ಕತೆ-ಕಾದಂಬರಿ ಬರೆಯುವಷ್ಟು ವ್ಯವಧಾನ ಇಲ್ಲ, ಬರಹಗಾರರಿಗೆ ಕಥಾವಸ್ತುವಾಗಿ ಲಭ್ಯಗುತ್ತಿದ್ದೇನೆ, ಅಷ್ಟೇ ಸಾಕು: ಸುದೀಪ್

ಕತೆ-ಕಾದಂಬರಿ ಬರೆಯುವಷ್ಟು ವ್ಯವಧಾನ ಇಲ್ಲ, ಬರಹಗಾರರಿಗೆ ಕಥಾವಸ್ತುವಾಗಿ ಲಭ್ಯಗುತ್ತಿದ್ದೇನೆ, ಅಷ್ಟೇ ಸಾಕು: ಸುದೀಪ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jun 09, 2022 | 12:46 PM

ಈ ಸಂದರ್ಭದಲ್ಲಿ ಮಾತಾಡಿದ ಸುದೀಪ್, ನನಗೆ ಪುಸ್ತಕ ಬರೆಯುವಷ್ಟು ಪುರುಸೊತ್ತಾಗಲೀ, ವ್ಯವಧಾನವಾಗಲೀ ಇಲ್ಲ, ಅದರೆ ಬರೆಯುವವರಿಗೆ ಕಥಾವಸ್ತುವಾಗಿ ಲಭ್ಯವಾಗುತ್ತಿದ್ದೇನೆ, ನಂಗೆ ಅಷ್ಟು ಸಾಕು ಅಂತ ಹೇಳಿದರು.

ಬೆಂಗಳೂರಲ್ಲಿ ಗುರುವಾರ ನಡೆದ ಕನ್ನಡ ಉದಯೋನ್ಮುಖ (emerging) ಮತ್ತು ಖ್ಯಾತ ಬರಹಗಾರರ ಹತ್ತು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಜನಪ್ರಿಯ ನಟರಾದ ಕಿಚ್ಚ ಸುದೀಪ್ (Kichcha Sudeep) ಮತ್ತು ರಮೇಶ ಅರವಿಂದ (Ramesh Arvind) ಭಾಗವಹಿಸಿ ಮಾತಾಡಿದರು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಜೋಗಿ, ಕುಂ ವೀರಭದ್ರಪ್ಪ, ಗಣೇಶ ಕಾಸರಗೋಡು ಮೊದಲಾದವರು ಬರೆದಿರುವ ಪುಸ್ತಗಳನ್ನು ಈ ಇಬ್ಬರು ನಟರ ರಾಯಭಾರಿತ್ವದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಪುಸ್ತಗಳನ್ನು ಓದುಗರಿಗೆ ಆನ್ಲೈನ್ ವೇದಿಕೆ ಮೇಲೂ ಒದಗಿಸುವ ಯೋಜನೆಯಿದೆ. ಈ ಸಂದರ್ಭದಲ್ಲಿ ಮಾತಾಡಿದ ಸುದೀಪ್, ನನಗೆ ಪುಸ್ತಕ ಬರೆಯುವಷ್ಟು ಪುರುಸೊತ್ತಾಗಲೀ, ವ್ಯವಧಾನವಾಗಲೀ ಇಲ್ಲ, ಅದರೆ ಬರೆಯುವವರಿಗೆ ಕಥಾವಸ್ತುವಾಗಿ ಲಭ್ಯವಾಗುತ್ತಿದ್ದೇನೆ, ನಂಗೆ ಅಷ್ಟು ಸಾಕು ಅಂತ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published on: Jun 09, 2022 12:08 PM