Google Chrome: ಗೂಗಲ್‌ ಕ್ರೋಮ್‌, ಮೊಜಿಲ್ಲಾ ಬಳಕೆದಾರರೇ ಗಮನಿಸಿ: ಸರ್ಕಾರದಿಂದ ಬಂದಿದೆ ಎಚ್ಚರಿಕೆ ಸಂದೇಶ

Google Chrome, Mozilla Firefox: ಕ್ರೋಮ್ ಮತ್ತು ಕೆಲವು ಮೊಜಿಲ್ಲಾ ಉತ್ಪನ್ನಗಳಲ್ಲಿ ಹಲವಾರು ದೌರ್ಬಲ್ಯಗಳನ್ನ ಪತ್ತೆ ಮಾಡಲಾಗಿದೆ. ಸಿಇಆರ್ಟಿ-ಇನ್ ಈ ದೌರ್ಬಲ್ಯಗಳು ಹ್ಯಾಕರ್‌ಗಳಿಗೆ ಎಲ್ಲಾ ಬಳಕೆದಾರರ ಡೇಟಾಗೆ ಪ್ರವೇಶವನ್ನ ಒದಗಿಸುತ್ತಿವೆ ಎಂಬ ಮಾಹಿತಿಯನ್ನು ತಿಳಿಸಿದೆ.

Google Chrome: ಗೂಗಲ್‌ ಕ್ರೋಮ್‌, ಮೊಜಿಲ್ಲಾ ಬಳಕೆದಾರರೇ ಗಮನಿಸಿ: ಸರ್ಕಾರದಿಂದ ಬಂದಿದೆ ಎಚ್ಚರಿಕೆ ಸಂದೇಶ
Google Chrome, Mozilla Firefox
Follow us
TV9 Web
| Updated By: Vinay Bhat

Updated on: Jun 09, 2022 | 2:23 PM

ಪ್ರಸಿದ್ಧ ವೆಬ್ ಬ್ರೌಸರ್​ಗಳಾದ ಗೂಗಲ್ ಕ್ರೋಮ್ (Google Chrome) ಮತ್ತು ಮೊಜಿಲ್ಲಾದಲ್ಲಿ (Mozilla Firefox) ಭದ್ರತಾ ಲೋಪವೊಂದು ಕಂಡುಬಂದಿದ್ದು, ಕೂಡಲೇ ಅಪ್‌ಡೇಟ್ ಮಾಡಿಕೊಳ್ಳುವಂತೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (ಸರ್ಟ್–ಇನ್) ಎಚ್ಚರಿಕೆ ನೀಡಿದೆ. ಕ್ರೋಮ್ ಮತ್ತು ಕೆಲವು ಮೊಜಿಲ್ಲಾ ಉತ್ಪನ್ನಗಳಲ್ಲಿ ಹಲವಾರು ದೌರ್ಬಲ್ಯಗಳನ್ನ ಪತ್ತೆ ಮಾಡಲಾಗಿದೆ. ಸಿಇಆರ್ಟಿ-ಇನ್ ಈ ದೌರ್ಬಲ್ಯಗಳು ಹ್ಯಾಕರ್‌ಗಳಿಗೆ (Hack) ಎಲ್ಲಾ ಬಳಕೆದಾರರ ಡೇಟಾಗೆ ಪ್ರವೇಶವನ್ನ ಒದಗಿಸುತ್ತಿವೆ. ಎಲ್ಲಾ ಭದ್ರತಾ ಕಾರ್ಯವಿಧಾನಗಳನ್ನ ಬೈಪಾಸ್ ಮಾಡುವ ಮೂಲಕ ಅನಿಯಂತ್ರಿತ ಕೋಡ್‌ಗಳನ್ನ ಸಹ ಕಾರ್ಯಗತಗೊಳಿಸುತ್ತಿವೆ ಎಂಬ ಮಾಹಿತಿಯನ್ನು ಸರ್ಟ್–ಇನ್ ತಿಳಿಸಿದೆ.

