545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಸಿಐಡಿ ಪೊಲೀಸರಿಂದ ಕುಶಾಲ್​ ಬಂಧನ

ಒಎಂಆರ್ ​ಶೀಟ್ ತಿದ್ದಿದ್ದ ಆರೋಪದಡಿ ಕುಶಾಲ್​ ಅರೆಸ್ಟ್ ಮಾಡಿದ್ದು, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಸಿಐಡಿ ಪೊಲೀಸರಿಂದ ಕುಶಾಲ್​ ಬಂಧನ
ಸಾಂದರ್ಭಿಕ ಚಿತ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jun 09, 2022 | 1:36 PM

ಬೆಂಗಳೂರು: 545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧ ಮೊದಲ ಯಾಂರ್ಕ ಪಡೆದಿದ್ದ  ಕುಶಾಲ್​ನನ್ನ ಸಿಐಡಿ ಪೊಲೀಸರು ಬಂಧನ ಮಾಡಿದ್ದಾರೆ. ಒಎಂಆರ್ ​ಶೀಟ್ ತಿದ್ದಿದ್ದ ಆರೋಪದಡಿ ಕುಶಾಲ್​ ಅರೆಸ್ಟ್ ಮಾಡಿದ್ದು, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನೇಮಕಾತಿಯಲ್ಲಿ ದರ್ಶನ್ ಗೌಡ ಅಕ್ರಮವೆಸಗಿರುವುದು ದೃಢ

545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ದರ್ಶನ್ ಗೌಡ ಅಕ್ರಮವೆಸಗಿರುವುದು ದೃಢವಾಗಿದೆ. ಎಫ್​ಎಸ್​​ಎಲ್​ ವರದಿಯಲ್ಲಿ ಅಭ್ಯರ್ಥಿ ದರ್ಶನ್ ಅಕ್ರಮದ ಸತ್ಯ ಬಹಿರಂಗವಾಗಿದ್ದು, ಪರೀಕ್ಷೆಯಲ್ಲಿ ಉತ್ತರ ಬರೆಯದೆ ದರ್ಶನ್ ಗೌಡ ಯಾಂರ್ಕ​ ಬಂದಿದ್ದ. ಪರೀಕ್ಷೆ ದಿನ ಸಂಪೂರ್ಣ ಗೊತ್ತಿದ್ದ ಕೆಲವು ಉತ್ತರ ಮಾತ್ರ ಬರೆದಿದ್ದ. ಉಳಿದ ಜಾಗದಲ್ಲಿ ಹಾಗೆ ಬಿಟ್ಟು ಉತ್ತರ ಪತ್ರಿಕೆ ಕೊಟ್ಟು ಹೋಗಿದ್ದ. ನೇಮಕಾತಿ ವಿಭಾಗದಲ್ಲೇ ಆರೋಪಿಯ ಉತ್ತರ ಪತ್ರಿಕೆ ತಿದ್ದಿದ್ದಾರೆ. ಖಾಲಿ ಉತ್ತರ ಪತ್ರಿಕೆಯನ್ನು ದರ್ಶನ್ ಗೌಡ ಕೊಟ್ಟು ಹೋಗಿದ್ದು, ಬಳಿಕ ಒಎಂಆರ್​ ಶೀಟ್ ನಂಬರ್ ತಿಳಿಸಿದ್ದ.

ಇದನ್ನೂ ಓದಿ: EC on President Election 2022 ಇಂದು ಮಧ್ಯಾಹ್ನ 3 ಗಂಟೆಗೆ ರಾಷ್ಟ್ರಪತಿ ಚುನಾವಣೆ ದಿನಾಂಕ ಪ್ರಕಟ

ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುವವರ ಜೊತೆಗೆ ಡೀಲ್ ಮಾಡಿಕೊಂಡಿದ್ದು, ಡೀಲ್​ನಲ್ಲಿ ಓರ್ವ ಮಧ್ಯವರ್ತಿ ಸಹ ಭಾಗಿಯಾಗಿದ್ದ. ಸುಮಾರು 80 ಲಕ್ಷ ಹಣ ನೀಡಿ ದರ್ಶನ್ ಗೌಡ ಆಯ್ಕೆಯಾಗಿದ್ದು, ನೇಮಕಾತಿ ವಿಭಾಗದಲ್ಲಿ ಉತ್ತರ ಪತ್ರಿಕೆ ತಿದ್ದಲಾಗಿತ್ತು. ಬಳಿಕ ಕೀ ಆನ್ಸರ್ ನೋಡಿ ಮತ್ತೆ ಕಾರ್ಬನ್ ಕಾಪಿ ತಿದ್ದಿದ್ದ. ಸದ್ಯ ಎಫ್​ಎಸ್​ಎಲ್ ವರದಿಯಲ್ಲಿ ಅಕ್ರಮವೆಸಗಿರುವುದು ಬಯಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ದರ್ಶನ್ ಗೌಡನನ್ನ ಸಿಐಡಿ ಬಂಧಿಸಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.