ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಹಾಕುವಂತೆ JDS ಶಾಸಕರಿಗೆ ಪತ್ರ ಬರೆದ ಸಿದ್ದರಾಮಯ್ಯಗೆ ನಾಚಿಕೆ ಆಗಬೇಕು -ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ

ಮೈತ್ರಿ ಸರ್ಕಾರದಲ್ಲಿ ಏನೇನೂ ಅಟ ಆಡಿದ್ರಿ ಗೊತ್ತಿದೆ. ನಿಮಗೆ ಬೇಕಾದ ಖಾತೆಗಳು, ನಿಮಗೆ ಬೇಕಾದ ಅಧಿಕಾರಗಳು, ಸಾಕಷ್ಟು ಒತ್ತಡ ಇದ್ರು ನಾನು ಸುಮ್ಮನೆ ಇದ್ದಿದ್ದು ರೈತರ ಸಾಲ ಮನ್ನ ಮಾಡಲು. ಪಠ್ಯದ ಬಗ್ಗೆ ಈಗ ಧರಣಿ ಕೂತಿದ್ದೀರ

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಹಾಕುವಂತೆ JDS ಶಾಸಕರಿಗೆ ಪತ್ರ ಬರೆದ ಸಿದ್ದರಾಮಯ್ಯಗೆ ನಾಚಿಕೆ ಆಗಬೇಕು -ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ
ಹೆಚ್ ಡಿ ಕುಮಾರಸ್ವಾಮಿ
Follow us
TV9 Web
| Updated By: ಆಯೇಷಾ ಬಾನು

Updated on:Jun 09, 2022 | 1:52 PM

ಬೆಂಗಳೂರು: ನಗರದ ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನ್ನ ಓಪನ್ ಆಹ್ವಾನವನ್ನು ನನ್ನ ವೀಕ್ನೆಸ್ ಅಂದುಕೊಳ್ಳ ಬೇಡಿ. ಸೋನಿಯಾ ಗಾಂಧಿ ಜೊತೆ ಮಾತನಾಡಿ ಅಭ್ಯರ್ಥಿ ಹಾಕಿದ್ವಿ. ನಿಮ್ಮ ನಿಮ್ಮ ಪಕ್ಷದಲ್ಲಿ ತೀರ್ಮಾನ ಮಾಡಿಕೊಂಡ್ರೆ ಅಂದು ತೀರ್ಮಾನನಾ? ನಮ್ಮ ಪಕ್ಷದ ಜೊತೆ ಯಾರಾದರೂ ಮಾತನಾಡಿದ್ದಾರಾ? ನಾವೇನು ನಿಮ್ಮ ಅಡಿ ಆಳುಗಳ. ಕುಮಾರಸ್ವಾಮಿ ನುಡಿ ಮತ್ತುಗಳನ್ನು ಟಿವಿಯಲ್ಲಿ ತೋರಿಸಿದ್ದಿರಾ ಅಂತ ಡಿಕೆಶಿ ಹೇಳಿದ್ದಾರೆ. ಹೌದು ನಾನು ನುಡಿ ಮುತ್ತುಗಳನ್ನು ಹೇಳಿದ್ದು ನಿಜಾ ಎಂದು ಡಿಕೆ ಶಿವಕುಮಾರ್ಗೆ ಹೆಚ್ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಏನೇನೂ ಅಟ ಆಡಿದ್ರಿ ಗೊತ್ತಿದೆ. ನಿಮಗೆ ಬೇಕಾದ ಖಾತೆಗಳು, ನಿಮಗೆ ಬೇಕಾದ ಅಧಿಕಾರಗಳು, ಸಾಕಷ್ಟು ಒತ್ತಡ ಇದ್ರು ನಾನು ಸುಮ್ಮನೆ ಇದ್ದಿದ್ದು ರೈತರ ಸಾಲ ಮನ್ನ ಮಾಡಲು. ಪಠ್ಯದ ಬಗ್ಗೆ ಈಗ ಧರಣಿ ಕೂತಿದ್ದೀರ. ಈಗ ಜೆಡಿಎಸ್ ಶಾಸಕ ಸಂಪರ್ಕ ಬೇಕ. 2016 ರಲ್ಲಿ ಹೈಜಾಕ್ ಮಾಡಿ ಅಲ್ಪಾ ಸಂಖ್ಯಾತ ಅಭ್ಯರ್ಥಿ ಸೋಲಿಸಿದ್ರಿ ಇದೇ ನಾ ಜಾತ್ಯಾತೀತ ಸಿದ್ದರಾಮಯ್ಯನವರೆ, ಡಿಕೆ ಶಿವಕುಮಾರ್ ಅವರೆ. ನೀವು ಎಷ್ಟು ಬಾರಿ ಬೆಂಬಲ ಕೊಟ್ಟಿದ್ದೀರಿ. ನೀವು ದೇವೆಗೌಡರನ್ನು ಮುಖ್ಯಮಂತ್ರಿ ಮಾಡಿದ್ದು 2006 ರಲ್ಲಿ ನಾವು ಬೆಂಬಲ ಕೊಟ್ಟು ಮುಖ್ಯಮಂತ್ರಿ ಆಗಿದ್ದಾರೆ. ಬೇರೆಯವರ ಬಳಿ ನಿಮ್ಮ ಆಟ ಆಡಿ ನನ್ನ ಹತ್ತಿರ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಸಿಐಡಿ ಪೊಲೀಸರಿಂದ ಕುಶಾಲ್​ ಬಂಧನ