ಈಗಾಗಲೇ ಗೂಗಲ್‌ ಕ್ರೋಮ್‌ ನಲ್ಲಿ ಹಲವು ದೋ‍ಷಗಳನ್ನು CERT-In ಪತ್ತೆ ಹಚ್ಚಿದೆ. CVE-2021-43527, CVE-2022-1489, CVE-2022-1633, CVE-202-1636, CVE-2022-1859, CVE-2022-1867, ಮತ್ತು C20 Google ನಿಂದ ಹಲವು ದೋಷಗಳನ್ನು ಪತ್ತೆ ಹಚ್ಚಲಾಗಿದೆ. ಈ ಎಲ್ಲಾ ದೋಷಗಳನ್ನು ಟೆಕ್ ದೈತ್ಯ ಗೂಗಲ್‌ ಕೂಡ ಒಪ್ಪಿಕೊಂಡಿದೆ. ಇನ್ನು ಈ ದೋಷಗಳಿಂದ ರಕ್ಷಿಸಲು ಕ್ರೋಮ್‌ OS ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಲು ಗೂಗಲ್‌ ಕಂಪನಿ ಬಳಕೆದಾರರಿಗೆ ಹೇಳಿದೆ. ಈ ದುರ್ಬಲತೆಗಳು ಬಳಕೆದಾರರ ಡೇಟಾವನ್ನು ಹ್ಯಾಕರ್‌ಗಳಿಗೆ ಸಿಗುವಂತೆ ಮಾಡಲಿದೆ ಎಂದು ಹೇಳಿದೆ.

Oppo K10 5G: 48MP ಕ್ಯಾಮೆರಾ, 5000mAh ಬ್ಯಾಟರಿ: ಕೇವಲ 17,499 ರೂ. ಗೆ ಒಪ್ಪೋ K10 5G ರಿಲೀಸ್

ಇದನ್ನೂ ಓದಿ
Image
WhatsApp: ವಾಟ್ಸ್​ಆ್ಯಪ್​ನಲ್ಲಿರುವ ಈ ಆಯ್ಕೆ ಬಗ್ಗೆ ಗೊತ್ತಿದೆಯಾ?
Image
Xiaomi: ಸ್ಮಾರ್ಟ್​ಫೋನ್​ ಬಳಕೆದಾರರಿಗೆ ವಿಶೇಷ ಕೊಡುಗೆ ಪ್ರಕಟಿಸಿದ ಶವುಮಿ ​
Image
Moto G82 5G: ಭರ್ಜರಿ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ: ಭಾರತದಲ್ಲಿ ಮೋಟೋ G82 ಸ್ಮಾರ್ಟ್‌ಫೋನ್‌ ಬಿಡುಗಡೆ
Image
Realme GT Neo 3T: ಮಾರುಕಟ್ಟೆಗೆ ಬಂದೇ ಬಿಡ್ತು ರಿಯಲ್‌ ಮಿ GT ನಿಯೋ 3T: ಬೆಲೆ ಎಷ್ಟು ಗೊತ್ತೇ?

ಇದಲ್ಲದೆ, ಸಿಇಆರ್ಟಿ-ಇನ್ 101 ರ ಮೊದಲು ಮೊಜಿಲ್ಲಾ ಫೈರ್ಫಾಕ್ಸ್ ಐಒಎಸ್ ಆವೃತ್ತಿಯಲ್ಲಿ, 91.10 ಕ್ಕಿಂತ ಮೊದಲು ಮೊಜಿಲ್ಲಾ ಫೈರ್ಫಾಕ್ಸ್ ಥಂಡರ್ಬರ್ಡ್ ಆವೃತ್ತಿ, 91.10 ಕ್ಕಿಂತ ಮೊದಲು ಮೊಜಿಲ್ಲಾ ಫೈರ್ಫಾಕ್ಸ್ ಇಎಸ್ಆರ್ ಆವೃತ್ತಿ ಮತ್ತು 101 ಕ್ಕಿಂತ ಮೊದಲು ಮೊಜಿಲ್ಲಾ ಫೈರ್ಫಾಕ್ಸ್ ಆವೃತ್ತಿಯಲ್ಲಿ ಪತ್ತೆ ಮಾಡಿದ ದೋಷಗಳಾಗಿವೆ. ಎಲ್ಲಾ ದೌರ್ಬಲ್ಯಗಳನ್ನ ಮೊಜಿಲ್ಲಾ ‘ಹೆಚ್ಚು’ ಎಂದು ರೇಟ್ ಮಾಡಿದೆ. ಈ ದೌರ್ಬಲ್ಯಗಳು ರಿಮೋಟ್ ದಾಳಿಕೋರನಿಗೆ ಸೂಕ್ಷ್ಮ ಮಾಹಿತಿಯನ್ನ ಬಹಿರಂಗ ಪಡಿಸಲು, ಭದ್ರತಾ ನಿರ್ಬಂಧಗಳನ್ನ ಬೈಪಾಸ್ ಮಾಡಲು, ಅನಿಯಂತ್ರಿತ ಕೋಡ್ ಕಾರ್ಯಗತಗೊಳಿಸಲು, ಸ್ಪೂಫಿಂಗ್ ದಾಳಿಗಳನ್ನ ನಡೆಸಲು ಮತ್ತು ಉದ್ದೇಶಿತ ವ್ಯವಸ್ಥೆಯ ಮೇಲೆ ಸೇವೆಯ ನಿರಾಕರಣೆ (ಡಿಒಎಸ್) ದಾಳಿಗಳನ್ನು ಉಂಟು ಮಾಡಲು ಅನುವು ಮಾಡಿಕೊಟ್ಟಿದೆ ಎಂದು ಕಂಪನಿ ಹೇಳಿದೆ.

