Apple Event: ಆಪಲ್ iOS 16, ಹೊಸ ಮ್ಯಾಕ್‌ಬುಕ್ ಅನಾವರಣ: ಇದರಲ್ಲಿದೆ ಅಚ್ಚರಿ ಫೀಚರ್ಸ್
iOS 16 announced at WWDC 2022: ಆಪಲ್ ತನ್ನ ಐಫೋನ್‌ಗಳಿಗಾಗಿ ಬಹಿನಿರೀಕ್ಷಿತ iOS 16 ಘೋಷಿಸಿದೆ. ಹೊಸ ಈ ಓಎಸ್ ಈ ಹಿಂದಿನ ಓಎಸ್‌ಗಳಿಗಿಂತ ಸಾಕಷ್ಟು ಅಪ್‌ಡೇಟ್ ಫೀಚರ್ಗಳನ್ನು ಪಡೆದಿದೆ. ಇದರ ಜೊತೆಗೆ ಹೊಸ M2 ಚಿಪ್‌ಸೆಟ್ ಅನ್ನು ಅನಾವರಣಗೊಳಿಸಿದೆ.
ಆಪಲ್ (Apple) ಸಂಸ್ಥೆಯ ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್ (WWDC) 2022 ಈವೆಂಟ್ ಪ್ರಾರಂಭಗೊಂಡಿದ್ದು ಮೊದಲ ದಿನವೇ ತನ್ನ ಬಳಕೆದಾರರಿಗೆ ಸಾಕಷ್ಟು ಖುಷಿ ನೀಡಿದೆ. ಆಪಲ್ ತನ್ನ ಐಫೋನ್‌ಗಳಿಗಾಗಿ ಬಹಿನಿರೀಕ್ಷಿತ iOS 16 ಘೋಷಿಸಿದೆ. ಹೊಸ ಈ ಓಎಸ್ ಈ ಹಿಂದಿನ ಓಎಸ್‌ಗಳಿಗಿಂತ ಸಾಕಷ್ಟು ಅಪ್‌ಡೇಟ್ ಫೀಚರ್ಗಳನ್ನು ಪಡೆದಿದೆ. ಮುಖ್ಯವಾಗಿ ಲಾಕ್-ಸ್ಕ್ರೀನ್, ಫೋಕಸ್, ಮೆಸೆಜ್‌ಗಳು, ಶೇರ್‌ಪ್ಲೇ, ಲೈವ್ ಟೆಕ್ಸ್ಟ್ ಸೇರಿದಂತೆ ಕೆಲವು ಕುತೂಹಲ ಫೀಚರ್ಸ್ ಒಳಗೊಂಡಿದೆ. ಇದರ ಜೊತೆಗೆ ಹೊಸ M2 ಚಿಪ್‌ಸೆಟ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಚಿಪ್‌ಸೆಟ್‌ನಲ್ಲಿ ರನ್ ಆಗುವ ಮೊದಲ ಎರಡು ಕಂಪ್ಯೂಟರ್‌ಗಳಾದ ಮ್ಯಾಕ್‌ಬುಕ್ ಏರ್ (2022), ಮತ್ತು 13 ಇಂಚಿನ ಮ್ಯಾಕ್‌ಬುಕ್ ಪ್ರೊ (2022) ಪರಿಚಯಿಸಿದೆ. ಇದರಲ್ಲಿ ಮ್ಯಾಕ್‌ಬುಕ್ ಏರ್ ಕಂಪನಿಯ ಮ್ಯಾಕ್‌ಬುಕ್ ಏರ್ ಲ್ಯಾಪ್‌ಟಾಪ್‌ನ ಮೊದಲ ರಿಫ್ರೆಶ್ ಆಗಿದೆ. ಇನ್ನು ಮ್ಯಾಕ್‌ಬುಕ್ ಏರ್ (2022) ಮತ್ತು ಮ್ಯಾಕ್‌ಬುಕ್ ಪ್ರೊ (2022) ಎರಡೂ ಕೂಡ 13 ಇಂಚಿನ ಎಲ್‌ಸಿಡಿ ಡಿಸ್‌ಪ್ಲೆಯೊಂದಿಗೆ ಬರುತ್ತದೆ.
