ಸರ್ಕಾರದ ನಿರ್ಧಾರಕ್ಕೆ ಕುಮಾರಸ್ವಾಮಿ ಕೆಂಡಾಮಂಡಲ, ಉಗ್ರ ಹೋರಾಟ ಎಚ್ಚರಿಕೆ

|

Updated on: Apr 24, 2020 | 11:28 AM

ಬೆಂಗಳೂರು: ಪಾದರಾಯನಪುರ ಪುಂಡರನ್ನ ರಾಮನಗರಕ್ಕೆ ಶಿಫ್ಟ್ ಮಾಡಿರೋ ಬಗ್ಗೆ ಕುಮಾರಸ್ವಾಮಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ರು. ಟಿವಿ9 ಜೊತೆ ಮಾತನಾಡಿದ ಹೆಚ್​ಡಿಕೆ, ಪಾದರಾಯನಪುರದ ಆರೋಪಿಗಳಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಜೈಲಿನಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಕೂಡ ಕ್ವಾರಂಟೈನ್​ಲಿರಬೇಕೆಂದು ಮನವಿ ಮಾಡಿದ್ರು. ಜೊತೆಗೆ ಜಿಲ್ಲೆಯ ಜನರು ಭಯಪಡುವ ಅಗತ್ಯವಿಲ್ಲ. ಯಾರ ಸಲಹೆ ಕೇಳಿ ಈ ನಿರ್ಧಾರ ಕೈಗೊಂಡ್ರೋ ಗೊತ್ತಿಲ್ಲ ಅಂತಾ ಕಿಡಿಕಾರಿದ್ರು. ಆರೋಪಿಗಳನ್ನ ಸ್ಥಳಾಂತರಿಸದಿದ್ದರೆ ಉಗ್ರ ಹೋರಾಟ! ಇದಿಷ್ಟೇ ಅಲ್ಲದೆ, ರಾಮನಗರದ ಜೈಲಿನಲ್ಲಿರೋ ಆರೋಪಿಗಳನ್ನ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶಿಫ್ಟ್ […]

ಸರ್ಕಾರದ ನಿರ್ಧಾರಕ್ಕೆ ಕುಮಾರಸ್ವಾಮಿ ಕೆಂಡಾಮಂಡಲ, ಉಗ್ರ ಹೋರಾಟ ಎಚ್ಚರಿಕೆ
Follow us on

ಬೆಂಗಳೂರು: ಪಾದರಾಯನಪುರ ಪುಂಡರನ್ನ ರಾಮನಗರಕ್ಕೆ ಶಿಫ್ಟ್ ಮಾಡಿರೋ ಬಗ್ಗೆ ಕುಮಾರಸ್ವಾಮಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ರು. ಟಿವಿ9 ಜೊತೆ ಮಾತನಾಡಿದ ಹೆಚ್​ಡಿಕೆ, ಪಾದರಾಯನಪುರದ ಆರೋಪಿಗಳಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಜೈಲಿನಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಕೂಡ ಕ್ವಾರಂಟೈನ್​ಲಿರಬೇಕೆಂದು ಮನವಿ ಮಾಡಿದ್ರು. ಜೊತೆಗೆ ಜಿಲ್ಲೆಯ ಜನರು ಭಯಪಡುವ ಅಗತ್ಯವಿಲ್ಲ. ಯಾರ ಸಲಹೆ ಕೇಳಿ ಈ ನಿರ್ಧಾರ ಕೈಗೊಂಡ್ರೋ ಗೊತ್ತಿಲ್ಲ ಅಂತಾ ಕಿಡಿಕಾರಿದ್ರು.

ಆರೋಪಿಗಳನ್ನ ಸ್ಥಳಾಂತರಿಸದಿದ್ದರೆ ಉಗ್ರ ಹೋರಾಟ!
ಇದಿಷ್ಟೇ ಅಲ್ಲದೆ, ರಾಮನಗರದ ಜೈಲಿನಲ್ಲಿರೋ ಆರೋಪಿಗಳನ್ನ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶಿಫ್ಟ್ ಮಾಡ್ಬೇಕು, ಇಲ್ಲದಿದ್ರೆ ಇಂದಿನಿಂದ್ಲೇ ಉಗ್ರ ಹೋರಾಟ ಮಾಡ್ತೇನೆ ಎಂದು ಹೆಚ್​ಡಿಕೆ ಟ್ವಿಟ್ಟರ್​ನಲ್ಲಿ ಗುಡುಗಿದ್ದಾರೆ.

ಇತ್ತ ರಾಜ್ಯ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ್, ಪಾದರಾಯನಪುರ ಗಲಾಟೆ ಕೇಸ್​ನಲ್ಲಿ ಅರೆಸ್ಟ್ ಮಾಡಿರೋರನ್ನ ರಾಮನಗರಕ್ಕೆ ಶಿಫ್ಟ್ ಮಾಡದಂತೆ ಗೃಹಸಚಿವರಿಗೆ ಪತ್ರ ಬರೆದಿದ್ರು. ಆದ್ರೆ ಬಸವರಾಜ ಬೊಮ್ಮಾಯಿ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.

ಒಟ್ನಲ್ಲಿ ಸರ್ಕಾರದ ಎಡವಟ್ಟೋ, ಅಥವಾ ಆತುರದ ನಿರ್ಧಾರವೋ ಗೊತ್ತಿಲ್ಲ ಆದ್ರೆ ಗ್ರೀನ್ ಜೋನ್​ನಲ್ಲಿರೋ ರಾಮನಗರ ಜಿಲ್ಲೆಯಲ್ಲೀಗ ಸೋಂಕು ಬಂದಿರೋದು ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಎಲ್ಲಾ ಆರೋಪಿಗಳನ್ನ ಬೇರೆಡೆಗೆ ಶಿಫ್ಟ್ ಮಾಡ್ಬೇಕು ಅನ್ನೋ ಕೂಗು ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೋ ಕಾದು ನೋಡ್ಬೇಕಿದೆ.

Published On - 10:52 am, Fri, 24 April 20