Microsoft Office: ಮೈಕ್ರೋಸಾಫ್ಟ್ ಆಫೀಸ್ ಮೇಲೆ ಹ್ಯಾಕರ್ಗಳ ಕಣ್ಣು: ನಿಮ್ಮ ಪಿಸಿಯನ್ನು ತಕ್ಷಣವೇ ಹೀಗೆ ಮಾಡಿ
ಈ ವೈರಸ್ (Virus) ಆವರಿಸಿಕೊಂಡ ನಂತರ ಮೈಕ್ರೋಸಾಫ್ಟ್ ವರ್ಡ್ ಡಾಕ್ಯುಮೆಂಟ್ ಅನ್ನು ಬಳಸಿಕೊಂಡು, ಹ್ಯಾಕರ್‌ಗಳು "ಫೋಲಿನಾ" (Follina) ಎಂಬ ದುರ್ಬಲತೆಯ ಮೂಲಕ ಕೋಡ್ ಅನ್ನು ಕಾರ್ಯಗತಗೊಳಿಸಬಹುದು ಎಂದು ಹೇಳಿದೆ.
ಮೈಕ್ರೋಸಾಫ್ಟ್ ಆಫೀಸ್ನ (Microsoft Office) ದುರ್ಬಲತೆಯ ಲಾಭವನ್ನು ಹೊಸ ಹ್ಯಾಕಿಂಗ್ ಗುಂಪೊಂದು ಪಡೆಯುತ್ತಿದೆ ಎಂದು ವರದಿಯಾಗಿದೆ. ಈ ಬಗ್ಗೆ nao_sec ಎಂಬ ಸಂಶೋಧನಾ ಗುಂಪು ಮಾಹಿತಿ ನೀಡದ್ದು ಹೊಸ ಹೊಸ ನ್ಯೂನ್ಯತೆಯನ್ನು ಗುರುತಿಸಿದೆ. ಅಲ್ಲದೆ ಇದರ ಬಗ್ಗೆ ಮೈಕ್ರೋಸಾಫ್ಟ್ ಅಥವಾ ಯಾವುದೇ ಆಂಟಿ-ವೈರಸ್ ಮಾರಾಟಗಾರರಿಗೆ ತಿಳಿದಿರಲಿಲ್ಲ ಎಂದು ಹೇಳಿದೆ. ಈ ವೈರಸ್ (Virus) ಆವರಿಸಿಕೊಂಡ ನಂತರ ಮೈಕ್ರೋಸಾಫ್ಟ್ ವರ್ಡ್ ಡಾಕ್ಯುಮೆಂಟ್ ಅನ್ನು ಬಳಸಿಕೊಂಡು, ಹ್ಯಾಕರ್‌ಗಳು “ಫೋಲಿನಾ” (Follina) ಎಂಬ ದುರ್ಬಲತೆಯ ಮೂಲಕ ಕೋಡ್ ಅನ್ನು ಕಾರ್ಯಗತಗೊಳಿಸಬಹುದು ಎಂದು ಹೇಳಿದೆ. ನೀವು ಕಳೆದ ಕೆಲವು ದಿನಗಳಲ್ಲಿ ದುರುದ್ದೇಶಪೂರಿತ ವರ್ಡ್ ಡಾಕ್ಯುಮೆಂಟ್ ಅನ್ನು ತೆರೆದಿದ್ದರೆ ಫೋಲಿನಾ ವೈರಸ್ ಆಟೆಕ್ ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ.
ಫೋಲಿನಾ ಎಷ್ಟು ಅಪಾಯಕಾರಿ?:
ಈ ಹೊಸ ವೈರಸ್ ಅಟೋಮೆಟಿಕ್ ಆಗಿ ಕಮಾಂಡ್ಸ್ ಅನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಹ್ಯಾಕರ್‌ಗಳು ಪ್ರೋಗ್ರಾಂಗಳನ್ನು ಸ್ಥಾಪಿಸಬಹುದು ಮತ್ತು ಅಳಿಸಬಹುದು ಜೊತೆಗೆ ಡೇಟಾವನ್ನು ವೀಕ್ಷಿಸಬಹುದು ಮತ್ತು ಮಾರ್ಪಡಿಸಬಹುದು ಅಲ್ಲದೆ ನಮ್ಮ ವೈಯಕ್ತಿಕ ಮಾಹಿತಿ ಕಲೆಹಾಕಿ ಹೊಸ ಖಾತೆಗಳನ್ನು ರಚಿಸಬಹುದು ಎಂದು ವರದಿಯಾಗಿದೆ.
