ಲಸಿಕೆ ಹಾಕಿಕೊಳ್ಳಲು ಆರೋಗ್ಯ ಕಾರ್ಯಕರ್ತರು ಹಿಂದೇಟು ಹಾಕುತ್ತಿಲ್ಲ: ಡಿಸಿಎಂ ಗೋವಿಂದ ಕಾರಜೋಳ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 19, 2021 | 5:40 PM

ಕೊರೊನಾ ಲಸಿಕೆ ಸುರಕ್ಷಿತವಾಗಿದೆ, ಎಲ್ಲರೂ ಹಾಕಿಸಿಕೊಳ್ಳಬಹುದು. ಎಲ್ಲರಿಗೂ ಒಟ್ಟಿಗೆ ಲಸಿಕೆ ನೀಡಲು ಸಾಧ್ಯವಿಲ್ಲ. ಇದು ನಿರಂತರ ಪ್ರಕ್ರಿಯೆ. ದೈನಂದಿನ ಕೆಲಸಕ್ಕೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ನಾವು ಲಸಿಕೆ ಹಾಕುತ್ತಿದ್ದೇವೆ ಎಂದಿದ್ದಾರೆ ಕಾರಜೋಳ.

ಲಸಿಕೆ ಹಾಕಿಕೊಳ್ಳಲು ಆರೋಗ್ಯ ಕಾರ್ಯಕರ್ತರು ಹಿಂದೇಟು ಹಾಕುತ್ತಿಲ್ಲ: ಡಿಸಿಎಂ ಗೋವಿಂದ ಕಾರಜೋಳ
ಗೋವಿಂದ ಕಾರಜೋಳ
Follow us on

ಬಾಗಲಕೋಟೆ: ಸರ್ಕಾರಕ್ಕೆ ಅತೃಪ್ತರ ಕಾಟದ ಬಗ್ಗೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ ಅತೃಪ್ತರ ಕಾಟ ಇವತ್ತು ನಿನ್ನೆಯದ್ದಲ್ಲ. ಅದು ಎಲ್ಲ ಕಾಲದಿಂದಲೂ ಇದೆ. ನೆಹರು ಅವರ ವಿರುದ್ದವೂ ಅತೃಪ್ತರಿದ್ದರು. ಅತೃಪ್ತರು ಯಾವಾಗಲೂ ಇರುತ್ತಾರೆ. ಅತೃಪ್ತರು ಇದ್ದರೆ ಕರೆದು ಮಾತಾಡುತ್ತೇವೆ. ಪಕ್ಷದ ನಿರ್ಣಯದ ‌ಮೇಲೆ ಎಲ್ಲವೂ ನಡೆಯುತ್ತದೆ ಎಂದು ಹೇಳಿದ್ದಾರೆ.

ಮುಧೋಳ ತಾಲ್ಲೂಕು ಮೆಟಗುಡ್ಡ ಗ್ರಾಮದಲ್ಲಿ ಮಾತನಾಡಿದ ಕಾರಜೋಳ, ರೇಣುಕಾಚಾರ್ಯ ದೆಹಲಿ ಭೇಟಿ ಬಗ್ಗೆ ವ್ಯಂಗ್ಯವಾಡಿದ್ದಾರೆ. ರೇಣುಕಾಚಾರ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವುದಕ್ಕಾಗಿ, ಹೆಚ್ಚು ರೈಲುಮಾರ್ಗ ತರೋದಕ್ಕಾಗಿ ಹೋಗಿರುತ್ತಾರೆ. ಅವರು ಯಾವತ್ತೂ ರೈಲು ಮಾರ್ಗ ತರೋದಕ್ಕಾಗಿ ಪ್ರಯತ್ನ ಮಾಡ್ತಾ ಇರ್ತಾರೆ ಎಂದಿದ್ದಾರೆ.

ಲಸಿಕೆ ಹಾಕಿಕೊಳ್ಳಲು ಆರೋಗ್ಯ ಕಾರ್ಯಕರ್ತರು ಹಿಂದೇಟು ಹಾಕುತ್ತಿಲ್ಲ
ಕೊರೊನಾ ಲಸಿಕೆ ಸುರಕ್ಷಿತವಾಗಿದೆ, ಎಲ್ಲರೂ ಹಾಕಿಸಿಕೊಳ್ಳಬಹುದು. ಎಲ್ಲರಿಗೂ ಒಟ್ಟಿಗೆ ಲಸಿಕೆ ನೀಡಲು ಸಾಧ್ಯವಿಲ್ಲ. ಇದು ನಿರಂತರ ಪ್ರಕ್ರಿಯೆ. ದೈನಂದಿನ ಕೆಲಸಕ್ಕೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ನಾವು ಲಸಿಕೆ ಹಾಕುತ್ತಿದ್ದೇವೆ ಎಂದು ಹೇಳಿದ ಅವರು ಲಸಿಕೆ ಹಾಕಿಕೊಳ್ಳಲು ಆರೋಗ್ಯ ಕಾರ್ಯಕರ್ತರು ಹಿಂದೇಟು ಹಾಕುತ್ತಿಲ್ಲ ಎಂದಿದ್ದಾರೆ.

ಯತ್ನಾಳ್ ಹೇಳಿಕೆಗೆ ಟಾಂಗ್
ನಮ್ಮ ದೇಶದ ಪ್ರಧಾನಿ, ಗೃಹ ಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ, ರಾಜ್ಯ ಉಸ್ತುವಾರಿ ಸೇರಿದಂತೆ ಎಲ್ಲರೂ ಯಡಿಯೂರಪ್ಪ ಸರಕಾರ ಉತ್ತಮ ಕೆಲಸ ಮಾಡಿದೆ ಅಂತ ಹೇಳಿದ್ದಾರೆ‌‌. ಕೋವಿಡ್ ನಿರ್ವಹಣೆಯಲ್ಲೂ ದೇಶದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಗುಡ್ ಅಡ್ಮಿನಿಸ್ಟ್ರೇಷನ್ ಅಂತ ಸರ್ಟಿಫಿಕೇಟ್ ಕೊಟ್ಟಿದಾರೆ. ಹೀಗಿರಬೇಕಾದರೆ ಯತ್ನಾಳ್​ ಹೇಳಿಕೆಯ ಬಗ್ಗೆ ಚರ್ಚೆ ಏಕೆ ಎಂದು ಕಾರಜೋಳ ಪ್ರಶ್ನಿಸಿದ್ದಾರೆ.

ಅಮಿತ್​ ಶಾ ಬಿಜೆಪಿ ಸರ್ಕಾರ ಇರುತ್ತೆ ಎಂದಿದ್ರು, ಆದ್ರೆ ಯಡಿಯೂರಪ್ಪ CM ಆಗಿರ್ತಾರೆ ಎಂದಿಲ್ಲ- ಯತ್ನಾಳ್​