೆಮರೆಯಲ್ಲಿ ಹಳೇ ದೋಸ್ತಿಗಳ ಹೊಸ ರಾಜಕೀಯ ಶುರುವಾಗಿದೆ.

ರಾಷ್ಟ್ರ ರಾಜಕೀಯದ ಅಖಾಡಕ್ಕೆ ಇಳಿಯಲು ಮತ್ತೊಮ್ಮೆ ದೇವೇಗೌಡರು ರೆಡಿಯಾಗಿದ್ದಾರೆ. ವಿಧಾನಸಭೆಯಿಂದ ರಾಜ್ಯಸಭೆ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್​ಡಿಡಿ ಕಣಕ್ಕಿಳಿಯಲಿದ್ದಾರೆ.

ಜೂನ್ 25ರಂದು ಕುಪೇಂದ್ರ ರೆಡ್ಡಿ ಸ್ಥಾನ ತೆರವಾಗಲಿದೆ. ಹಾಗಾಗಿ ರಾಜ್ಯಸಭೆ ಸ್ಥಾನಕ್ಕೆ ಸ್ಪರ್ಧೆ ಮಾಡುವುದಾಗಿ ಇತ್ತೀಚೆಗೆ ಗೌಡರ ಮನೆಯಲ್ಲಿ ನಡೆದ ಗೌಪ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ರಾಜ್ಯಸಭೆಗೆ ಆಯ್ಕೆ ಆಗಲು 48 ಶಾಸಕರ ಬೆಂಬಲ ಬೇಕು. ಆದರೆ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರ ಬಲ ಕೇವಲ 34 ಇದೆ. ಉಳಿದ 14 ಕಾಂಗ್ರೆಸ್ ಶಾಸಕರ ಬೆಂಬಲ ಪಡೆಯಲು ಜೆಡಿಎಸ್ ತೀರ್ಮಾನಿಸಿದೆ. ಈ ದಿಸೆಯಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಜತೆಗೂ ದೇವೇಗೌಡರು ಮಾತುಕತೆ ನಡೆಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಹೆಚ್.ಡಿ.ದೇವೇಗೌಡರು ಪರಾಭವಗೊಂಡಿದ್ದರು.

 

Published On - 3:09 pm, Tue, 26 May 20