ರಾಜ್ಯಸಭಾ ಚುನಾವಣೆ: ಪಕ್ಷದ ಸದಸ್ಯರಿಗೆ ವ್ಹಿಪ್ ಜಾರಿ ಮಾಡಿದ ಬಳಿಕ ಬೊಮ್ಮಾಯಿ ಹೊಂದಾಣಿಗೆ ಬಗ್ಗೆ ಸುಳಿವು ನೀಡಲಿಲ್ಲ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಕಾದು ನೋಡಿ ಎಂಬ ಹಾರಿಕೆಯ ಉತ್ತರ ನೀಡಿದರೆ ಹೊರತು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿ(ಎಸ್) ನಾಯಕರ ಜೊತೆ ನಡೆದ ಮಾತುಕತೆಯ ವಿವರ ಬಿಚ್ಚಿಡಲಿಲ್ಲ.
Bengaluru: ಶುಕ್ರವಾರ ಜೂನ್ 10 ರಂದು ನಡೆಯುವ ರಾಜ್ಯ ಸಭೆ ಚುನಾವಣೆ (RS Polls) ಕನ್ನಡಿಗರಿಗೆ ಸಸ್ಪೆನ್ಸ್-ಥ್ರಿಲ್ಲರ್ ಆಗಿ ಪರಿಣಮಿಸುತ್ತಿದೆ ಮಾರಾಯ್ರೇ. ರಾಜ್ಯದಿಂದ ರಾಜ್ಯಸಭೆಗೆ ಹೋಗುವ ನಾಯಕ ಯಾರಾಗಬಹುದು ಅನ್ನೋದರ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಖಾಸಗಿ ಹೋಟೇಲೊಂದರಲ್ಲಿ ಗುರುವಾರ ಬೆಳಗ್ಗೆ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಬಳಿಕ ಮಾತಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಹ ಕಾದು ನೋಡಿ ಎಂಬ ಹಾರಿಕೆಯ ಉತ್ತರ ನೀಡಿದರೆ ಹೊರತು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಜೆಡಿ(ಎಸ್) ನಾಯಕರ ಜೊತೆ ನಡೆದ ಮಾತುಕತೆಯ ವಿವರ ಬಿಚ್ಚಿಡಲಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Jun 09, 2022 11:05 AM
Latest Videos