ಪತ್ರಿಕೆಯ ಬಣ್ಣ ಕಪ್ಪು.. ಬರಹ ಕಲರ್​ಫುಲ್​! ಲಂಕೇಶರಂತೆ, ಆದರೆ ಅದಕ್ಕಿಂತ ಭಿನ್ನವಾಗಿ ಹೊಸಪೀಳಿಗೆಗೆ ತಲುಪಿದವರು ಬೆಳಗೆರೆ!

ತೊಂಭತ್ತರ ದಶಕದಲ್ಲಿ ಯುವ ಪೀಳಿಗೆಯನ್ನು ಆಕರ್ಷಿಸಿದ ಕಪ್ಪುಸುಂದರಿ ‘ಹಾಯ್ ಬೆಂಗಳೂರು’. ಲಂಕೇಶರ ಪ್ರಭಾವ ಕಡಿಮೆ ಆಗುತ್ತಿದ್ದಂತ ಸಂದರ್ಭದಲ್ಲಿ, ಹೊಸ ಪೀಳಿಗೆಯ ಜನರಿಗೆ ತಲುಪಿದವರು ರವಿ ಬೆಳಗೆರೆ. ‘ಲಂಕೇಶ್ ಪತ್ರಿಕೆ’ಯ ನಂತರದ ಕಾಲದಲ್ಲಿ, ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡದ್ದು ‘ಹಾಯ್ ಬೆಂಗಳೂರ್’. ಪತ್ರಿಕೆಯ ಬಣ್ಣ ಕಪ್ಪು.. ಆದ್ರೆ ಬರಹ ಕಲರ್​ಫುಲ್​! ಲಂಕೇಶ್ ಮತ್ತು ಬೆಳಗೆರೆ ಇಬ್ಬರೂ ವಿಕ್ಷಿಪ್ತ, ದೈತ್ಯ ಪ್ರತಿಭೆಗಳು. ಲಂಕೇಶರು ಸರ್ಕಾರವನ್ನು ಪ್ರಶ್ನಿಸುವ, ಹಗರಣ ಬಯಲುಗೊಳಿಸುವ ಟಾಬ್ಲಾಯ್ಡ್ ಶೈಲಿಯ ಬರಹಗಳನ್ನು ಬರೆಯುತ್ತಲೇ ವೈಚಾರಿಕ ಚಿಂತನೆಗೂ ಸಾಹಿತ್ಯಕ್ಕೂ ಅವಕಾಶ […]

ಪತ್ರಿಕೆಯ ಬಣ್ಣ ಕಪ್ಪು.. ಬರಹ ಕಲರ್​ಫುಲ್​! ಲಂಕೇಶರಂತೆ, ಆದರೆ ಅದಕ್ಕಿಂತ ಭಿನ್ನವಾಗಿ ಹೊಸಪೀಳಿಗೆಗೆ ತಲುಪಿದವರು ಬೆಳಗೆರೆ!
Follow us
ಸಾಧು ಶ್ರೀನಾಥ್​
| Updated By: ಡಾ. ಭಾಸ್ಕರ ಹೆಗಡೆ

Updated on:Nov 13, 2020 | 2:57 PM

ತೊಂಭತ್ತರ ದಶಕದಲ್ಲಿ ಯುವ ಪೀಳಿಗೆಯನ್ನು ಆಕರ್ಷಿಸಿದ ಕಪ್ಪುಸುಂದರಿ ‘ಹಾಯ್ ಬೆಂಗಳೂರು’. ಲಂಕೇಶರ ಪ್ರಭಾವ ಕಡಿಮೆ ಆಗುತ್ತಿದ್ದಂತ ಸಂದರ್ಭದಲ್ಲಿ, ಹೊಸ ಪೀಳಿಗೆಯ ಜನರಿಗೆ ತಲುಪಿದವರು ರವಿ ಬೆಳಗೆರೆ. ‘ಲಂಕೇಶ್ ಪತ್ರಿಕೆ’ಯ ನಂತರದ ಕಾಲದಲ್ಲಿ, ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡದ್ದು ‘ಹಾಯ್ ಬೆಂಗಳೂರ್’.

ಪತ್ರಿಕೆಯ ಬಣ್ಣ ಕಪ್ಪು.. ಆದ್ರೆ ಬರಹ ಕಲರ್​ಫುಲ್​! ಲಂಕೇಶ್ ಮತ್ತು ಬೆಳಗೆರೆ ಇಬ್ಬರೂ ವಿಕ್ಷಿಪ್ತ, ದೈತ್ಯ ಪ್ರತಿಭೆಗಳು. ಲಂಕೇಶರು ಸರ್ಕಾರವನ್ನು ಪ್ರಶ್ನಿಸುವ, ಹಗರಣ ಬಯಲುಗೊಳಿಸುವ ಟಾಬ್ಲಾಯ್ಡ್ ಶೈಲಿಯ ಬರಹಗಳನ್ನು ಬರೆಯುತ್ತಲೇ ವೈಚಾರಿಕ ಚಿಂತನೆಗೂ ಸಾಹಿತ್ಯಕ್ಕೂ ಅವಕಾಶ ನೀಡಿದರೆ, ರವಿ ಬೆಳಗೆರೆ ಕ್ರೈಂ, ಸೆಕ್ಸ್ ವಿಚಾರಗಳ ಜೊತೆಗೆ ವ್ಯಕ್ತಿತ್ವ ವಿಕಸನಗೊಳಿಸುವ ಬರಹಗಳಿಗೆ ಮಹತ್ವ ನೀಡಿದರು. ಓದುಗರಿಗೆ ಆಪ್ತವೆನಿಸಿದರು.

