ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಸಂಪತ್ ರಾಜ್ ಬಂಧಿಸದ್ದಕ್ಕೆ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ನಗರದ ಮಾಜಿ ಮೇಯರ್ ಸಂಪತ್ ರಾಜ್ ತಲೆಮರೆಸಿಕೊಂಡಿದ್ದಾರೆ. ರಾಜಕಾರಣಿಯನ್ನು ಬಂಧಿಸಲು ಆಗದಿರುವುದು ಆಶ್ಚರ್ಯಕರ ಎಂದು ಹೈಕೋರ್ಟ್ ಸಿಜೆ ಅಭಯ್ ಶ್ರೀನಿವಾಸ್ ಒಕಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಪತ್ ರಾಜ್ ಬಂಧನಕ್ಕೆ ತನಿಖಾಧಿಕಾರಿ ಕ್ರಮ ಕೈಗೊಳ್ಳಬೇಕು. ಕೈಗೊಂಡ ಕ್ರಮ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿದೆ. ಜೊತೆಗೆ, ನಷ್ಟ ವಸೂಲಿಗೆ ಕ್ಲೇಮ್ ಕಮಿಷನರ್ ನೇಮಕ ಹಿನ್ನೆಲೆಯಲ್ಲಿ ಅಧಿಕಾರಿಗೆ ಮೂಲಸೌಕರ್ಯ ಒದಗಿಸಲು ಸಹ ಸೂಚನೆ ನೀಡಲಾಗಿದೆ. ಕ್ಲೇಮ್ ಕಮಿಷನರ್ಗೆ ಸರ್ಕಾರಿ ಕಾರು ಹಾಗೂ ಟೈಪಿಸ್ಟ್ ಶೀಘ್ರ ಒದಗಿಸಲು ಹೈಕೋರ್ಟ್ ಸೂಚನೆ ಕೊಟ್ಟಿದೆ.
Published On - 1:05 pm, Fri, 13 November 20