AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಆಟ, ಆಸ್ಪತ್ರೆಗಳ ಚೆಲ್ಲಾಟ! ತಾಯಿ ಜೀವಕ್ಕಾಗಿ ಯುವತಿ ಪರದಾಟ

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಇನ್ನೂ ಏನೆಲ್ಲ ಕಾಟ ಕೊಡುತ್ತದೋ.. ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿರುವ ಯುವತಿಯೊಬ್ಬಳು, ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ತಾಯಿಯನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ಕರುಣಾಜನಕ ಕತೆಯಿದು. ತಾಯಿಗೆ ವಾರಕ್ಕೆ 3 ಬಾರಿ ಡಯಾಲಿಸಿಸ್‌ ಮಾಡಿಸಬೇಕು. ಆದ್ರೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದಾಗಿದೆ. ದುಡ್ಡಿಲ್ಲದಿದ್ರೆ ತಾಯಿಗೆ ಡಯಾಲಿಸಿಸ್‌ ಮಾಡಿಸೋಕ್ಕೆ ಆಗೋಲ್ಲ ಎಂದು ಯುವತಿ ಪರಿತಪಿಸುತ್ತಿದ್ದಾಳೆ. 23 ವರ್ಷದ ದೀಪಿಕಾ ಹೆಸರಿನ ಈ ಯುವತಿ ಎನ್.ಸಿ.ಸಿ ಯಲ್ಲಿ ಪ್ರತಿಭಾನ್ವಿತೆ. ಆದ್ರೆ ವ್ಯಾಸಂಗ ಮುಂದುವರಿಸಿ, ಡಿಗ್ರಿ ಮುಗಿಸಲು ಸಹ ಸಾಧ್ಯವಾಗದೇ […]

ಕೊರೊನಾ ಆಟ, ಆಸ್ಪತ್ರೆಗಳ ಚೆಲ್ಲಾಟ! ತಾಯಿ ಜೀವಕ್ಕಾಗಿ ಯುವತಿ ಪರದಾಟ
ಸಾಧು ಶ್ರೀನಾಥ್​
|

Updated on:May 26, 2020 | 5:55 PM

Share

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಇನ್ನೂ ಏನೆಲ್ಲ ಕಾಟ ಕೊಡುತ್ತದೋ.. ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿರುವ ಯುವತಿಯೊಬ್ಬಳು, ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ತಾಯಿಯನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ಕರುಣಾಜನಕ ಕತೆಯಿದು.

ತಾಯಿಗೆ ವಾರಕ್ಕೆ 3 ಬಾರಿ ಡಯಾಲಿಸಿಸ್‌ ಮಾಡಿಸಬೇಕು. ಆದ್ರೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದಾಗಿದೆ. ದುಡ್ಡಿಲ್ಲದಿದ್ರೆ ತಾಯಿಗೆ ಡಯಾಲಿಸಿಸ್‌ ಮಾಡಿಸೋಕ್ಕೆ ಆಗೋಲ್ಲ ಎಂದು ಯುವತಿ ಪರಿತಪಿಸುತ್ತಿದ್ದಾಳೆ.

23 ವರ್ಷದ ದೀಪಿಕಾ ಹೆಸರಿನ ಈ ಯುವತಿ ಎನ್.ಸಿ.ಸಿ ಯಲ್ಲಿ ಪ್ರತಿಭಾನ್ವಿತೆ. ಆದ್ರೆ ವ್ಯಾಸಂಗ ಮುಂದುವರಿಸಿ, ಡಿಗ್ರಿ ಮುಗಿಸಲು ಸಹ ಸಾಧ್ಯವಾಗದೇ ತೊಳಲಾಡುತ್ತಿದ್ದಾಳೆ.

ಸರ್ಕಾರಿ ಸಿಬ್ಬಂದಿಗೆ ತಾಂತ್ರಿಕ ದೋಷ:  ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿರುವ ದೀಪಿಕಾ, ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ತಾಯಿಯನ್ನ ಉಳಿಸಿಕೊಳ್ಳಲು ಪರದಾಡುತ್ತಿದ್ದಾಳೆ. ತಾಯಿಗೆ ವಾರಕ್ಕೆ 3 ಬಾರಿ ಡಯಾಲಿಸಿಸ್‌ ಮಾಡಿಸಬೇಕು. ಆದ್ರೆ ಕೆಲಸ ಕಳೆದುಕೊಂಡಿದ್ರಿಂದ ಹಣ ಇಲ್ಲದಾಗಿದೆ. ದುಡ್ಡಿಲ್ಲದಿದ್ರೆ ಡಯಾಲಿಸಿಸ್‌ ಇಲ್ಲ ಎನ್ನುತ್ತಿದ್ದಾರೆ ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಯವರು. 5 ವರ್ಷಗಳಿಂದ ಇಲ್ಲೇ ಡಯಾಲಿಸಿಸ್ ಮಾಡಿಸಿಕೊಂಡಿದ್ದಾರೆ. ಆದ್ರೀಗ, ಹಣ ಇಲ್ಲ ಎಂದು ಡಯಾಲಿಸಿಸ್‌ಗೆ ನಿರಾಕರಣೆ ಮಾಡಿದ್ದಾರೆ.

ಇನ್ನು, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೆ ತಾಂತ್ರಿಕ ದೋಷದ ನೆಪ ಹೇಳಿ ಸರ್ಕಾರಿ ಸಿಬ್ಬಂದಿ ಸಾಗಹಾಕಿದ್ದಾರೆ. ಈಗ, ಡಯಾಲಿಸಿಸ್‌ ಮಾಡಿಸದೆ ನಮ್ಮ ತಾಯಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ವರ್ಷದ ಹಿಂದೆ ತಂದೆಯನ್ನೂ ಕಳೆದುಕೊಂಡಿರುವೆ ಎಂದು ದೀಪಿಕಾ ಕಣ್ಣೀರುಹಾಕಿದ್ದಾರೆ.

Published On - 4:41 pm, Tue, 26 May 20

ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