WhatsApp: ಬಳಕೆದಾರರ ಸುರಕ್ಷತೆಗೆ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟ ವಾಟ್ಸ್‌ಆ್ಯಪ್: ಏನದು ನೋಡಿ
WhatsApp Double Verification System: ಇದೀಗ ಬಳಕೆದಾರರು ವಾಟ್ಸ್‌ಆ್ಯಪ್ ಅಕೌಂಟ್‌ಗೆ ಲಾಗ್ ಇನ್ ಮಾಡುವುದಕ್ಕೆ ಹೆಚ್ಚುವರಿ ಭದ್ರತೆಯ ಫೀಚರ್ಸ್ ಪರಿಚಯಿಸಲು ಮುಂದಾಗಿದೆ. ಅಂದರೆ ವಾಟ್ಸ್‌ಆ್ಯಪ್ ಡಬಲ್ ವೆರಿಫಿಕೇಶನ್ ಕೋಡ್ ಅನ್ನು ಕೇಳಲಿದೆ.
ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆ್ಯಪ್ (WhatsApp) ಈಗಾಗಲೇ ಹೊಸ ಹೊಸ ಫೀಚರ್ಗಳನ್ನು ಪರಿಚಯಿಸುತ್ತಿದೆ. ಇತ್ತೀಚೆಗಷ್ಟೆ ಮೆಸೇಜ್ ರಿಯಾಕ್ಷನ್ (Message Reaction) ಸೇರಿದಂತೆ ಕೆಲ ಅಮೂಲ್ಯ ವಿಶೇಷತೆಗಳನ್ನು ಪರಿಚಯಿಸಿದ್ದ ವಾಟ್ಸ್ಆ್ಯಪ್ನಲ್ಲಿ ಸಾಲು ಸಾಲು ಹೊಸ ಆಯ್ಕೆಗಳು ಬರಲು ಪರೀಕ್ಷಾ ಹಂತದಲ್ಲಿದೆ. ಎರಡು ದಿನಗಳ ಹಿಂದೆಯಷ್ಟೆ ವಾಟ್ಸ್‌ಆ್ಯಪ್, ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ಆಯ್ಕೆ ಗ್ರಾಹಕರಿಗೆ ಒದಗಿಸುವುದಾಗಿ ಹೇಳಿತ್ತು. ಅಲ್ಲದೆ ಡಿಲೀಟ್ ಆದ ಚಾಟ್ ಅನ್ನು ಮರಳಿಸುವ ಅನ್ಡು ಆಯ್ಕೆ ನೀಡುವುದಾಗಿ ಹೇಳಿತ್ತು. ಇದೀಗ ಬಳಕೆದಾರರು ವಾಟ್ಸ್‌ಆ್ಯಪ್ ಅಕೌಂಟ್‌ಗೆ ಲಾಗ್ ಇನ್ ಮಾಡುವುದಕ್ಕೆ ಹೆಚ್ಚುವರಿ ಭದ್ರತೆಯ ಫೀಚರ್ಸ್ ಪರಿಚಯಿಸಲು ಮುಂದಾಗಿದೆ.
ಅಂದರೆ ವಾಟ್ಸ್‌ಆ್ಯಪ್ ಡಬಲ್ ವೆರಿಫಿಕೇಶನ್ ಕೋಡ್ ಅನ್ನು ಕೇಳಲಿದೆ. SMS ಮೂಲಕ ಕಳುಹಿಸಲಾದ ವೆರಿಫಿಕೇಶನ್ ಕೋಡ್ ಹೊರತುಪಡಿಸಿ ನಿಮಗೆ ಹೆಚ್ಚುವರಿ ಪರಿಶೀಲನೆ ಕೋಡ್ ಕೇಳಲಿದೆ. ಇದರಿಂದ ನಿಮ್ಮ ವಾಟ್ಸ್‌ಆ್ಯಪ್ ಅಕೌಂಟ್ ಫೋನ್ ನಂಬರ್ ಅನ್ನು ಈಗಾಗಲೇ ಮತ್ತೊಂದು ಫೋನ್‌ನಲ್ಲಿ ಬಳಸುತ್ತಿದ್ದರೆ, ನಿಮ್ಮ ಖಾತೆಯು ನಿಮ್ಮ ನಿಯಂತ್ರಣದಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡಲಿದೆ.
