‘ರಾಜಕಾರಣದಲ್ಲಿ ಸಾಲಸೋಲ ಮಾಡೋದು ಸಹಜ, MTB ಬ್ರದರ್’

|

Updated on: Nov 20, 2019 | 6:46 PM

ಮೈಸೂರು: ಉಪಚುನಾವಣೆ ವೇಳೆ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ಸಹಜ. ಆದ್ರೆ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಜಟಾಪಟಿ ಜೋರಾಗಿದೆ. ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ನನ್ನ ಬಳಿ ಹಣ ಪಡೆದಿದ್ದರು. ಇದುವರೆಗೂ ವಾಪಸ್ ನೀಡಿಲ್ಲ ಅಂತಾ ಎಂಟಿಬಿ ನಾಗರಾಜ್ ಆರೋಪಿಸಿದ್ದರು. ರಾಜಕಾರಣದಲ್ಲಿ ಸಾಲ ಸಹಜ:  ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ, ರಾಜಕಾರಣ ಸಾಲ ಮಾಡೋದು ಸಹಜ. ನಾವು ಸಾಲ ಮಾಡುತ್ತೇವೆ. ಅದೇ […]

‘ರಾಜಕಾರಣದಲ್ಲಿ ಸಾಲಸೋಲ ಮಾಡೋದು ಸಹಜ, MTB ಬ್ರದರ್’
Follow us on

ಮೈಸೂರು: ಉಪಚುನಾವಣೆ ವೇಳೆ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ಸಹಜ. ಆದ್ರೆ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಜಟಾಪಟಿ ಜೋರಾಗಿದೆ. ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ನನ್ನ ಬಳಿ ಹಣ ಪಡೆದಿದ್ದರು. ಇದುವರೆಗೂ ವಾಪಸ್ ನೀಡಿಲ್ಲ ಅಂತಾ ಎಂಟಿಬಿ ನಾಗರಾಜ್ ಆರೋಪಿಸಿದ್ದರು.

ರಾಜಕಾರಣದಲ್ಲಿ ಸಾಲ ಸಹಜ: 
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ, ರಾಜಕಾರಣ ಸಾಲ ಮಾಡೋದು ಸಹಜ. ನಾವು ಸಾಲ ಮಾಡುತ್ತೇವೆ. ಅದೇ ರೀತಿ ನಾವು ಸಾಲ ಕೊಟ್ಟಿರುತ್ತೇವೆ. ಅಂತ ವಿಚಾರಗಳ ಬಗ್ಗೆ ಮಾತನಾಡುವುದೇ ಬೇಡ ಬ್ರದರ್ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಬೆನ್ನಿಗೆ ನಿಂತು ಎಂಟಿಬಿಗೆ ಟಾಂಗ್ ನೀಡಿದ್ದಾರೆ.

Published On - 4:56 pm, Wed, 20 November 19