‘ಬಾಟಂ ಐಟಮ್’, ‘ಖಾಸ್ ಬಾತ್’, ‘ಪಾಪಿಗಳ ಲೋಕದಲ್ಲಿ’ ಮುಂತಾದವು ಜನರ ಮನಸೂರೆಗೊಂಡವು. ಜೋಗಿ, ನಾಗತಿಹಳ್ಳಿ ಚಂದ್ರಶೇಖರ್, ಜಯಂತ ಕಾಯ್ಕಿಣಿ ಮುಂತಾದವರಿಂದ ಸಂವೇದನಾಶೀಲ ಬರಹಗಳನ್ನು ಬರೆಸಿ, ಜನರಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚುವಂತೆ ಮಾಡಿದರು. ಈ ನೆಲೆಯಲ್ಲಿ ‘ಹಾಯ್ ಬೆಂಗಳೂರು’ ಮತ್ತು ರವಿ ಬೆಳಗೆರೆ ಮುಖ್ಯ ಎನಿಸುತ್ತಾರೆ.

ರವಿ ಬೆಳಗೆರೆ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡರು: ‘ಲಂಕೇಶ್ ಪತ್ರಿಕೆ’ಯಂತೆ, ಆದರೆ ಅದಕ್ಕಿಂತ ಭಿನ್ನವಾಗಿ ಹೊಸಪೀಳಿಗೆಗೆ ತಲುಪಿದವರು ರವಿ ಬೆಳಗೆರೆ. ಪಿ. ಲಂಕೇಶ್ ವೈಚಾರಿಕ ಚಿಂತನೆ ಹೆಚ್ಚಿಸಿದರು. ರವಿ ಬೆಳಗೆರೆ ಸಾಹಿತ್ಯದ ಲೇಪದಿಂದ ವ್ಯಕ್ತಿತ್ವ ವಿಕಸನಕ್ಕೆ ಕಾರಣರಾದರು. ಈ ಎರಡೂ ವ್ಯಕ್ತಿತ್ವಗಳನ್ನು ಟೀಕಿಸಬಹುದೇ ಹೊರತು ನಿರ್ಲಕ್ಷಿಸುವಂತಿಲ್ಲ. ರವಿ ಬೆಳಗೆರೆ ಒಳ್ಳೆಯ ಓದುಗ. ಓದಿನ ವಿಸ್ತಾರವೇ ಅವರ ಬರಹ ಶೈಲಿಯನ್ನು ವಿಶೇಷವಾಗಿ ರೂಪಿಸಿತು ಎನ್ನಬಹುದು. ಅವರ ‘ಬಾಟಂ ಐಟಮ್’ ಅಂಕಣವನ್ನು ಇಷ್ಟಪಟ್ಟು ಓದುತ್ತಿದ್ದೆ. ‘ಖಾಸ್ ಬಾತ್’ ಕೆಲವೊಮ್ಮೆ ಹಿಡಿಸುತ್ತಿತ್ತು. -ಡಾ. ಪದ್ಮನಾಭ ಎನ್.ಕೆ ಪತ್ರಿಕೋದ್ಯಮ ಪ್ರಾಧ್ಯಾಪಕ

ರವಿ ಬೆಳಗೆರೆಯ ಬರಹ ಒಂದು ಬಗೆಯ ಚಡಪಡಿಕೆ!: ರವಿ ಬೆಳಗೆರೆ ಬರಹಗಳು ಕೊಡುವ ಚಡಪಡಿಕೆಯೇ ಅವರ ಶೈಲಿಯ ವಿಶೇಷ. ಅದು ಅಡಿಕ್ಟೀವ್ ಲೇಖನ ಶೈಲಿ. ಬೆಳಗೆರೆಯವರನ್ನು ಓದುವುದನ್ನು ಹಲವರು ಚಟವಾಗಿಸಿಕೊಂಡಿದ್ದರು. ‘ಹಾಯ್ ಬೆಂಗಳೂರ್​’ ಕೈ ಸೇರದಿದ್ದರೆ, ಏನೋ ಕಳೆದುಕೊಂಡಂತೆ ಆಡುತ್ತಿದ್ದರು. ಅವರ ಬರಹಗಳು ನನ್ನದೇ ಕಥೆ, ನನ್ನ ಸುತ್ತಮುತ್ತ ನಡೆಯುತ್ತಿರುವ ಘಟನೆಗಳು ಎಂಬ ಭಾವ ನೀಡುತ್ತಿತ್ತು.

