ಜೋಯ್ಡಾವನ್ನ ಅವರಷ್ಟು ಇಷ್ಟಪಟ್ಟ ವ್ಯಕ್ತಿ ಮತ್ತೊಬ್ಬರಿಲ್ಲ -ಬೆಳಗೆರೆ ಫಾರ್ಮ್ ಹೌಸ್ನಲ್ಲಿ ಶೋಕಸಾಗರ
ಉತ್ತರ ಕನ್ನಡ: ‘ನನ್ನ ಜೋಯ್ಡಾ, ನನ್ನ ಜೋಯ್ಡಾ..’ ಎನ್ನುತ್ತಲೇ ರವಿ ಬೆಳಗೆರೆ ಜೋಯ್ಡಾಗೆ ಬೈ ಬೈ ಅಂದು ಬಿಟ್ಟರು ಎಂದು ತಮ್ಮ ಮಾಲೀಕರನ್ನು ನೆನೆದು ಬೆಳಗೆರೆ ಫಾರ್ಮ್ ಹೌಸ್ನ ಸಿಬ್ಬಂದಿ ಕಣ್ಣೀರಿಟ್ಟರು. ಹೌದು, ಜಿಲ್ಲೆಯ ಜೋಯ್ಡಾದಲ್ಲಿರುವ ಬೆಳಗೆರೆ ಫಾರ್ಮ್ ಹೌಸ್ನಲ್ಲಿ ಇದೀಗ ನೀರವ ಮೌನ ಆವರಿಸಿದೆ. ಒಡೆಯನ ಸಾವಿನ ಸುದ್ದಿ ಕೇಳಿ ಕಣ್ಣೀಟ್ಟ ಮನೆಗೆಲಸದವರಾದ ದೀಪಾ ಮತ್ತು ನೀಲಂ ನಾವು ಇನ್ಯಾರಿಗೆ ಅಡುಗೆ ಮಾಡಿ ಬಡಿಸೋಣ ಅಂತಾ ತಮ್ಮ ನೋವು ತೋಡಿಕೊಂಡರು. ಇಲ್ಲಿ ಬಂದ್ರೆ 15-20 ದಿನ […]
ಉತ್ತರ ಕನ್ನಡ: ‘ನನ್ನ ಜೋಯ್ಡಾ, ನನ್ನ ಜೋಯ್ಡಾ..’ ಎನ್ನುತ್ತಲೇ ರವಿ ಬೆಳಗೆರೆ ಜೋಯ್ಡಾಗೆ ಬೈ ಬೈ ಅಂದು ಬಿಟ್ಟರು ಎಂದು ತಮ್ಮ ಮಾಲೀಕರನ್ನು ನೆನೆದು ಬೆಳಗೆರೆ ಫಾರ್ಮ್ ಹೌಸ್ನ ಸಿಬ್ಬಂದಿ ಕಣ್ಣೀರಿಟ್ಟರು. ಹೌದು, ಜಿಲ್ಲೆಯ ಜೋಯ್ಡಾದಲ್ಲಿರುವ ಬೆಳಗೆರೆ ಫಾರ್ಮ್ ಹೌಸ್ನಲ್ಲಿ ಇದೀಗ ನೀರವ ಮೌನ ಆವರಿಸಿದೆ. ಒಡೆಯನ ಸಾವಿನ ಸುದ್ದಿ ಕೇಳಿ ಕಣ್ಣೀಟ್ಟ ಮನೆಗೆಲಸದವರಾದ ದೀಪಾ ಮತ್ತು ನೀಲಂ ನಾವು ಇನ್ಯಾರಿಗೆ ಅಡುಗೆ ಮಾಡಿ ಬಡಿಸೋಣ ಅಂತಾ ತಮ್ಮ ನೋವು ತೋಡಿಕೊಂಡರು. ಇಲ್ಲಿ ಬಂದ್ರೆ 15-20 ದಿನ ಇರ್ತಿದ್ರು. ಅವರಿಗೆ ಚಿಕನ್ ಫ್ರೈ ಅಂದರೆ ಪಂಚ ಪ್ರಾಣ. ಜೊತೆಗೆ, ತಾವು ಬರೆಯುವಾಗ ಬೇಕಾಗಿದ್ದನ್ನ ಕೇಳುತ್ತಿದ್ರು. ನಾವು ಅಡುಗೆ ಮಾಡಿ ಬಡಿಸುತ್ತಿದ್ದೆವು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಜೋಯ್ಡಾವನ್ನು