ಕೋವಿಡ್​ನಿಂದ ಚೇತರಿಸಿಕೊಂಡವರಲ್ಲಿ ಹೃದಯಾಘಾತ ಭೀತಿ; ಅಧ್ಯಯನಕ್ಕೆ ಮುಂದಾದ ಆರೋಗ್ಯ ಇಲಾಖೆ

| Updated By: ಆಯೇಷಾ ಬಾನು

Updated on: Jun 09, 2022 | 3:43 PM

ಕೊವಿಡ್ನಿಂದ ಚೇತರಿಸಿಕೊಂಡವರಲ್ಲಿ ಹೃದಯಾಘಾತ ಭೀತಿ ಎದುರಾಗಿದೆ. ಸೋಂಕಿನಿಂದ ಗುಣಮುಖರಾದ ಶೇ.5ರಷ್ಟು ಜನರಲ್ಲಿ ಹೃದಯಾಘಾತ ಕಂಡು ಬಂದಿದೆ ಹೀಗಾಗಿ ಈ ಸಂಬಂಧ ಆರೋಗ್ಯ ಇಲಾಖೆ ಅಧ್ಯಯನಕ್ಕೆ ಮುಂದಾಗಿದೆ.

ಕೋವಿಡ್​ನಿಂದ ಚೇತರಿಸಿಕೊಂಡವರಲ್ಲಿ ಹೃದಯಾಘಾತ ಭೀತಿ; ಅಧ್ಯಯನಕ್ಕೆ ಮುಂದಾದ ಆರೋಗ್ಯ ಇಲಾಖೆ
Heart
Follow us on

ಬೆಂಗಳೂರು: ನಿಯಂತ್ರಣದಲ್ಲಿದ್ದ ಕೊರೊನಾ ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಕೊರೊನಾ 4ನೇ ಅಲೆಯ ಭೀತಿ ಎದುರಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಚರ್ಚೆ, ಸಭೆ ನಡೆಸಿ ಮಾಸ್ಕ್ ಕಡ್ಡಾಯಗೊಳಿಸಲು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಇದರ ನಡುವೆ ಮತ್ತೊಂದು ಆತಂಕ ಎದುರಾಗಿದೆ.

ಕೊವಿಡ್ನಿಂದ ಚೇತರಿಸಿಕೊಂಡವರಲ್ಲಿ ಹೃದಯಾಘಾತ ಭೀತಿ ಎದುರಾಗಿದೆ. ಸೋಂಕಿನಿಂದ ಗುಣಮುಖರಾದ ಶೇ.5ರಷ್ಟು ಜನರಲ್ಲಿ ಹೃದಯಾಘಾತ ಕಂಡು ಬಂದಿದೆ ಹೀಗಾಗಿ ಈ ಸಂಬಂಧ ಆರೋಗ್ಯ ಇಲಾಖೆ ಅಧ್ಯಯನಕ್ಕೆ ಮುಂದಾಗಿದೆ. ಈ ಬಗ್ಗೆ ಕೆಲ ಸಂಶೋಧಕರು ಅಧ್ಯಯನಕ್ಕೆ ಮುಂದಾಗಿದ್ದಾರೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಶುರುವಾಯ್ತು ಕೊರೊನಾ 4ನೇ ಅಲೆ ಆತಂಕ! ಮಾರ್ಗಸೂಚಿ ಜಾರಿಗೆ ತಜ್ಞರ ಸಲಹೆ

ಕೋವಿಡ್ನಿಂದ ಕೇವಲ ಶ್ವಾಸಕೋಶದ ಸಮಸ್ಯೆ ಮಾತ್ರ ಅಲ್ಲ, ರಕ್ತನಾಳದ ಸಮಸ್ಯೆ ಕೂಡ ಕಾಣಿಸಿಕೊಂಡಿವೆ. ಇದರಿಂದ ಹೃದಯದ ಮೇಲೆ ಪರಿಣಾಮ ಹೆಚ್ಚಾಗಿದೆ. ಕೋವಿಡ್ ಬಂದು ಹೋದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಂಡು ಬರ್ತಿದೆ. ಹೃದಯದ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವ ಕಾರಣ ಹೃದಯಘಾತ ಉಂಟಾಗುತ್ತದೆ. ಮೆದುಳಿನ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವ ಕಾರಣ ಬ್ರೈನ್ ಸ್ಟ್ರೋಕ್ ಕೂಡ ಆಗಬಹುದು. ಕೋವಿಡ್ ಬಂದು ಹೋದವರಿಗೆಲ್ಲರಿಗೂ ಪರೀಕ್ಷೆ ಅಗತ್ಯವಿಲ್ಲ. ಭಯಭೀತರಾಗುವ ಅಗತ್ಯವಿಲ್ಲ. ಸಕ್ಕರೆ ಖಾಯಿಲೆ ಇದ್ದು ಕೋವಿಡ್ ನಿಂದ ಗುಣಮುಖ ಹೊಂದಿದವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಕ್ಕರೆ ಖಾಯಿಲೆ ಇದ್ದು, 30 ವರ್ಷಕ್ಕಿಂತ ಚಿಕ್ಕವರಿದ್ದರೆ ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