ಕೆರೆ ಒತ್ತುವರಿ ಮಾಡಿ ಮಸೀದಿ ನಿರ್ಮಾಣ ಆರೋಪ: ಸರ್ವೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್ ಸೂಚನೆ
ಕನಕಪುರದ ಮೇಡಮಾರನಹಳ್ಳಿ ಕೆರೆಯನ್ನು ಒತ್ತುವರಿ ಮಾಡಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂಬ ಆರೋಪದಡಿ ಹೈಕೋರ್ಟ್ಗೆ PIL ಸಲ್ಲಿಸಲಾಗಿತ್ತು. ಕಬ್ಬಾಳು ನಿವಾಸಿಯಾದ ಅಭಿಷೇಕ್ ಗೌಡ ಎಂಬುವವರಿಂದ ಹೈಕೋರ್ಟ್ಗೆ PIL ಸಲ್ಲಿಕೆಯಾಗಿತ್ತು.
ಬೆಂಗಳೂರು: ಕನಕಪುರದ ಮೇಡಮಾರನಹಳ್ಳಿ ಕೆರೆಯನ್ನು ಒತ್ತುವರಿ ಮಾಡಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂಬ ಆರೋಪದಡಿ ಹೈಕೋರ್ಟ್ಗೆ PIL ಸಲ್ಲಿಸಲಾಗಿತ್ತು. ಕಬ್ಬಾಳು ನಿವಾಸಿಯಾದ ಅಭಿಷೇಕ್ ಗೌಡ ಎಂಬುವವರಿಂದ ಹೈಕೋರ್ಟ್ಗೆ PIL ಸಲ್ಲಿಕೆಯಾಗಿತ್ತು.
ಇದೀಗ, ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್ ಕೆರೆ ಸರ್ವೆಗೆ ಆದೇಶ ನೀಡಿದೆ. ಸರ್ವೆ ನಡೆಸಿ ಕೆರೆ ಒತ್ತುವರಿಯಾಗಿದೆಯೇ ಎಂದು ಪರಿಶೀಲಿಸಲು ಆದೇಶ ನೀಡಿದೆ. ಜೊತೆಗೆ, ಕಟ್ಟಡ ಅಕ್ರಮವಾಗಿ ನಿರ್ಮಾಣವಾಗಿದೆಯೇ ಎಂಬುದರ ವರದಿ ನೀಡಿ ಎಂದು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ಹೈಕೋರ್ಟ್ ಸೂಚನೆ ಕೊಟ್ಟಿದೆ. ಇದಲ್ಲದೆ, PIL ವಿಚಾರಣೆಯನ್ನು ಮಾರ್ಚ್ ಮೊದಲ ವಾರಕ್ಕೆ ಮುಂದೂಡಿದೆ.
ದುರಸ್ತಿ ಕಾರ್ಯ: ಜ.31ರಂದು ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ವ್ಯತ್ಯಯ