ಕರ್ನಾಟಕಕ್ಕೆ ಪರಿಚಯ ಮಾಡಿದವ್ರು ರವಿ ಬೆಳೆಗೆರೆ ಎಂದು ಅಗಲಿದ ಪತ್ರಕರ್ತನ ದೀರ್ಘಕಾಲದ ಒಡನಾಡಿ ನರಸಿಂಹ ಭಟ್ಟ ಚಾಪಖಂಡ ಹೇಳಿದರು. ನನ್ನ ಜೋಯ್ಡಾ ನನ್ನ ಜೋಯ್ಡಾ ಎನ್ನುತ್ತಲೇ ರವಿ ನಮ್ಮನ್ನೆಲ್ಲಾ ಬಿಟ್ಟು ಹೋದ್ರು. ಕೇವಲ ಜೋಯ್ಡಾ ಮಾತ್ರವಲ್ಲ ಮರ, ಗಿಡ ಪ್ರಾಣಿ ಪಕ್ಷಿ ಎಲ್ಲವನ್ನೂ ರವಿ ಇಷ್ಟ ಪಡುತ್ತಿದ್ರೆ. ಕಾಳಿ ನದಿಯ ತಟದಲ್ಲಿ ಗಂಟೆಗಟ್ಟಲೆ ಕೂರುತ್ತಿದ್ರು. ಕೆಲ ಬಾರಿ ಕಾಡಿನಲ್ಲೇ ಕುಳಿತು ಬರವಣಿಗೆ ಶುರು ಮಾಡುತ್ತಿದ್ರು. ನಾವು ಅಲ್ಲೇ ಅವರಿಗೆ ಟೇಬಲ್ ಮತ್ತು ಚೇರ್ ವ್ಯವಸ್ಥೆ ಮಾಡುತ್ತಿದ್ವಿ ಎಂದು ನರಸಿಂಹ ಭಟ್ಟ ಹೇಳಿದರು.
ಜೋಯ್ಡಾವನ್ನ ಅವರಷ್ಟು ಇಷ್ಟಪಟ್ಟ ವ್ಯಕ್ತಿ ಮತ್ತೊಬ್ಬರಿಲ್ಲ. ಬೆಂಗಳೂರಿನಿಂದ ಬಂದ ತಕ್ಷಣ ಅವರ ಬಳಿಯಿದ್ದ ಹಣವನ್ನೆಲ್ಲಾ ನನಗೆ ಕೊಡುತ್ತಿದ್ರು. ಮತ್ತೆ ಬೇಕಾದಾಗ ಕೇಳುತ್ತಿದ್ರು. ಮನೆಯಲ್ಲೇ ಲೈಬ್ರರಿ ಮಾಡಿಕೊಂಡು ರಾತ್ರಿಯೆಲ್ಲಾ ಸ್ಟಡಿ ಮಾಡಿ ಬರೆಯುತ್ತಿದ್ರು ಎಂದು ಹೇಳಿದರು. ಯಾವುದಾದರೂ ಬುಕ್ ಬರೆಯಲು ಯೋಚಿಸಿ ಇಲ್ಲಿ ಬಂದರೆ ಆ ಬುಕ್ ಬರೆದು ಮುಗಿಸಿಯೇ ಹೊರಡುತ್ತಿದ್ರು ಎಂದು ರವಿ ಬೆಳೆಗೆರೆ ದೀರ್ಘಕಾಲದ ಒಡನಾಡಿ ನರಸಿಂಹ ಭಟ್ ಚಾಪಖಂಡ ಹೇಳಿದರು.
ರವಿ ಬೆಳಗೆರೆ ಹೆಸರಾಂತ ಸಾಹಿತಿ ಮನೋಹರ್ ಮಾಳಗಾವ್ಕರ್ರಿಂದ ಜೋಯ್ಡಾದಲ್ಲಿ ಫಾರ್ಮ್ ಹೌಸ್ ಖರೀದಿಸಿದ್ದರು. ರವಿ ಮನೋಹರ್ ಮಾಳಗಾವ್ಕರ್ಗೆ ಅಚ್ಚುಮೆಚ್ಚಿನ ಶಿಷ್ಯ. ಹಾಗಾಗಿ, ಅವರು ಕುಳಿತು ಬರೆಯುತ್ತಿದ್ದ ಚೇರ್ ಮೇಲೆಯೇ ಕುಳಿತು ಬೆಳಗೆರೆ ಬರೆಯುತ್ತಿದ್ರು.