ರಾಜ್ಯಸಭಾ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡುವಂತೆ ಸೋನಿಯಾ ಗಾಂಧಿ ಅವರಿಗೆ ನಾವು ಮನವಿ ಮಾಡಿದ್ದೇವೆ. ದೇವೇಗೌಡರು ಮೊದಲು ಸೋನಿಯಾ ಗಾಂಧಿ ಜತೆ ಮಾತಾಡಿದ್ದು ನಂತರ ನೀವು ಅಭ್ಯರ್ಥಿಯನ್ನು ಹಾಕಿದ್ದೀರಿ. ಮೊದಲೇ ಈ ಬಗ್ಗೆ ಚರ್ಚೆ ಮಾಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದರು.

ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ನವರಾ? ಹಲವು ಪಕ್ಷಗಳು ಸೇರಿ ದೇವೇಗೌಡರನ್ನು ಪ್ರಧಾನಿ ಮಾಡಿದ್ದವು. ಕಾಂಗ್ರೆಸ್ ನಡೆ ಬಗ್ಗೆ ಈಗಲೂ ನಾನು ಬಹಿರಂಗ ಚರ್ಚೆಗೆ ಸಿದ್ಧ. ಚುನಾವಣೆ ನಂತರ ಯಾಕೆ ಈಗಲೇ ಚರ್ಚೆಗೆ ಬರಲಿ ಎಂದು ಹೆಚ್ಡಿಕೆ ಕಾಂಗ್ರೆಸ್ಗೆ ಚಾಲೆಂಜ್ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಇನ್ನು ಸಿದ್ದರಾಮಯ್ಯ ಪತ್ರ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಹಾಕುವಂತೆ JDS ಶಾಸಕರಿಗೆ ಪತ್ರ ಬರೆದ ಸಿದ್ದರಾಮಯ್ಯಗೆ ನಾಚಿಕೆ ಆಗಬೇಕು. ನಮ್ಮ ಪಕ್ಷದ ಶಾಸಕರಿಗೆ ಹೇಗೆ ಪತ್ರ ಬರೆಯುತ್ತೀರಿ. ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ಟೀಕೆ ಮಾಡಿದ್ದೀರಿ. ಒಂದು ಕಾಲದಲ್ಲಿ ಸಿದ್ದರಾಮಯ್ಯ ಬಿಜೆಪಿಗೆ ಟವೆಲ್ ಹಾಕಿದ್ದರು. ಆತ್ಮಸಾಕ್ಷಿ ಇದ್ದರೆ ಸತ್ಯ ಹೇಳಿ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಳುವಾದ ಕಾರು ಪತ್ತೆಯಾದ ಮೇಲೆ ಸ್ವಂತಕ್ಕೆ ಬಳಸಿದ ದಾವಣಗೆರೆ ಪೇದೆ ಕಾರು ಮಾಲೀಕ ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾನೆ!

ಕಾಂಗ್ರೆಸ್ ಕ್ರಾಸ್ ವೋಟಿಂಗ್ ಮಾಡಿಸಿದರು ಗೆಲ್ಲಲು ಸಾಧ್ಯವಿಲ್ಲ. ಬಿಜೆಪಿ ಗೆಲ್ಲಲು ಮಾಡುತಿದ್ದಾರೆ. ನಮಗೆ ಕ್ರಾಸ್ ವೋಟಿಂಗ್ ಆತಂಕ ಭಯ ಇಲ್ಲ. ನಮ್ಮ 32 ಶಾಸಕರು ನಮ್ಮ ಜೊತೆ ಇದ್ದಾರೆ. ಮುಂದಿನ ಚುನಾವಣೆ ಇರುವ ವರೆಗೆ ನಮ್ಮ ಶಾಸಕರು ನಮ್ಮ ಜೊತೆ ಇರುತ್ತಿನಿ ಅಂತ ಹೇಳಿದ್ದಾರೆ. ಬೇರೆ ಪಕ್ಷದವರು ನನ್ನ ಸಂಪರ್ಕದಲ್ಲಿ ಯಾರು ಇಲ್ಲ. ನನ್ನ ಆತ್ಮೀಯ ಕೆಲ ಕಾಂಗ್ರೆಸ್ ಶಾಸಕರಿಗೆ ನಮಗೆ ಎರಡು ಪ್ರಾಸ್ಥಸ್ಯದ ಮತ ನೀಡಲು ಮನವಿ ಮಾಡಿದ್ದೀನಿ. ಎರಡು ಕಡೆಯಿಂದ ಬಂದರೆ ಮಾತುಕತೆ ಮಾಡಬೇಕು. ಒಂದು ಕಡೆಯಿಂದ ಸಾಧ್ಯವಿಲ್ಲ. ಅವರು ಜೆಡಿಎಸ್ ಮುಗಿಸಬೇಕು ಅಂತ ಇದ್ದಾರೆ. ಅವರಿಗೆ ಬಿಜೆಪಿಗೆ ಗೆದ್ದರು ಪರವಾಗಿಲ್ಲ ಎಂದರು.

Published On - 1:52 pm, Thu, 9 June 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