ಅನೈತಿಕ ಸಂಬಂಧ ಶಂಕೆ: ದೇವದುರ್ಗದಲ್ಲಿ ಯುವಕನ ರುಂಡವಿಲ್ಲದ ಮೃತದೇಹ ಪತ್ತೆ

ಜಿಲ್ಲೆಯ ದೇವದುರ್ಗ ತಾಲೂಕಿನ ಚಿತ್ತಲಗುಡ್ಡದ ಬಳಿ ಯುವಕನೊಬ್ಬನ ರುಂಡವಿಲ್ಲದ ಮೃತದೇಹ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಯುವಕನನ್ನು ಕೊಲೆ ಮಾಡಿ ಶವ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.

ಅನೈತಿಕ ಸಂಬಂಧ ಶಂಕೆ: ದೇವದುರ್ಗದಲ್ಲಿ ಯುವಕನ ರುಂಡವಿಲ್ಲದ ಮೃತದೇಹ ಪತ್ತೆ
ಯುವಕನ ರುಂಡವಿಲ್ಲದ ಮೃತದೇಹ ಪತ್ತೆ

Updated on: Jan 28, 2021 | 9:46 PM

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಚಿತ್ತಲಗುಡ್ಡದ ಬಳಿ ಯುವಕನೊಬ್ಬನ ರುಂಡವಿಲ್ಲದ ಮೃತದೇಹ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಯುವಕನನ್ನು ಕೊಲೆ ಮಾಡಿ ಶವ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಸುಮಾರು 20 ವಯಸ್ಸಿನ ಆಸುಪಾಸಿನಲ್ಲಿರುವ ಯುವಕನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ, ನಾರಾಯಣಪುರ ಬಲದಂಡೆ ನಾಲೆಗೆ ಯುವಕನ ರುಂಡವನ್ನು ಹಾಕಲಾಗಿದೆ ಎಂಬ ಮಾತು ಕೇಳಿಬಂದಿದೆ.

ಸಾಲಬಾಧೆಯಿಂದ ಬೇಸತ್ತು.. ಆವನಿ ಬಳಿ ತೋಟದಲ್ಲಿ ಅನ್ನದಾತ ನೇಣಿಗೆ ಶರಣು