ಆರು ವರ್ಷಗಳ ಹಿಂದೆ 45,000 ರೂ. ಗಳಿಗೆ ಖರೀದಿಸಲ್ಪಟ್ಟ ಹೋರಿ ರೂ. 11.5 ಲಕ್ಷಗಳಿಗೆ ಮಾರಾಟವಾಯಿತು!
ಹೋರಿಯನ್ನು ಮಾರಿದ ಮಾಯಪ್ಪ ಹೇಳುವಂತೆ ಸೂರ್ಯ ಹೆಸರಿನ ಈ ಹೋರಿ ಹಲವಾರು ತೆರೆದ ಬಂಡಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಹೋದರರಿಗೆ ಬೈಕ್, ಚಿನ್ನ-ಬೆಳ್ಳಿ ಮತ್ತು ನಗದು ಬಹುಮಾನಗಳನ್ನು ಗೆದ್ದುಕೊಟ್ಟಿದೆ.
ಬಾಗಲಕೋಟೆ: ನಿಮಗಿಲ್ಲಿ ಕಾಣುತ್ತಿರೋದು ಅಂತಿಂಥ ಎತ್ತು ಅಲ್ಲ ಮಾರಾಯ್ರೇ. ರಬಕವಿ-ಬನಹಟ್ಟಿ ತಾಲ್ಲೂಕಿನ ಚಿಮ್ಮಡ (Chhimmad) ಗ್ರಾಮದ ನಿವಾಸಿಗಳಾಗಿರುವ ಶಿವಲಿಂಗಪ್ಪ ಮತ್ತು ಮಾಯಪ್ಪ ಸಹೋದರರು ಈ ಹೋರಿಯನ್ನು (Bull) ಸುಮಾರು 6 ವರ್ಷಗಳ ಹಿಂದೆ ಕೇವಲ 45,000 ರೂ. ಗಳಿಗೆ ಖರೀದಿಸಿ ಈಗ ದಾಖಲೆಯ 11.5 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾರೆ! ಇದನ್ನು ಖರೀದಿಸಿದವರು ಬೆಳಗಾವಿ ರಾಯಬಾಗ ತಾಲ್ಲೂಕಿನ ಇಟ್ನಳ್ಳಿ (Itnalli) ಗ್ರಾಮದ ಸದಾಶಿವ ಹೆಸರಿನ ರೈತರು. ಹೋರಿಯನ್ನು ಮಾರಿದ ಮಾಯಪ್ಪ ಹೇಳುವಂತೆ ಸೂರ್ಯ ಹೆಸರಿನ ಈ ಹೋರಿ ಹಲವಾರು ತೆರೆದ ಬಂಡಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಹೋದರರಿಗೆ ಬೈಕ್, ಚಿನ್ನ-ಬೆಳ್ಳಿ ಮತ್ತು ನಗದು ಬಹುಮಾನಗಳನ್ನು ಗೆದ್ದುಕೊಟ್ಟಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Jun 08, 2022 02:01 PM
Latest Videos