ರಾಧಿಕಾ ಕುರಿತ ಪ್ರಶ್ನೆಗೆ ‘ಯಾರಪ್ಪ ಅವರೆಲ್ಲ? ಅದ್ಯಾರೋ ನಂಗೊತ್ತಿಲ್ಲ’ ಎಂದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 10, 2021 | 5:48 PM

2023ರ ಹೊತ್ತಿಗೆ ಕರ್ನಾಟಕವನ್ನು ಜನತಾ ರಾಜ್ಯ ಮಾಡುವುದು ನಮ್ಮ ಗುರಿ. ಅದಕ್ಕೆ ಏನು ಬೇಕೋ ಅದನ್ನು ಮಾಡುತ್ತೇನೆ. ಉಳಿದ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ರಾಧಿಕಾ ಕುರಿತ ಪ್ರಶ್ನೆಗೆ ‘ಯಾರಪ್ಪ ಅವರೆಲ್ಲ? ಅದ್ಯಾರೋ ನಂಗೊತ್ತಿಲ್ಲ’ ಎಂದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ!
ಎಚ್​.ಡಿ.ಕುಮಾರಸ್ವಾಮಿ
Follow us on

ಮಂಡ್ಯ: ಸದ್ಯ ಹಣಕಾಸು ವ್ಯವಹಾರವೊಂದರಲ್ಲಿ ಸಿಲುಕಿ, ಸಿಸಿಬಿ ವಿಚಾರಣೆಗೆ ಒಳಪಟ್ಟಿರುವ ಸ್ಯಾಂಡಲ್​ವುಡ್ ನಟಿ ರಾಧಿಕಾ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ನಿರಾಕರಿಸಿದರು.

ಇಂದು ಶ್ರೀರಂಗಪಟ್ಟಣದ ನೇರಳೆಕೆರೆ ಗ್ರಾಮಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ಬಳಿ, ರಾಧಿಕಾಗೆ ಸಿಸಿಬಿ ನೋಟಿಸ್​ ಬಂದಿರುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡುತ್ತಿದ್ದಂತೆ, ಯಾರಪ್ಪ ಅವರೆಲ್ಲ? ಅದ್ಯಾರೋ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟೇ ಅಲ್ಲ, ನನಗೆ ಸಂಬಂಧಪಡದ ವಿಚಾರ ಕೇಳಲೇಬೇಡಿ ಎನ್ನುತ್ತ ಅಲ್ಲಿಂದ ಹೊರಟೇಹೋದರು.

ಇನ್ನು 2023ರ ಹೊತ್ತಿಗೆ ಕರ್ನಾಟಕವನ್ನು ಜನತಾ ರಾಜ್ಯ ಮಾಡುವುದು ನಮ್ಮ ಗುರಿ. ಅದಕ್ಕೆ ಏನು ಬೇಕೋ ಅದನ್ನು ಮಾಡುತ್ತೇನೆ. ಉಳಿದ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ಎಂದರು.

ಮುಂದಿನ ಚುನಾವಣೆಗೆ ಇಂದೇ ಪ್ರಣಾಳಿಕೆ ಘೋಷಿಸಿದ HDK

Published On - 3:30 pm, Sun, 10 January 21