CERT-Inನ ಪ್ರಕಾರ, ಈ ದುರ್ಬಲತೆಗಳು ಹ್ಯಾಕರ್‌ಗಳು ಬಳಕೆದಾರರ ಡೇಟಾವನ್ನು ಪ್ರವೇಶಿಸಲು ಸಾಧ್ಯವಾಗಲಿದೆ. ಹ್ಯಾಕರ್‌ಗಳ ಕಾರಣದಿಂದಾಗಿ ಬಳಕೆದಾರರು ಮಾಹಿತಿ ವ್ಯವಸ್ಥೆಗಳು, ಡಿವೈಸ್‌ಗಳು ಅಥವಾ ಇತರ ಸಂಪನ್ಮೂಲಗಳನ್ನು ಪ್ರವೇಶಿಸಲು ಸಾಧ್ಯವಾಗದಿದ್ದಾಗ ಸೇವೆಯ ನಿರಾಕರಣೆ (DoS) ದಾಳಿ ಸಂಭವಿಸುತ್ತದೆ. ಇಂತಹ ದಾಳಿಗಳನ್ನು ಬಳಸಿಕೊಂಡು ಬಳಕೆದಾರರ ಇಮೇಲ್, ವೆಬ್‌ಸೈಟ್‌ಗಳು, ಆನ್‌ಲೈನ್ ಖಾತೆಗಳನ್ನು ಹ್ಯಾಕ್‌ ಮಾಡವುದು ಸುಲಭವಾಗಲಿದೆ ಎಂದು CERT-In ಹೇಳಿಕೊಂಡಿದೆ.

ಕ್ರೋಮ್ ಬ್ರೌಸರ್ ಅಪ್‌ಡೇಟ್ ಮಾಡುವುದು ಹೇಗೆ?:

  • ಡೆಸ್ಕ್‌ಟಾಪ್ ಕಂಪ್ಯೂಟರ್ ಬಳಕೆದಾರರು ಗೂಗಲ್ ಕ್ರೋಮ್ ಬ್ರೌಸರ್ ತೆರೆಯಿರಿ.
  • ಬಲ ತುದಿ ಮೇಲ್ಭಾಗದಲ್ಲಿರುವ ಮೂರು ಚುಕ್ಕಿಗಳ ಮೆನು ಆಯ್ಕೆ (Customize and control Google Chrome) ಕ್ಲಿಕ್ ಮಾಡಿ.
  • ನಂತರ ಸೆಟ್ಟಿಂಗ್ಸ್ ತೆರೆಯಿರಿ.
  • ಬಳಿಕ, ಅಬೌಟ್ ಕ್ರೋಮ್ ಓಪನ್ ಮಾಡಿ.
  • ಅಲ್ಲಿ ಇರುವ ಗೂಗಲ್ ಕ್ರೋಮ್ ಅಪ್‌ಡೇಟ್ ನೌ ಎಂದಿರುವುದನ್ನು ಕ್ಲಿಕ್ ಮಾಡಿ.
  • ಅಪ್‌ಡೇಟ್ ಆದ ಬಳಿಕ, ರೀಲಾಂಚ್ ಮಾಡಿ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