ಧಾರವಾಡ ಜಿಲ್ಲೆ ಪ್ರವಾಸದಲ್ಲಿರುವ ಸಿದ್ದರಾಮಯ್ಯವರು ಕೋನರೆಡ್ಡಿಯವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದರು

ಧಾರವಾಡ ಜಿಲ್ಲೆ ಪ್ರವಾಸದಲ್ಲಿರುವ ಸಿದ್ದರಾಮಯ್ಯವರು ಕೋನರೆಡ್ಡಿಯವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 08, 2022 | 3:39 PM

ಸಿದ್ದರಾಮಯ್ಯನವರೊಂದಿಗೆ ಪಕ್ಷದ ಕಾರ್ಯಕರ್ತರು ಎಷ್ಟಿದ್ದರೆಂದರೆ ಕೋನರೆಡ್ಡಿ ಅವರ ಕುಟುಂಬದ ಹೆಣ್ಣುಮಕ್ಕಳಿಗೆ ಮಾಜಿ ಮುಖ್ಯಮಂತ್ರಿಗಳ ಜೊತೆ ಫೋಟೋ ತೆಗೆಸಿಕೊಳ್ಳುವುದು ಕೂಡ ಸಾಧ್ಯವಾಗಲಿಲ್ಲ.

Dharwad:  ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಧಾರವಾಡ ಜಿಲ್ಲೆ ಪ್ರವಾಸದಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಬೆಳಗಿನ ಉಪಹಾರವನ್ನು ಇತ್ತೀಚಿಗೆ ಜೆಡಿ(ಎಸ್)ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಎನ್ ಎಚ್ ಕೋನರೆಡ್ಡಿ (NH Konareddy) ನಿವಾಸದಲ್ಲಿ ಸೇವಿಸಿದರು. ಈ ಭಾಗದ ಜನಪ್ರಿಯ ತಿಂಡಿಗಳಾಗಿರುವ ಪಡ್ಡು ಮತ್ತು ಪೂರಿಯನ್ನು ಅವರು ಇಷ್ಟಪಟ್ಟು ಸವಿದರು. ಜೊತೆಗೆ ಮಾವಿನ ಹಣ್ಣಿನ (mango) ಸೀಕರಣೆಯನ್ನೂ ಅವರಿಗೆ ಬಡಿಸಲಾಯಿತು. ಸಿದ್ದರಾಮಯ್ಯನವರೊಂದಿಗೆ ಪಕ್ಷದ ಕಾರ್ಯಕರ್ತರು ಎಷ್ಟಿದ್ದರೆಂದರೆ ಕೋನರೆಡ್ಡಿ ಅವರ ಕುಟುಂಬದ ಹೆಣ್ಣುಮಕ್ಕಳಿಗೆ ಮಾಜಿ ಮುಖ್ಯಮಂತ್ರಿಗಳ ಜೊತೆ ಫೋಟೋ ತೆಗೆಸಿಕೊಳ್ಳುವುದು ಕೂಡ ಸಾಧ್ಯವಾಗಲಿಲ್ಲ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.