AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವರಾಜ್​ ಪ್ರಕರಣದಲ್ಲಿ ಸುಮಾರು 8-10 ಪ್ರಮುಖ ನಟಿಯರು ಭಾಗಿಯಾಗಿದ್ದಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಯುವರಾಜ್​ ಪಕ್ಕಾ ಆರ್​ಎಸ್​ಎಸ್​ ಕಾರ್ಯಕರ್ತ. ಇಂಥವರನ್ನು ಆರ್​ಎಸ್​ಎಸ್​ ದೇಶದ ಹಲವೆಡೆ ಬಿಟ್ಟು, ಕೆಲಸ ಮಾಡಿಸುತ್ತಿದೆ. ಯುವರಾಜ್‌ನಿಂದ ₹400 ಕೋಟಿ ವ್ಯವಹಾರ ನಡೆದಿದೆ. ಈತ ಅಮಿತ್​ ಷಾ ಜತೆ ನೇರ ಸಂಪರ್ಕದಲ್ಲಿದ್ದಾನೆ ಎಂದು ಲಕ್ಷ್ಮಣ್​ ಆರೋಪಿಸಿದ್ದಾರೆ.

ಯುವರಾಜ್​ ಪ್ರಕರಣದಲ್ಲಿ ಸುಮಾರು 8-10 ಪ್ರಮುಖ ನಟಿಯರು ಭಾಗಿಯಾಗಿದ್ದಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರ
Lakshmi Hegde
| Edited By: |

Updated on: Jan 10, 2021 | 3:09 PM

Share

ಮೈಸೂರು: ಸರ್ಕಾರಕ್ಕೆ ಬದ್ಧತೆ ಎಂಬುದು ಇದ್ದರೆ ಯುವರಾಜ್ ಸ್ವಾಮಿಯ ವಂಚನೆ ಪ್ರಕರಣದ ಸಮಗ್ರ ಮಾಹಿತಿಯನ್ನು ಜನರಿಗೆ ತಿಳಿಸಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್​ ಆಗ್ರಹಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುವರಾಜ್​ ಪ್ರಕರಣದಲ್ಲಿ ಸುಮಾರು 8-10 ನಟಿಯರು ಭಾಗಿಯಾಗಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಇದೆ. ಆದರೆ ರಾಧಿಕಾರ ಮಾತ್ರ ಟಾರ್ಗೆಟ್ ಆಗಿದ್ದು ಯಾಕೆ? ಡ್ರಗ್ಸ್ ಕೇಸ್​​ನಲ್ಲೂ ಅಷ್ಟೇ, ಸಂಜನಾ, ರಾಗಿಣಿಯನ್ನು ಮಾತ್ರ ಟಾರ್ಗೆಟ್​ ಮಾಡಿದರು. ಅವರಿಬ್ಬರನ್ನೂ ಮುಂದಿಟ್ಟುಕೊಂಡು ಉಳಿದ ಆರೋಪಿಗಳನ್ನು ಉಳಿಸಿದರು ಎಂದು ಆರೋಪಿಸಿದರು.

