Go ಕೊರೊನಾ Go ಎಂದು ಕೂಗುತ್ತಾ.. ಲಸಿಕೆ ಪಡೆದ ಅರೋಗ್ಯ ಸಿಬ್ಬಂದಿಗೆ ತಲೆ ಸುತ್ತು! ಲಸಿಕೆ ಪಡೆಯಲು ಬಂದ ಸಿಬ್ಬಂದಿ ಮಾಯ..
Go ಕೊರೊನಾ Go ಎಂದು ಘೋಷಣೆ ಕುಗುತ್ತಾ ಲಸಿಕೆ ಪಡೆದ ಆರೋಗ್ಯ ಸಿಬ್ಬಂದಿಗೆಯೊಬ್ಬರಿಗೆ ಸುಸ್ತು ಹಾಗೂ ತಲೆಸುತ್ತು ಕಾಣಿಸಿಕೊಂಡಿರುವ ಘಟನೆ ಬಿಬಿಎಂಪಿ ದಾಸರಹಳ್ಳಿಯ ಮಲ್ಲಸಂದ್ರ ಅರೋಗ್ಯ ಕೇಂದ್ರದಲ್ಲಿ ವರದಿಯಾಗಿದೆ.
ಬೆಂಗಳೂರು: Go ಕೊರೊನಾ Go ಎಂದು ಘೋಷಣೆ ಕುಗುತ್ತಾ ಲಸಿಕೆ ಪಡೆದ ಆರೋಗ್ಯ ಸಿಬ್ಬಂದಿಗೆಯೊಬ್ಬರಿಗೆ ಸುಸ್ತು ಹಾಗೂ ತಲೆಸುತ್ತು ಕಾಣಿಸಿಕೊಂಡಿರುವ ಘಟನೆ ಬಿಬಿಎಂಪಿ ದಾಸರಹಳ್ಳಿಯ ಮಲ್ಲಸಂದ್ರ ಅರೋಗ್ಯ ಕೇಂದ್ರದಲ್ಲಿ ವರದಿಯಾಗಿದೆ.
ಮಲ್ಲಸಂದ್ರದ ಸರ್ಕಾರಿ ಅರೋಗ್ಯ ಕೇಂದ್ರದಲ್ಲಿ ಸುಮಾರು 50ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲು ಏಪಾರ್ಡು ಮಾಡಲಾಗಿತ್ತು. ಈ ವೇಳೆ, Go ಕೊರೊನಾ Go ಎಂದು ಘೋಷಣೆ ಕೂಗುತ್ತಾ ಲಸಿಕೆ ಪಡೆದ ಅರೋಗ್ಯ ಸಿಬ್ಬಂದಿಗೆ ಲಸಿಕೆ ಹಾಕಿಸಿಕೊಂಡ ಒಂದು ಗಂಟೆಯೊಳಗೆ ಸುಸ್ತು, ತಲೆನೋವು ಹಾಗೂ ತಲೆ ಸುತ್ತು ಕಾಣಿಸಿಕೊಂಡಿದೆ.
ಲಸಿಕೆ ಪಡೆಯಲು ಬಂದ ಇತರ ಸಿಬ್ಬಂದಿ ಇದ್ದಕ್ಕಿದ್ದಂತೆ ಮಾಯ! ಲಸಿಕೆ ಪಡೆದ ಅರೋಗ್ಯ ಇಲಾಖೆ ಸಂಪರ್ಕ ಕಾರ್ಯಕರ್ತೆ ನಂದಿನಿ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದಂತೆ ಲಸಿಕೆ ಪಡೆಯಲು ಬಂದ ಇತರ ಸಿಬ್ಬಂದಿ ಇದ್ದಕ್ಕಿದ್ದಂತೆ ಮಾಯವಾಗಿದ್ದಾರೆ ಎಂದು ಹೇಳಲಾಗಿದೆ.
ಲಸಿಕೆ ಪಡೆಯಲು ಸುಮಾರು 50ವಾರಿಯರ್ಗಳ ಹೆಸರನ್ನು ನೋಂದಣಿ ಮಾಡಲಾಗಿತ್ತು. ಆದರೆ, ಘಟನೆ ನಂತರ 50ರಲ್ಲಿ ಕೇವಲ 28ಜನರು ಮಾತ್ರ ಲಸಿಕೆ ಪಡೆದರು ಎಂದು ತಿಳಿದುಬಂದಿದೆ. ಅದರಲ್ಲಿ, 6 ಪುರುಷ, 22 ಮಹಿಳಾ ಸಿಬ್ಬಂದಿ ಮಾತ್ರ ಇದ್ದರು. ಉಳಿದವರು ತಮಗೆ ಏನಾಗುತ್ತೋ ಏನೋ ಅನ್ನೋ ಭಯದಲ್ಲಿ ಆಸ್ಪತ್ರೆಯಿಂದ ಜಾಗ ಖಾಲಿ ಮಾಡಿದರಂತೆ.
ಈ ನಡುವೆ, ಲಸಿಕೆ ತಗೊಂಡ ಬಳಿಕ ತಲೆ ಚಕ್ಕರ್ ಬಂತು. ಬಳಿಕ ತಲೆನೋವು ಆರಂಭವಾಯಿತು. ಒಂದು ಗಂಟೆ ಬಳಿಕ ಸ್ವಲ್ಪ ನಾರ್ಮಲ್ ಆದೆ ಎಂದು ಬಿಬಿಎಂಪಿ ಸಂಪರ್ಕ ಕಾರ್ಯಕರ್ತೆ ನಂದಿನಿ ಹೇಳಿದರು. ಇದಾದ ನಂತರ ಲಸಿಕೆ ಪಡೆಯಲು ಕೆಲವರು ಮುಂದಾದರು ಎಂದು ಹೇಳಲಾಗಿದೆ.
ನಾರ್ವೆಯಲ್ಲಿ ಫೈಜರ್ ಲಸಿಕೆ ಪಡೆದ 23 ಮಂದಿ ಸಾವು; ಇನ್ನೂ ಹಲವರಲ್ಲಿ ಗಂಭೀರ ಅಡ್ಡಪರಿಣಾಮ
Published On - 6:02 pm, Sat, 16 January 21