ಕೊರೊನಾ ಸಂಕಷ್ಟ: ವಿಶ್ವವಿಖ್ಯಾತ ಹಂಪಿ ವಾನರ ನೆರವಿಗೆ ಧಾವಿಸಿದ ಯುವಪಡೆ

ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯಲ್ಲಿನ ಕಲೆ, ಶಿಲ್ಪಕಲೆ, ಸ್ಮಾರಕಗಳನ್ನ ಪ್ರತಿಯೊಬ್ಬರು ನೋಡಲೇಬೇಕು. ಈ ಕಾರಣಕ್ಕಾಗಿಯೇ ದೇಶ-ವಿದೇಶಗಳಿಂದ ವಿಶ್ವವಿಖ್ಯಾತ ಹಂಪಿಗೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದ್ರೆ ಕೊರೊನಾ ಹೆಮ್ಮಾರಿಯಿಂದಾಗಿ ಆಗಿರುವ ಲಾಕ್​ಡೌನ್​ನಿಂದ ಈಡೀ ಹಂಪಿ ಈಗ ಖಾಲಿ ಖಾಲಿ ಎನ್ನುತ್ತಿದೆ. ಆದ್ರೆ ಹಂಪಿಗೆ ಬರೋ ಪ್ರವಾಸಿಗರನ್ನೇ ನಂಬಿಕೊಂಡಿದ್ದ ಸಾವಿರಾರು ಕೋತಿಗಳಿಗೆ ಆಹಾರ ಇಲ್ಲ. ಕೋತಿಗಳ ಸಂಕಷ್ಟವನ್ನ ನೋಡಿದ ಯುವ ಬ್ರಿಗೇಡ್ ಸದಸ್ಯರು ಹಂಪಿಯಲ್ಲಿನ ಕೋತಿಗಳ ನೆರವಿಗೆ ಮುಂದಾಗಿದ್ದಾರೆ. ಲಾಕ್​ಡೌನ್ ಬಳಿಕ ಹಂಪಿ ಖಾಲಿ ಖಾಲಿ: ಹಂಪಿ ವೀಕ್ಷಣೆಗಾಗಿ ದೇಶ-ವಿದೇಶಗಳಿಂದಲೂ ನಿತ್ಯ […]

ಕೊರೊನಾ ಸಂಕಷ್ಟ: ವಿಶ್ವವಿಖ್ಯಾತ ಹಂಪಿ ವಾನರ ನೆರವಿಗೆ ಧಾವಿಸಿದ ಯುವಪಡೆ
Follow us
ಸಾಧು ಶ್ರೀನಾಥ್​
|

Updated on:May 26, 2020 | 2:58 PM

ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯಲ್ಲಿನ ಕಲೆ, ಶಿಲ್ಪಕಲೆ, ಸ್ಮಾರಕಗಳನ್ನ ಪ್ರತಿಯೊಬ್ಬರು ನೋಡಲೇಬೇಕು. ಈ ಕಾರಣಕ್ಕಾಗಿಯೇ ದೇಶ-ವಿದೇಶಗಳಿಂದ ವಿಶ್ವವಿಖ್ಯಾತ ಹಂಪಿಗೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದ್ರೆ ಕೊರೊನಾ ಹೆಮ್ಮಾರಿಯಿಂದಾಗಿ ಆಗಿರುವ ಲಾಕ್​ಡೌನ್​ನಿಂದ ಈಡೀ ಹಂಪಿ ಈಗ ಖಾಲಿ ಖಾಲಿ ಎನ್ನುತ್ತಿದೆ. ಆದ್ರೆ ಹಂಪಿಗೆ ಬರೋ ಪ್ರವಾಸಿಗರನ್ನೇ ನಂಬಿಕೊಂಡಿದ್ದ ಸಾವಿರಾರು ಕೋತಿಗಳಿಗೆ ಆಹಾರ ಇಲ್ಲ. ಕೋತಿಗಳ ಸಂಕಷ್ಟವನ್ನ ನೋಡಿದ ಯುವ ಬ್ರಿಗೇಡ್ ಸದಸ್ಯರು ಹಂಪಿಯಲ್ಲಿನ ಕೋತಿಗಳ ನೆರವಿಗೆ ಮುಂದಾಗಿದ್ದಾರೆ.

