ಸಕಾಲಕ್ಕೆ ತಮ್ಮ ಬೆಂಗಾವಲು ವಾಹನ ನೀಡಿ, ಮಹಿಳೆಯ ಜೀವ ಉಳಿಸಿದ ಆರೋಗ್ಯ ಸಚಿವ

|

Updated on: Sep 26, 2019 | 3:03 PM

ಚಾಮರಾಜನಗರ: ಆರೋಗ್ಯ ಸಚಿವ ಬಿ. ಶ್ರೀರಾಮುಲು ಲಘ ಹೃದಯಾಘಾತವಾಗಿ ರಸ್ತೆ ಬದಿಯ ಮನೆಯೊಂದರ ಬಳಿ ನರಳಾಡುತ್ತಿದ್ದ ಮಹಿಳೆಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿ ಮಹಿಳೆಯ ಜೀವ ಉಳಿಸಿದ್ದಾರೆ. ಸಚಿವ ಶ್ರೀರಾಮುಲು ಇಂದು ಜಿಲ್ಲಾಸ್ಪತ್ರೆಯ ವಾಸ್ತವ್ಯದ ನಂತರ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವಾಗ, ದಾರಿ ಮಧ್ಯೆ ಲಘು ಹೃದಯಾಘಾತವಾಗಿ ಒದ್ದಾಡುತ್ತಿದ್ದ ಮಹಿಳೆಯನ್ನ ಕಂಡಿದ್ದಾರೆ. ತಕ್ಷಣವೇ ತಮ್ಮ ಕಾರು ನಿಲ್ಲಿಸಿ ಅದರಲ್ಲೇ ಮಹಿಳೆಯನ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿಸಿದ್ದಾರೆ. ಬೆಳಿಗ್ಗೆಯೆ […]

ಸಕಾಲಕ್ಕೆ ತಮ್ಮ ಬೆಂಗಾವಲು ವಾಹನ ನೀಡಿ, ಮಹಿಳೆಯ ಜೀವ ಉಳಿಸಿದ ಆರೋಗ್ಯ ಸಚಿವ
Follow us on

ಚಾಮರಾಜನಗರ: ಆರೋಗ್ಯ ಸಚಿವ ಬಿ. ಶ್ರೀರಾಮುಲು ಲಘ ಹೃದಯಾಘಾತವಾಗಿ ರಸ್ತೆ ಬದಿಯ ಮನೆಯೊಂದರ ಬಳಿ ನರಳಾಡುತ್ತಿದ್ದ ಮಹಿಳೆಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿ ಮಹಿಳೆಯ ಜೀವ ಉಳಿಸಿದ್ದಾರೆ.

ಸಚಿವ ಶ್ರೀರಾಮುಲು ಇಂದು ಜಿಲ್ಲಾಸ್ಪತ್ರೆಯ ವಾಸ್ತವ್ಯದ ನಂತರ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವಾಗ, ದಾರಿ ಮಧ್ಯೆ ಲಘು ಹೃದಯಾಘಾತವಾಗಿ ಒದ್ದಾಡುತ್ತಿದ್ದ ಮಹಿಳೆಯನ್ನ ಕಂಡಿದ್ದಾರೆ. ತಕ್ಷಣವೇ ತಮ್ಮ ಕಾರು ನಿಲ್ಲಿಸಿ ಅದರಲ್ಲೇ ಮಹಿಳೆಯನ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿಸಿದ್ದಾರೆ.

ಬೆಳಿಗ್ಗೆಯೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಕಷ್ಟ ಸುಖವನ್ನು ವಿಚಾರಿಸಿ, ಆಸ್ಪತ್ರೆಯ ಸಿಬ್ಬಂದಿಗಳ ಜೊತೆ ಚರ್ಚಿಸಿ ಅವರ ಬೇಡಿಕೆಗಳನ್ನು ಪೂರೈಸುವುದಾಗಿ ಹೇಳಿ ಸಿಬ್ಬಂದಿಯ ಮೊಗದಲ್ಲಿ ಸಂತೋಷ ತರಿಸಿದ್ದರು ಈಗ ಮತ್ತೆ ಮಹಿಳೆಯ ಕಷ್ಟಕ್ಕೆ ಧಾವಿಸಿ ಮಾನವೀಯತೆಯನ್ನ ಮೆರೆದಿದ್ದಾರೆ. ಸಚಿವರ ಮಾನವೀಯತೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಜೀವಕ್ಕೆಬೆಲೆಕಟ್ಟಲಾಗದು. ಆಪತ್ಕಾಲದಲ್ಲಿಹೆಣ್ಣುಮಗಳಜೀವರಕ್ಷಿಸಿ ಧನ್ಯನಾದೆ.

ಚಾಮರಾಜನಗರಿಂದ ವಾಹನದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾಗ ರಸ್ತೆ ಬದಿಯ ಮನೆಯೊಂದರ ಬಳಿ ಮಹಿಳೆಯೊಬ್ಬರು ಅನಾರೋಗ್ಯದಿಂದ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು.

ಇದನ್ನು ಗಮನಿಸಿ ನನ್ನದೇ ವಾಹನದಲ್ಲಿ ಆಕೆಯನ್ನು ಮಲೆ ಮಹದೇಶ್ವರದ ಆಸ್ಪತ್ರೆಗೆ ಕಳುಹಿಸಿಕೊಟ್ಟು ಚಿಕಿತ್ಸೆ ಕೊಡಿಸಿದೆ. ಬೆಟ್ಟದಿಂದ ವಾಪಸಾಗುವಾಗ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದೆ. ಆಕೆ ಚೇತರಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಸಚಿವನಾಗಿ ಅಲ್ಲದೇ ಇದ್ದರೂ ಒಬ್ಬ ಸಾಮಾನ್ಯನಾಗಿ ಇನ್ನೊಬ್ಬರ ಪ್ರಾಣ ಉಳಿಸಿದ್ದಕ್ಕಿಂತ ಸಮಾಧಾನದ ಸಂಗತಿ ಇನ್ನೇನಿದೆ?

ನಾನೇನೋ ದೊಡ್ಡ ಕೆಲಸ ಮಾಡಿದೆ ಎಂದು ಹೇಳಿಕೊಳ್ಳುತ್ತಿಲ್ಲ. ಪ್ರತಿಯೊಬ್ಬರಿಗೂ ಮಾನವೀಯ ಕಳಕಳಿ ಇದ್ದರೆ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂಬುದು ನನ್ನ ಆಶಯ
– ಬಿ. ಶ್ರೀರಾಮುಲು, ಆರೋಗ್ಯ ಸಚಿವ”

Published On - 3:43 pm, Wed, 25 September 19