AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್​ಡಿ ದೇವೇಗೌಡರ ಕುಟುಂಬಸ್ಥರಿಗೆ ಕೋಟಿ ಕೋಟಿ ಸಾಲ ನೀಡಿರುವ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ

ಮಾಜಿ ಪ್ರಧಾನಿ ದೇವೇಗೌಡರ ಕುಟಂಬಸ್ಥರಿಗೆ ಕುಪೇಂದ್ರ ರೆಡ್ಡಿ ಕೋಟಿ- ಕೋಟಿ ಸಾಲ ನೀಡಿದ್ದಾರೆ. ದೇವೇಗೌಡರ ಪುತ್ರ ಹೆಚ್​ಡಿ ರಮೇಶ್​ಗೆ 3.90 ಕೋಟಿ ರೂಪಾಯಿ ಸಾಲ ನೀಡಿದ್ದಾರೆ.

ಹೆಚ್​ಡಿ ದೇವೇಗೌಡರ ಕುಟುಂಬಸ್ಥರಿಗೆ ಕೋಟಿ ಕೋಟಿ ಸಾಲ ನೀಡಿರುವ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ
ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ
TV9 Web
| Edited By: |

Updated on:Jun 09, 2022 | 2:46 PM

Share

ಬೆಂಗಳೂರು: ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ (Kupendra Reddy) ನಾಳೆ (ಜೂನ್ 10) ನಡೆಯುವ ರಾಜ್ಯಸಭಾ ಚುನಾವಣೆಗೆ (Rajya Sabha Polls) ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ತಮ್ಮ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಜೆಡಿಎಸ್ ನಾಯಕರು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡುತ್ತಿದ್ದಾರೆ. ಈ ನಡುವೆ ಕುಪೇಂದ್ರ ರೆಡ್ಡಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಬಹಿರಂಗವಾಗಿದೆ. ಕುಪೇಂದ್ರ ರೆಡ್ಡಿ ರಾಜಕಾರಣಿಗಳಿಗೆ ಕೋಟಿ ಕೋಟಿ ಸಾಲ ನೀಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದ್ದು, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಉಲ್ಲೇಖವಾಗಿದೆ.

ಮಾಜಿ ಪ್ರಧಾನಿ ದೇವೇಗೌಡರ ಕುಟಂಬಸ್ಥರಿಗೆ ಕುಪೇಂದ್ರ ರೆಡ್ಡಿ ಕೋಟಿ- ಕೋಟಿ ಸಾಲ ನೀಡಿದ್ದಾರೆ. ದೇವೇಗೌಡರ ಪುತ್ರ ಹೆಚ್​ಡಿ ರಮೇಶ್​ಗೆ 3.90 ಕೋಟಿ ರೂಪಾಯಿ ಸಾಲ ನೀಡಿದ್ದಾರೆ. ಜೊತೆಗೆ ಹೆಚ್​ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣಗೆ 2 ಕೋಟಿ ರೂಪಾಯಿ, ಹೆಚ್​ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣಗೆ 5.80 ಕೋಟಿ ರೂಪಾಯಿ ನೀಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕೇವಲ ದೇವೇಗೌಡರ ಕುಟುಂಬಕ್ಕೆ ಮಾತ್ರ ಸಾಲ ನೀಡಿಲ್ಲ. ಇವರ ಜೊತೆಗೆ ಶಾಸಕ ಸಿಎಸ್ ಪುಟ್ಟರಾಜು ಮಗನಿಗೆ 6.5 ಕೋಟಿ, ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ಗೆ 1 ಕೋಟಿ, ಕಾಂಗ್ರೆಸ್ ಎಂಎಲ್ಸಿ ಯುಬಿ ವೆಂಕಟೇಶ್​ಗೆ 3.25 ಕೋಟಿ ರೂಪಾಯಿ ಸಾಲ ನೀಡಿದ್ದಾರೆ. ಇನ್ನು ಕುಮಾರಸ್ವಾಮಿ ಒಡೆತನದ ಚೆನ್ನಾಂಬಿಕಾ ಫಿಲ್ಮ್ಸ್ಗೆ 4 ಕೋಟಿ ಸಾಲ ಕೊಟ್ಟಿದ್ದಾರೆ.