ಲಾಕ್​ಡೌನ್ ಬಳಿಕ ಹಂಪಿ ಖಾಲಿ ಖಾಲಿ: ಹಂಪಿ ವೀಕ್ಷಣೆಗಾಗಿ ದೇಶ-ವಿದೇಶಗಳಿಂದಲೂ ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಿದ್ರು. ಇನ್ನೂ ಬೇಸಿಗೆ ಸಮ್ಮರ್​ನಲ್ಲಿ ಅತಿಹೆಚ್ಚು ವಿದೇಶಿಗರು ಹಂಪಿಗೆ ಆಗಮಿಸಿ ಎರಡು ಮೂರು ತಿಂಗಳು ಕಾಲ ಇಲ್ಲಿಯೇ ವಾಸ್ತವ್ಯ ಹೂಡುತ್ತಿದ್ರು. ಇನ್ನೂ ಬೇರೆ-ಬೇರೆ ರಾಜ್ಯ ಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯಲ್ಲಿ ಹಂಪಿಗೆ ಪ್ರವಾಸಿಗರು ಬರುತ್ತಿದ್ರು. ಆದ್ರೆ ಲಾಕ್​ಡೌನ್ ಬಳಿಕ ವಿಶ್ವವಿಖ್ಯಾತ ಹಂಪಿ ಖಾಲಿ ಖಾಲಿಯಾಗಿದೆ. ಪ್ರವಾಸಿಗರಿಲ್ಲದೇ ಹಂಪಿ ಭಣಗುಡುಗುತ್ತಿದೆ.

ಪ್ರತಿ ನಿತ್ಯ ಸಾವಿರಾರು ಕೋತಿಗಳಿಗೆ ಆಹಾರ ವಿತರಣೆ: ಆದ್ರೆ ಪ್ರವಾಸಿಗರು ಕೊಡುವ ಆಹಾರದಲ್ಲಿಯೇ ಜೀವಿಸುತ್ತಿದ್ದ ಹಂಪಿಯಲ್ಲಿನ ಸಾವಿರಾರು ಕೋತಿಗಳ ಪರಿಸ್ಥಿತಿ ಹೇಳತೀರದು. ಹಂಪಿಯಲ್ಲಿ ಅಪಾರ ಸಂಖ್ಯೆಯ ಕೋತಿಗಳಿವೆ. ಪ್ರವಾಸಿಗರು ಕೊಡುತ್ತಿದ್ದ ಆಹಾರವೇ ಇವುಗಳಿಗೆ ಆಧಾರವಾಗಿತ್ತು. ಯಾವಾಗ ಲಾಕ್​ಡೌನ್ ಬಳಿಕ ಪ್ರವಾಸಿಗರ ವೀಕ್ಷಣೆ ಸ್ಥಗಿತವಾಯ್ತೋ ಆವಾಗ ಕೋತಿಗಳು ಆಹಾರ ಇಲ್ಲದೇ ತೊಂದರೆ ಪಡುತ್ತಿದ್ದ ಯಾತನೆ ಹೇಳತೀರದು. ಕೋತಿಗಳ ಸಂಕಷ್ಟವನ್ನರಿತ ಯುವ ಬ್ರಿಗೇಡ್ ಸದಸ್ಯರು ಕೋತಿಗಳ ನೆರವಿಗೆ ಧಾವಿಸಿದ್ದಾರೆ. ಕಳೆದ 63 ದಿನಗಳಿಂದ ಯುವ ಬಿಗ್ರೇಡ್ ತಂಡದ ಸದಸ್ಯರು ಪ್ರತಿ ನಿತ್ಯ ಸಾವಿರಾರು ಕೋತಿಗಳಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ.

ಹಂಪಿಯಲ್ಲಿನ ಸಾವಿರಾರು ವಾನರರನ್ನ ನೋಡುವುದೇ ಒಂದು ರೀತಿಯ ಖುಷಿ. ಪ್ರವಾಸಿಗರ ಬಳಿ ಬರೋ ಹಿಂಡು ಹಿಂಡು ಕೋತಿಗಳು ಪ್ರವಾಸಿಗರು ಕೊಡುವ ಆಹಾರದಿಂದಲೇ ಜೀವಿಸುತ್ತಿದ್ದವು. ಆದ್ರೆ ಈಗ ಹಂಪಿಯಲ್ಲಿ ಪ್ರವಾಸಿಗರು ಇಲ್ಲದ ಕಾರಣ ಯುವ ಬಿಗ್ರೇಡ್ ಸದಸ್ಯರು ಕೊಡುವ ಆಹಾರವೇ ಅವುಗಳಿಗೆ ಆಧಾರವಾಗಿವೆ. ಇನ್ನೂ ಹಂಪಿಯಲ್ಲಿ ಕೋತಿಗಳು ಮಾತ್ರವಲ್ಲದೇ ದನಕರುಗಳಿವೆ. ಈ ದನಕರುಗಳಿಗೂ ಯುವ ಬಿಗ್ರೇಡ್ ಸದಸ್ಯರು ಪ್ರತಿ ನಿತ್ಯ ಮೇವಿನ ವ್ಯವಸ್ಥೆ ಮಾಡುತ್ತಿದ್ದಾರೆ.