ಯಂಡಮೂರಿ ಅವರ ಬರಹದಲ್ಲಿ ಆಕರ್ಷಣೆ ಇತ್ತು. ಆದರೆ ಚಡಪಡಿಕೆಯ ಅನುಭವ ಪಡೆಯಲು ಬೆಳಗೆರೆಯವರನ್ನು ಓದಬೇಕಿತ್ತು. ಅಂತಹ ಹಿರಿಯ ಪತ್ರಿಕೋದ್ಯಮಿಯ, ‘ಹಾಯ್ ಬೆಂಗಳೂರ್’ನಲ್ಲಿ ‘ಗುರುವಾಣಿ’ ಎಂಬ ಅಂಕಣ ಬರೆಯುವ ಅವಕಾಶ ನನ್ನದಾಗಿತ್ತು. ಅದು ಅಚಾನಕ್ ಆಗಿ ಒದಗಿದ ಭಾಗ್ಯ. ಫೇಸ್ಬುಕ್ ಮೆಸೆಂಜರ್ ಮೂಲಕ ಕಳಿಸಿದ ಬರಹ ಓದಿ, ಅಂಕಣ ಬರೆಯುವಂತೆ ಹೇಳಿದ್ದರು. ಅವರೇ ಕರೆ ಮಾಡಿ, ಭಾವಚಿತ್ರ ಪಡೆದುಕೊಂಡಿದ್ದರು. ನನ್ನ ಬರಹಗಳಿಗೆ ಹೀಗೆ ಮೊದಲ ಅವಕಾಶ ನೀಡಿದವರು ರವಿ ಬೆಳಗೆರೆ. -ಗುರುರಾಜ ಕೊಡ್ಕಣಿ ಬರಹಗಾರ, ಕಾದಂಬರಿಕಾರ

ಓದುಗರನ್ನು ಗೆಳೆಯರಂತೆ ಕಾಣುತ್ತಿದ್ದ ಬೆಳಗೆರೆ: ಆಗಿನ್ನೂ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಿದ್ದ ಕಾಲ. ರವಿ ಬೆಳಗೆರೆಯವರ ‘ಹೇಳಿ ಹೋಗು ಕಾರಣ..’ ಹಿಡಿದು ಕೂತಿದ್ದೆ. ಓದುತ್ತಾ ಹೋದಂತೆ, ನನಗೇ ತಿಳಿಯದಂತೆ ಅದರ ಪಾತ್ರವಾಗಿ, ಪುಸ್ತಕದ ಭಾಗವಾಗಿ ಭಾವುಕನಾದೆ. ನನ್ನ ಬದುಕಿನ ಬಗ್ಗೆ ಯೋಚನೆ ಮಾಡುತ್ತಾ, ನಾನು ಹೇಗೆ ರೂಪುಗೊಳ್ಳಬೇಕು ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ.

ರವಿ ಬೆಳಗೆರೆಯವರೊಂದಿಗೆ ಮಾತನಾಡಬೇಕು, ಧನ್ಯವಾದ ತಿಳಿಸಬೇಕು ಅನಿಸಿತು. ಫೇಸ್ಬುಕ್ ಮೆಸೆಂಜರ್ ಮೂಲಕ ಸಂದೇಶ ಕಳಿಸಿದೆ. ‘ಸರ್, ಯು ಆರ್ ಟೂ ಎಮೋಷನಲ್. ಒಳ್ಳೆಯದಾಗಲಿ ನಿಮಗೆ. ಆಲ್ ದಿ ಬೆಸ್ಟ್’ ಎಂದು ಪ್ರತಿಕ್ರಿಯಿಸಿದ್ದರು. ಅವರ ಒಂದು ಸಂದೇಶ ನನ್ನಲ್ಲಿ ಹೊಸ ಸ್ಫೂರ್ತಿ ತುಂಬಿತ್ತು. ಓದುಗರನ್ನು ಆಪ್ತವಾಗಿ ಹಿಡಿದಿಡುವ, ಸಾಮಾನ್ಯರಲ್ಲಿ ಸಾಮಾನ್ಯ ಓದುಗನಿಗೂ ಪ್ರತಿಕ್ರಿಯೆ ನೀಡುವ ಸಹಾನುಭೂತಿ ವಿಶೇಷವಾಗಿ ಕಂಡಿತು. ಎಲ್ಲಾ ಲೇಖಕರಲ್ಲಿ ಈ ಗುಣ ಕಾಣಲು ಸಾಧ್ಯವಿಲ್ಲ ಅಲ್ಲವೇ? -ಸುಚಿತ್ ಕೋಟ್ಯಾನ್, ಕುರ್ಕಾಲು ಪತ್ರಿಕೋದ್ಯಮ ಪ್ರಾಧ್ಯಾಪಕ

Published On - 12:37 pm, Fri, 13 November 20

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