ಬೀಳಿಸೋಲ್ಲ.. ಆದ್ರೆ ಕಚ್ಚಾಟದಿಂದ ಬಿದ್ರೆ ಚುನಾವಣೆ ಅನಿವಾರ್ಯ: ದೇವೇಗೌಡ ಎಚ್ಚರಿಕೆ
ಬೆಂಗಳೂರು: ರಾಜ್ಯ ಸರ್ಕಾರವನ್ನು ನಾವು ಅಸ್ಥಿರಗೊಳಿಸೋದಿಲ್ಲ, ಆದ್ರೆ ಬಿಜೆಪಿಯವರ ಒಳಜಗಳದಿಂದ ಸರ್ಕಾರ ಹೋದ್ರೆ ಆಗ ಚುನಾವಣೆ ಅನಿವಾರ್ಯ ಎನ್ನುವ ಮೂಲಕ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಹೊಸ ಬಾಂಬ್ ಹಾಕಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ದೇವೇಗೌಡ ಅವರು, ರಾಜ್ಯ ಸರ್ಕಾರವನ್ನ ನಾವು ಅಸ್ಥಿರಗೊಳಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಈಗ ಯಾರೂ ಚುನಾವಣೆಗೆ ಹೋಗುವ ಮನಸ್ಥಿತಿಯಲ್ಲಿ ಇಲ್ಲ. ಆದ್ರೆ ಬಿಜೆಪಿಯವರ ಒಳಜಗಳದಿಂದ ಸರ್ಕಾರ ಹೋದ್ರೆ ಚುನಾವಣೆ ಅನಿವಾರ್ಯ ಅಷ್ಟೇ ಎಂದರು. […]
ಬೆಂಗಳೂರು: ರಾಜ್ಯ ಸರ್ಕಾರವನ್ನು ನಾವು ಅಸ್ಥಿರಗೊಳಿಸೋದಿಲ್ಲ, ಆದ್ರೆ ಬಿಜೆಪಿಯವರ ಒಳಜಗಳದಿಂದ ಸರ್ಕಾರ ಹೋದ್ರೆ ಆಗ ಚುನಾವಣೆ ಅನಿವಾರ್ಯ ಎನ್ನುವ ಮೂಲಕ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಹೊಸ ಬಾಂಬ್ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ದೇವೇಗೌಡ ಅವರು, ರಾಜ್ಯ ಸರ್ಕಾರವನ್ನ ನಾವು ಅಸ್ಥಿರಗೊಳಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಈಗ ಯಾರೂ ಚುನಾವಣೆಗೆ ಹೋಗುವ ಮನಸ್ಥಿತಿಯಲ್ಲಿ ಇಲ್ಲ. ಆದ್ರೆ ಬಿಜೆಪಿಯವರ ಒಳಜಗಳದಿಂದ ಸರ್ಕಾರ ಹೋದ್ರೆ ಚುನಾವಣೆ ಅನಿವಾರ್ಯ ಅಷ್ಟೇ ಎಂದರು.
ವೈದ್ಯ ಉಪಕರಣ ಖರೀದಿ ಹಗರಣಕ್ಕೆ ಸರ್ಕಾರ ಉತ್ತರ ಕೊಡಬೇಕು ಕೊವಿಡ್ ವೈದ್ಯ ಉಪಕರಣ ಖರೀದಿಯಲ್ಲಿ ಅಕ್ರಮ ವಿಚಾರದ ಕುರಿತು ಮಾತನಾಡಿದ ದೇವೇಗೌಡರು, ಕಾಂಗ್ರೆಸ್‌ನವರು 2 ಸಾವಿರ ಕೋಟಿ ಆರೋಪ ಮಾಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಉತ್ತರ ಕೊಡಬೇಕಾಗುತ್ತದೆ. ಕೊರೊನಾ ನಿಯಂತ್ರಣ ಬಗ್ಗೆ ಸರ್ಕಾರಕ್ಕೆ ನಮ್ಮ ಸಲಹೆ ಕೊಡ್ತೇವೆ, ಸಲಹೆಗೆ ಸರ್ಕಾರ ಸ್ಪಂದಿಸದಿದ್ರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಡಿಕೆ ಬ್ರದರ್ಸ್ ಆಟಕ್ಕೆ ಸಮಯ ಬಂದಾಗ ಉತ್ತರ ಜೆಡಿಎಸ್ ಕಾರ್ಯಕರ್ತರಿಗೆ ಡಿಕೆ ಬ್ರದರ್ಸ್ ಗಾಳ ಹಾಕುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜೆಡಿಎಸ್ ವರಿಷ್ಠ, ನಾನು ಊಹಾಪೋಹದ ಮಾತುಗಳಿಗೆ ಉತ್ತರ ನೀಡಲ್ಲ. ನನಗೆ ಸಾಕಷ್ಟು ರಾಜಕೀಯದ ಅನುಭವ ಇದೆ. ಏನು ನಡೆಯುತ್ತಿದೆ ಎಂದು ಎಲ್ಲದರ ಬಗ್ಗೆ ನನಗೆ ಗೊತ್ತಿದೆ. ಪಕ್ಷದ ಸಿದ್ಧಾಂತ ಒಪ್ಪಿ ಬರೋದಾದರೆ ಬನ್ನಿ ಎಂದಿದ್ದಾರೆ. ಈ ಬಗ್ಗೆ ಸೂಕ್ತ ಸಂದರ್ಭದಲ್ಲಿ ನಾನು ಮಾತನಾಡುತ್ತೇನೆ ಎಂದು ಹೆಚ್‌ಡಿಡಿ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ಯೋಗೇಶ್ವರ್ ಆರೋಪದಲ್ಲಿ ಹುರುಳಿಲ್ಲ ಬಿಜೆಪಿ ಸರ್ಕಾರಕ್ಕೆ HDK ಬೆಂಬಲ ಬಗ್ಗೆ ಯೋಗೇಶ್ವರ್ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ದೇವೇಗೌಡರು, ಬಿಜೆಪಿಗೆ ಕುಮಾರಸ್ವಾಮಿ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಆದರೆ ಬಿಜೆಪಿ ಸರ್ಕಾರ ಅಸ್ಥಿರಗೊಳಿಸುವುದಿಲ್ಲ ಎಂದಿದ್ದಾರೆ. ಸಿ.ಪಿ.ಯೋಗೇಶ್ವರ್ ಆರೋಪಕ್ಕೆ ಅವರ ಬಳಿ ಸಾಕ್ಷ್ಯ, ಆಧಾರ ಇದೆಯಾ? ಎಂದು ಪ್ರಶ್ನಿಸಿದ ಗೌಡರು, ಕುಮಾರಸ್ವಾಮಿ ಕದ್ದುಮುಚ್ಚಿ ಯಾರನ್ನೂ ಭೇಟಿ ಆಗೋರಲ್ಲ. ಯೋಗೇಶ್ವರ್ ಹಾಗೆಲ್ಲಾ ಲಘುವಾಗಿ ಮಾತನಾಡಬಾರದು ಎಂದು ಕಿಡಿಕಾರಿದರು.
ಆಗಷ್ಟ 4ರಂದು ಜೆಡಿಎಸ್ ಸಭೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಚರ್ಚಿಸಲು ಆಗಸ್ಟ್ 4ರಂದು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಭೆ ನಡೆಸುತ್ತೇವೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ,ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಈ ಬಗ್ಗೆ ಅಂದಿನ ಸಭೆಯಲ್ಲಿ ಮುಂದಿನ ಹೋರಾಟದ ಯಾವರೀತಿ ಇರಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದರು.
ಟಿಪ್ಪು ಪಠ್ಯ ಪುಸ್ತಕ ವಿವಾದ ಸರ್ಕಾರ ಮರುಪರಿಶೀಲಿಸಲಿ ಪಠ್ಯದಿಂದ ಟಿಪ್ಪು ಅಧ್ಯಾಯ ಕೈಬಿಟ್ಟ ವಿಚಾರ ಪ್ರಸ್ತಾಪಿಸಿದ ಮಾಜಿ ಪ್ರಧಾನಿ, ನಾವೆಲ್ಲಾ ಪ್ರಾಥಮಿಕ ಹಂತದಲ್ಲಿ ಟಿಪ್ಪು ಬಗ್ಗೆ ಓದಿದ್ದೇವೆ. ಆದ್ರೆ ಸರ್ಕಾರ ಈಗ ಕೈಬಿಡುವ ನಿರ್ಧರ ತೆಗೆದುಕೊಂಡಿದೆ. ಈ ನಿರ್ಧಾರವನ್ನು ರಾಜ್ಯ ಸರ್ಕಾರ ಪುನರ್ ಪರಿಶೀಲಿಸಬೇಕು ಎಂದು ಬಿಎಸ್‌ವೈ ಸರ್ಕಾರಕ್ಕೆ ದೇವೆಗೌಡ ಆಗ್ರಹಿಸಿದರು.
Published On - 5:21 pm, Fri, 31 July 20