ಕಮಲಾಪುರದ ಯುವ ಬ್ರಿಗೇಡ್ ಸದಸ್ಯರಿಂದ ಆಹಾರದ ವ್ಯವಸ್ಥೆ: ಮತ್ತೊಂದೆಡೆ ಹಂಪಿಯ ವಿರೂಪಾಕ್ಷ ದೇವಸ್ಥಾನದ ಬಳಿಯ ಪುಷ್ಕರಣಿಯಲ್ಲಿರುವ ಮೀನುಗಳಿಗೂ ಪ್ರವಾಸಿಗರೇ ಆಹಾರ ಹಾಕುತ್ತಿದ್ರು. ಆದ್ರೆ ಈಗ ಕಳೆದ ಎರಡು ತಿಂಗಳಿಂದ ಯುವ ಬಿಗ್ರೇಡ್ ಸದಸ್ಯರೇ ಪುಷ್ಕರಣಿಯಲ್ಲಿನ ಮೀನುಗಳಿಗೂ ಆಹಾರ ಕೊಡುತ್ತಿದ್ದಾರೆ. ಅಲ್ಲದೇ ಹಂಪಿಯಲ್ಲಿನ ನಿರ್ಗತಿಕರಿಗೂ ನಿತ್ಯ ಊಟದ ಪಾಕೆಟ್ ನೀಡುತ್ತಿದ್ಧಾರೆ.

ಹಂಪಿಯಲ್ಲಿ ಅಪಾರ ಸಂಖ್ಯೆಯಲ್ಲಿ ಕೋತಿಗಳಿವೆ. ಪುಷ್ಕರಣಿಯಲ್ಲಿ ಮೀನುಗಳಿವೆ. ದನಕರುಗಳಿವೆ. ಜೊತೆಗೆ ಪ್ರವಾಸಿಗರನ್ನ ನಂಬಿಕೊಂಡಿದ್ದ ನಿರ್ಗತಿಕರು ಇದ್ದಾರೆ. ಲಾಕ್​ಡೌನ್ ಬಳಿಕ ಇವರೆಲ್ಲರಿಗೂ ಆಹಾರದ ಸಮಸ್ಯೆ ಎದುರಾಯ್ತು. ಕೋತಿಗಳು, ದನುಕರುಗಳ ಮೋಕರೋಧನೆ ನೋಡತೀರದು. ಹೀಗಾಗಿ ಕಮಲಾಪುರದ ಯುವಕರು ಹಾಗೂ ಯುವ ಬ್ರಿಗೇಡ್ ಸದಸ್ಯರು ಸೇರಿಕೊಂಡು ನಿತ್ಯ ಆಹಾರ ವ್ಯವಸ್ಥೆ ಮಾಡುತ್ತಿದ್ದಾರೆ.

ಲಾಕ್​ಡೌನ್ ಪರಿಣಾಮ ವಿಶ್ವವಿಖ್ಯಾತ ಹಂಪಿಯಲ್ಲಿ ಸಾವಿರಾರು ಕೋತಿಗಳು ಆಹಾರ ಇಲ್ಲದೇ ಮೂಕರೋಧನೆ ಅನಭವಿಸಬೇಕಾಗಿತ್ತು. ಆದ್ರೆ ಯುವ ಬಿಗ್ರೇಡ್ ಸದಸ್ಯರು ಮಾಡುತ್ತಿರುವ ಉತ್ತಮ ಕೆಲ್ಸದಿಂದಾಗಿ ಪ್ರವಾಸಿಗರು ಇಲ್ಲದಿದ್ರೂ ಹಂಪಿಯಲ್ಲಿ ಜೀವಿಸುತ್ತಿವೆ. ಮೂಕರೋಧನೆಯಲ್ಲಿದ್ದ ಕೋತಿ-ಜಾನುವಾರುಗಳಿಗೆ ನಿತ್ಯ ಆಹಾರ, ಮೇವಿನ ವ್ಯವಸ್ಥೆ ಮಾಡುತ್ತಿರುವ ಯುವ ಬ್ರಿಗೇಡ್ ಸದಸ್ಯರ ಕಾರ್ಯ ನಿಜಕ್ಕೂ ಮೆಚ್ಚಲೇಬೇಕು.

Published On - 2:18 pm, Tue, 26 May 20