iOS 16 ಹೇಗಿದೆ?:
ಆಪಲ್ ಘೋಷಿಸಿರುವ ಹೊಸ ಐಓಎಸ್ 16, ಐಪ್ಯಾಡ್ ಓಎಸ್, ವಾಚ್ಓಎಸ್ ಮತ್ತು ಮ್ಯಾಕ್ಓಎಸ್ ಬೀಟಾ ಡೆವಲಪರ್‌ಗಳಿಗೆ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ ಎಂದು ಕಂಪನಿ ಹೇಳಿದೆ. ಹೊಸ ಓಎಸ್ ಸರಣಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಲು ಆಪಲ್ ಮುಂದಾಗಿದ್ದು, ನೂತನ ಫೀಚರ್ಗಳ ಕುರಿತು ಆಪಲ್ ಸಿಇಒ ಟಿಮ್ ಕುಕ್ ಮತ್ತು ಅವರ ತಂಡದವರು ಸಮಾವೇಶದಲ್ಲಿ ವಿವರಿಸಿದರು. ಹೊಸ ಓಎಸ್ ಅಪ್‌ಡೇಟ್‌ಗಳು ಯಾವೆಲ್ಲ ಡಿವೈಸ್‌ಗಳಿಗೆ ಲಭ್ಯವಾಗಲಿವೆ ಮತ್ತು ಹೆಚ್ಚುವರಿ ಸೇರ್ಪಡೆಯಾಗಲಿರುವ ವೈಶಿಷ್ಟ್ಯಗಳ ಕುರಿತು ಪಟ್ಟಿ ಕೂಡ ಬಿಡುಗಡೆ ಮಾಡಲಾಗಿದೆ.
OnePlus 9 Pro: ಶಾಕಿಂಗ್: ಒನ್‌ಪ್ಲಸ್ 9 ಪ್ರೊ ಫೋನ್ ಬೆಲೆಯಲ್ಲಿ ದಿಢೀರ್ ಇಳಿಕೆ: ಈ ಆಫರ್ ಮಿಸ್ ಮಾಡ್ಬೇಡಿ
ಇನ್ನು ಬಳಕೆದಾರರು iOS 16-ಚಾಲಿತ ಸಾಧನಗಳಲ್ಲಿ ಕಸ್ಟಮೈಸ್ ಮಾಡಿದ ಲಾಕ್‌ಸ್ಕ್ರೀನ್‌ಗಳೊಂದಿಗೆ ಪ್ರತ್ಯೇಕ ಫೋಕಸ್‌ಗಳನ್ನು ಹೊಂದಬಹುದು. ಅಂತೆಯೆ ಆಪಲ್ ಸಂದೇಶಗಳಿಗೆ ಮೂರು ಹೊಸ ವೈಶಿಷ್ಟ್ಯಗಳನ್ನು ತರುತ್ತಿದೆ, ಇದರಲ್ಲಿ ಸಂದೇಶಗಳನ್ನು ಸಂಪಾದಿಸುವ ಸಾಮರ್ಥ್ಯ, ಕಳುಹಿಸಿದ ಸಂದೇಶಗಳನ್ನು ಮರುಪಡೆಯಲು ಸಂದೇಶಗಳನ್ನು ರದ್ದುಗೊಳಿಸುವ ಸಾಮರ್ಥ್ಯ ಮತ್ತು ಸಂದೇಶದ ಥ್ರೆಡ್ ಅನ್ನು ಓದಲಾಗಿದೆ ಎಂದು ಗುರುತಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಆಪಲ್ ಶೇರ್‌ಪ್ಲೇ ಮೂಲಕ ಬಳಕೆದಾರರಿಗೆ ಸಂದೇಶಗಳಿಂದ ನೇರವಾಗಿ ಶೇರ್‌ಪ್ಲೇ ಬಳಸಿ ವಿವರಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಐಒಎಸ್ 16 ನಲ್ಲಿ ಫ್ಯಾಮಿಲಿ ಶೇರಿಂಗ್ ಎಂಬ ಆಯ್ಕೆ ಕೂಡ ಇರಲಿದ್ದು ಈ ಮೂಲಕ ಪೋಷಕರು ತಮ್ಮ ಮಕ್ಕಳ ಅಪ್ಲಿಕೇಶನ್‌ಗಳಿಗೆ ವಯಸ್ಸಿಗೆ ಸೂಕ್ತವಾದ ನಿರ್ಬಂಧಗಳನ್ನು ಹೊಂದಿಸಲು ಸಾಧ್ಯವಾಗುತ್ತದೆ. ಈ ಫೀಚರ್ ಅನ್ನು ಬಳಸಿಕೊಂಡು ಅವರು ಹೊಸ ಸಾಧನವನ್ನು ಸಹ ಹೊಂದಿಸಬಹುದು. ಆಪಲ್ ಐಫೋನ್‌ಗಳಿಗೆ ಆನ್-ಡಿವೈಸ್ ಡಿಕ್ಟೇಶನ್ ಅನ್ನು ತರುತ್ತಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ಧ್ವನಿ ಮತ್ತು ಸ್ಪರ್ಶದ ನಡುವೆ ಏಕಕಾಲದಲ್ಲಿ ಚಲಿಸಲು ಅನುವು ಮಾಡಿಕೊಡುತ್ತದೆ.