ಹಾಸನ ಕ್ಷೇತ್ರದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣಗೆ 1 ಕೋಟಿ ರೂಪಾಯಿ ಸಾಲ ನೀಡಿದ್ದರೆ, ಕಾಂಗ್ರೆಸ್​ನ ಮಾಜಿ ಎಂಎಲ್​ಸಿ ಕೆಸಿ ಕೊಂಡಯ್ಯಗೆ 5 ಲಕ್ಷ ರೂ. ಸಾಲ ನೀಡಿದ್ದಾರೆ.

ಇದನ್ನೂ ಓದಿ
Image
ಗರ್ಭಗೀತೆ: ಮಗು ಗರ್ಭದಲ್ಲಿದ್ದಾಗಲೇ ಕಲಿಕೆ ಆರಂಭಿಸಿ, ಉತ್ತಮ ಪ್ರಜೆಯಾಗಿಸಿ
Image
ಕೋಮುವಾದಿ, ಜಾತಿವಾದಿ ಬಿಜೆಪಿಗೆ ತಕ್ಕ ಉತ್ತರ ನೀಡಬೇಕು; ಕಾಂಗ್ರೆಸ್‌ ಪಕ್ಷದ 2ನೇ ಅಭ್ಯರ್ಥಿಗೆ ಮತ ನೀಡುವಂತೆ ಜೆಡಿಎಸ್ ಶಾಸಕರಿಗೆ ಪತ್ರ ಬರೆದ ಸಿದ್ದರಾಮಯ್ಯ
Image
Ranji Trophy: 9 ಬ್ಯಾಟ್ಸ್​ಮನ್​ಗಳು ಅರ್ಧಶತಕ: ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ
Image
Google Chrome: ಗೂಗಲ್‌ ಕ್ರೋಮ್‌, ಮೊಜಿಲ್ಲಾ ಬಳಕೆದಾರರೇ ಗಮನಿಸಿ: ಸರ್ಕಾರದಿಂದ ಬಂದಿದೆ ಎಚ್ಚರಿಕೆ ಸಂದೇಶ

ಇದನ್ನೂ ಓದಿ: ಕೋಮುವಾದಿ, ಜಾತಿವಾದಿ ಬಿಜೆಪಿಗೆ ತಕ್ಕ ಉತ್ತರ ನೀಡಬೇಕು; ಕಾಂಗ್ರೆಸ್‌ ಪಕ್ಷದ 2ನೇ ಅಭ್ಯರ್ಥಿಗೆ ಮತ ನೀಡುವಂತೆ ಜೆಡಿಎಸ್ ಶಾಸಕರಿಗೆ ಪತ್ರ ಬರೆದ ಸಿದ್ದರಾಮಯ್ಯ

ಕಾಂಗ್ರೆಸ್ ಬೆಂಬಲಕ್ಕೆ ಮನವಿ:

ನಾಳೆ ನಡೆಯುವ ರಾಜ್ಯಸಭಾ ಚುನಾವಣೆಗೆ ಸಿದ್ದರಾಮಯ್ಯ ಕಾಂಗ್ರೆಸ್​ಗೆ ಬೆಂಬಲ ನೀಡುವಂತೆ ಜೆಡಿಎಸ್​ ನಾಯಕರಿಗೆ ಮನವಿ ಮಾಡಿದ್ದಾರೆ. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ನಾವು ಹಲವು ಬಾರಿ ಕಾಂಗ್ರೆಸ್​ಗೆ ಬೆಂಬಲ ನೀಡಿದ್ದೇವೆ. ಈ ಬಾರಿ ಕಾಂಗ್ರೆಸ್ ನಮಗೆ​ ಬೆಂಬಲ ನೀಡಲಿ. ಯಾವುದೇ ಕಾರಣಕ್ಕೂ ನಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿಯನ್ನು ವಾಪಸ್ ತೆಗೆಯುವ ಮಾತಿಲ್ಲ ಅಂತ ಕಡ್ಡಿ ಮುರಿದ ಹಾಗೆ ಹೇಳಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಅ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Thu, 9 June 22