ಮೈಕ್ರೋಸಾಫ್ಟ್ನ ಯಾವ ವರ್ಷನ್ ಮೇಲೆ ಪರಿಣಾಮ ಬೀರುತ್ತವೆ?: ಟೋಕಿಯೋ ಮೂಲದ ಸಂಶೋಧನಾ ಗುಂಪಿನ ಪ್ರಕಾರ, ಮೈಕ್ರೋಸಾಫ್ಟ್ ಆಫೀಸ್ 2013 ಮತ್ತು 2021ರ ಆವೃತ್ತಿ ಫೋಲಿನಾ ದಾಳಿಗೆ ಗುರಿಯಾಗುತ್ತವೆ. Windows 10 ಮತ್ತು 11 ನಲ್ಲಿ Microsoft 365 ನ ಪರವಾನಗಿ ಆವೃತ್ತಿಗಳು ಸಹ ಸುರಕ್ಷಿತವಾಗಿಲ್ಲ ಎಂದು ಹೇಳಿದೆ.
Interesting maldoc was submitted from Belarus. It uses Word’s external link to load the HTML and then uses the “ms-msdt” scheme to execute PowerShell code.https://t.co/hTdAfHOUx3 pic.twitter.com/rVSb02ZTwt
— nao_sec (@nao_sec) May 27, 2022
ಇನ್ನು ಈ ವಿಚಾರವನ್ನು ಮೈಕ್ರೋಸಾಫ್ಟ್ ಒಪ್ಪಿಕೊಂಡಿದೆ ಕೂಡ. ಆದರೆ ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಫೋಲಿನಾವನ್ನು ತೊಡೆದುಹಾಕಲು ಯಾವುದೇ ಮಾರ್ಗವಿಲ್ಲ ಎಂಬುದು ಕೆಟ್ಟ ಸುದ್ದಿ. ಫೋಲಿನಾಗೆ ಸಂಭಾವ್ಯ ಡೇಟಾ ನಷ್ಟವನ್ನು ನಿಭಾಯಿಸಲು ಬಳಕೆದಾರರಿಗೆ ಸಹಾಯ ಮಾಡಲು, ಮೈಕ್ರೋಸಾಫ್ಟ್ ನಿಭಾಯಿಸಲು ಮಾರ್ಗಸೂಚಿಗಳ ಗುಂಪನ್ನು ಪೂರೈಸಿದೆ.
ನೀವೇನು ಮಾಡಬೇಕು?:
- ನೀವು ಈ ದುರ್ಬಲತೆಯ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಮೈಕ್ರೋಸಾಫ್ಟ್ ಬೆಂಬಲ ಡಯಾಗ್ನೋಸ್ಟಿಕ್ಸ್ ಟೂಲ್ (MSDT) URL ಪ್ರೋಟೋಕಾಲ್ ಅನ್ನು ನಿಷ್ಕ್ರಿಯಗೊಳಿಸಿ. ಇದಕ್ಕಾಗಿ ಈ ಕೆಳಗಿನ ಮಾರ್ಗ ಅನುಸರಿಸಿ.
- ಮೊದಲು ರನ್ ಕಮಾಂಡ್ನಲ್ಲಿ Administrator ಗೆ ಹೋಗಿರಿ
- ನಂತರ ಹೀಗೆ ಟೈಪ್ ಮಾಡಿ. “reg export HKEY_CLASSES_ROOTms-msdt filename” – ಇಲ್ಲಿ filename ಎಂದಿರುವುದರಲ್ಲಿ ನೀವು ಯಾವ ಫೈಲ್ಗೆ ಕೊಟ್ಟಿರುವ ಹೆಸರನ್ನು ಹಾಕಿ.
- ಈ ಕಮಾಂಡ್ ಅನ್ನು ಒತ್ತಿದ ನಂತರ HKEY_CLASSES_ROOTms-msdt /f ಈ ರೀತಿ ಟೈಪ್ ಮಾಡಿ ಎಂಟರ್ ಒತ್ತಿರಿ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