ಆರ್​ಎಸ್​ಎಸ್ ಕಾರ್ಯಕರ್ತ ಯುವರಾಜ್​ ಪಕ್ಕಾ ಆರ್​ಎಸ್​ಎಸ್​ ಕಾರ್ಯಕರ್ತ. ಇಂಥವರನ್ನು ಆರ್​ಎಸ್​ಎಸ್​ ದೇಶದ ಹಲವೆಡೆ ಬಿಟ್ಟು, ಕೆಲಸ ಮಾಡಿಸುತ್ತಿದೆ. ಯುವರಾಜ್‌ನಿಂದ ₹400 ಕೋಟಿ ವ್ಯವಹಾರ ನಡೆದಿದೆ. ಈತ ಅಮಿತ್​ ಷಾ ಜತೆ ನೇರ ಸಂಪರ್ಕದಲ್ಲಿದ್ದಾನೆ. ಆದರೂ ಬಿಜೆಪಿಯವರು ತಮಗೆ ಸಂಬಂಧವಿಲ್ಲ ಎನ್ನುತ್ತಾರೆ. ಹಾಗೇ ಯುವರಾಜ್​ ಮತ್ತು ಬಿ.ಎಲ್​. ಸಂತೋಷ್​ ನಡುವಿನ ಸಂಬಂಧವೇನು? ಅವರಿಬ್ಬರ ಫೋನ್ ಕಾಲ್ ಯಾಕೆ ಆಚೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು. ಸಂಪೂರ್ಣ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಎಸ್.ಟಿ.ಸೋಮಶೇಖರ್ ಬಸ್​ಸ್ಟ್ಯಾಂಡ್​ನಲ್ಲಿದ್ದರು ಸಚಿವ ಎಸ್​.ಟಿ.ಸೋಮಶೇಖರ್​ ವಿರುದ್ಧ ವಾಗ್ದಾಳಿ ನಡೆಸಿದ ಲಕ್ಷ್ಮಣ್​, ಎಸ್​.ಟಿ.ಸೋಮಶೇಖರ್​ ಬಸ್​ಸ್ಟ್ಯಾಂಡ್​ನಲ್ಲಿದ್ದವರು. ಈ ಸ್ಥಾನಕ್ಕೆ ತಂದಿದ್ದೇ ಕಾಂಗ್ರೆಸ್​. ಮೈಸೂರಿಗೆ ಬಂದ ಮೇಲೆ ಅವರು ಎಷ್ಟು ಹಣ ತಂದಿದ್ದಾರೆ? ಎಷ್ಟು ಅಭಿವೃದ್ಧಿ ಮಾಡಿದ್ದಾರೆ? ಎಂದು ಪ್ರಶ್ನಿಸಿದರು. ಹಾಗೇ, ನೀವು ಚರ್ಚೆಗೆ ಬನ್ನಿ, ನಿಮ್ಮ ಹಗರಣಗಳನ್ನು ನಾವು ಹೇಳುತ್ತೇವೆ ಎಂದೂ ಸವಾಲು ಹಾಕಿದರು.

ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದಾರೆ 2018-19ರ ಅವಧಿಯಲ್ಲಿ ನಡೆದ ಫೋನ್ ಕದ್ದಾಲಿಕೆ ವಿಚಾರವಾಗಿ ಮಾತನಾಡಿದ ಅವರು, ಫೋನ್​ ಕದ್ದಾಲಿಕೆಗೆ ಸಂಬಂಧಪಟ್ಟಂತೆ ಸಿಬಿಐ ಚಾರ್ಜ್​ಶೀಟ್​ ಸಿದ್ಧಪಡಿಸಿದೆ. ಅಲೋಕ್‌ಕುಮಾರ್ ನಿರ್ದೇಶನದಂತೆ ಫೋನ್ ಕದ್ದಾಲಿಕೆ ಮಾಡಿದ್ದಾಗಿ ಅಧಿಕಾರಿಗಳೇ ತಪ್ಪೊಪ್ಪಿಕೊಂಡಿದ್ದಾರೆ. ಈ ಸಂಬಂಧ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ಮೂವರ ವಿರುದ್ಧ ಸಿಬಿಐ ಆರೋಪಪಟ್ಟಿ ಸಿದ್ಧಪಡಿಸಿದೆ. ಕೋರ್ಟ್‌ಗೆ ಸಲ್ಲಿಸಲು ಸರ್ಕಾರದ ಅನುಮತಿ ಕೇಳಿ 2 ತಿಂಗಳಾಗಿದೆ. ಇದೀಗ ರಾಜ್ಯ ಸರ್ಕಾರ ಫೋನ್​ ಕದ್ದಾಲಿಕೆ ವರದಿ ತಿರಸ್ಕರಿಸಲು ಹೊರಟಿದೆ. ಈಗ ಸಿಬಿಐ ವರದಿಯಲ್ಲಿರುವುದನ್ನು ಬಹಿರಂಗಪಡಿಸಬೇಕು. ವರದಿಯಲ್ಲಿ ಉಲ್ಲೇಖವಾದವರ ವಿರುದ್ಧ FIR ದಾಖಲಿಸಬೇಕು ಎಂದಿದ್ದಾರೆ.

ಕಿರಣ್​ ಬೇಡಿ ವಿರುದ್ಧ ಧರಣಿ ಮುಂದುವರಿಸಿದ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