ಆಪಲ್ ಮ್ಯಾಕ್‌ಬುಕ್ ಏರ್ 2022:
ಆಪಲ್ ತನ್ನ ಈವೆಂಟ್ನ ಮೊದಲ ದಿನ ಬಿಡುಗಡೆ ಮಾಡಿರುವ ಮ್ಯಾಕ್‌ಬುಕ್ ಏರ್ 2022 M2 ಚಿಪ್‌ಸೆಟ್ ಅನ್ನು ಹೊಂದಿದೆ. ಇದು ಮೊದಲ ತಲೆಮಾರಿನ M1 ಆಪಲ್ ಸಿಲಿಕಾನ್ ಚಿಪ್‌ನ ಸುಧಾರಿತ ಆವೃತ್ತಿಯಾಗಿದೆ. ಈ ಹೊಸ ಚಿಪ್‌ಸೆಟ್ ಹಿಂದಿನ ಚಿಪ್‌ಸೆಟ್‌ಗಿಂತ 18% ಸುಧಾರಿತ CPU ಕಾರ್ಯಕ್ಷಮತೆ ಮತ್ತು 35% GPU ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಲ್ಯಾಪ್‌ಟಾಪ್ 1080p ಕ್ಯಾಮೆರಾವನ್ನು ಹೊಂದಿದೆ. 67W USB ಟೈಪ್-ಸಿ ಪವರ್ ಅಡಾಪ್ಟರ್‌ನೊಂದಿಗೆ 30 ನಿಮಿಷಗಳಲ್ಲಿ ಡಿವೈಸ್ ಅನ್ನು 50% ವೇಗವಾಗಿ ಚಾರ್ಜ್ ಮಾಡುತ್ತದೆ. ಇದರ ಬೆಲೆ $1,199, ಅಂದರೆ ಭಾರತದಲ್ಲಿ ಅಂದಾಜು 93,300 ರೂ. ಎನ್ನಬಹುದು.
ಆಪಲ್ ಮ್ಯಾಕ್‌ಬುಕ್ ಪ್ರೊ 2022:
ಮ್ಯಾಕ್‌ಬುಕ್ ಪ್ರೊ 2022 ಕೂಡ ಹೊಸ M2 ಚಿಪ್‌ಸೆಟ್ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್ P3 ಕಲರ್ ಬೆಂಬಲದೊಂದಿಗೆ 500 ನಿಟ್ಸ್ ಬ್ರೈಟ್‌ನೆಸ್ ಅನ್ನು ನೀಡಲಿದೆ. ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್ ಸಿಂಗಲ್ ಚಾರ್ಜ್‌ನಲ್ಲಿ 20 ಗಂಟೆಗಳ ಕಾಲ ಉಪಯೋಗಿಸಬಹುದಾಗಿದೆ. ಆಪಲ್ ಮ್ಯಾಕ್‌ಬುಕ್ ಪ್ರೊ 2022 ಬೆಲೆ $1,299 (ಭಾರತದಲ್ಲಿ ಅಂದಾಜು 1,01,000 ರೂ.). ಆಪಲ್ ಸಂಸ್ಥೆಯ ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್ (WWDC) 2022 ಈವೆಂಟ್ ಜೂನ್ 6ಕ್ಕೆ ಪ್ರಾರಂಭವಾಗಿದ್ದು, ಐದು ದಿನಗಳವರೆಗೆ ಮುಂದುವರಿಯಲಿದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