ಇಂದಿನಿಂದ Apple WWDC 2022 ಈವೆಂಟ್ ಪ್ರಾರಂಭ: iOS 16 ಬಿಡುಗಡೆ ಆಗುವ ನಿರೀಕ್ಷೆ
ಹೆಚ್ಚುವರಿ ಭದ್ರತೆಗಾಗಿ ನೀವು ಕೋಡ್ ಕಳುಹಿಸುವ ಮೊದಲು ಟೈಮರ್ ಮುಗಿಯುವವರೆಗೆ ಕಾಯಬೇಕಾಗುತ್ತದೆ. ಆದರೆ ನೀವು ಕೋಡ್ ಅನ್ನು ಸ್ವೀಕರಿಸಿದಾಗ, ಅದನ್ನು ನಮೂದಿಸುವ ಮೂಲಕ ನಿಮ್ಮ ಖಾತೆಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಈ ಹೊಸ ವೆರಿಫಿಕೇಶನ್ ಫೀಚರ್ಸ್‌ನಿಂದಾಗಿ ವಾಟ್ಸ್‌ಆ್ಯಪ್ ಬಳಕೆದಾರರ ಖಾತೆಗಳಿಗೆ ಅನಧಿಕೃತ ಪ್ರವೇಶವನ್ನು ತಡೆಯಲು ಸಾಧ್ಯವಾಗಲಿದೆ.
ಇನ್ನು ವಾಟ್ಸ್ಆ್ಯಪ್ನಲ್ಲಿ ನೀವು ಮೆಸೇಜ್ ಒಂದನ್ನು ಡಿಲೀಟ್ ಮಾಡಿದರೆ ಅದನ್ನು ಅನ್ಡು ಮಾಡುವ ಆಯ್ಕೆ ನಿಮಗೆ ಸಿಗಲಿದೆ. ಹೆಚ್ಚಿನ ಬಾರಿ ಬಳಕೆದಾರರು ಮೆಸೇಜ್ ಡಿಲೀಟ್ ಮಾಡಲು ಹೊರಟಾಗ ಡಿಲೀಟ್ ಫಾರ್ ಎವರಿವರ್ ಬದಲು ಡಿಲೀಟ್ ಫಾರ್ ಮಿ ಒತ್ತಿ ಬಿಡುತ್ತಾರೆ. ವಾಟ್ಸ್ಆ್ಯಪ್ನ ಈ ಹೊಸ ಅನ್ಡು ಬಟನ್ ಇದಕ್ಕೆ ಸಹಕಾರಿ ಆಗಲಿದೆ. ಸದ್ಯದಲ್ಲೇ ಈ ಆಯ್ಕೆ ಎಲ್ಲ ಬಳಕೆದಾರರಿಗೆ ಸಿಗಲಿದೆಯಂತೆ. ವಾಟ್ಸ್‌ಆ್ಯಪ್ ಬೇಟಾ ವರ್ಷನ್ನಲ್ಲಿರುವ ಈ ಆಯ್ಕೆ ಬಗ್ಗೆ ಸ್ಕ್ರೀನ್ ಶಾಟ್ ಒಂದಿದ್ದು, ಇದರ ಪ್ರಕಾರ ನೀವು ಡಿಲೀಟ್ ಫಾರ್ ಮಿ ಆಯ್ಕೆಯನ್ನು ಒತ್ತಿದ ತಕ್ಷಣ ಮೇಲಿನ ಭಾಗದಲ್ಲಿ ಈ ಮೆಸೇಜ್ ಅನ್ನು ಅನ್ಡು ಮಾಡಬೇಕೆ ಎಂಬ ಪಾಪ್-ಅಪ್ ಆಯ್ಕೆ ಕಾಣಲಿದೆ. ಈಗಾಗಲೇ ಟೆಲಿಗ್ರಾಮ್ನಲ್ಲಿ ಈ ಅಪ್ಡೇಟ್ ನೀಡಲಾಗಿದೆ.
ಅಂತೆಯೆ ವಾಟ್ಸ್ಆ್ಯಪ್ನ ಬೀಟಾ ಆವೃತ್ತಿಯಲ್ಲಿ ಎಡಿಟ್ ಬಟನನ್ನು ಪರೀಕ್ಷಿಸುತ್ತಿದೆ. ಪ್ರಸ್ತುತ, ವಾಟ್ಸ್ಆ್ಯಪ್ನಲ್ಲಿ ಮೀಸಲಾದ ಎಡಿಟ್ ಆಯ್ಕೆ ಇಲ್ಲ. ಒಮ್ಮೆ ಕಳುಹಿಸಿದ ಮೆಸೇಜ ಅನ್ನು ಡಿಲೀಟ್ ಮಾತ್ರ ಮಾಡಬಹುದು, ಆದರೆ ಎಡಿಟ್ ಮಾಡಲು ಸಾಧ್ಯವಿಲ್ಲ. ಸದ್ಯ ಮುಂಬರುವ ವೈಶಿಷ್ಟ್ಯವನ್ನು ಬಳಸಿ ಮೆಸೇಜ್ ಕಳುಹಿಸಿದ ನಂತರ ಅವುಗಳನ್ನು ಎಡಿಟ್ ಮಾಡಲು ಸಾಧ್ಯವಾಗಿಸುತ್ತದೆ. ಎಲ್ಲಾ ವಾಟ್ಸ್‌ಆ್ಯಪ್ ಸಂಬಂಧಿತ ಬೆಳವಣಿಗೆಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ Wabetainfo ಈ ವೈಶಿಷ್ಟ್ಯವನ್ನು ಗುರುತಿಸಿದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Mon, 6 June 22