ಬೆಂಗಳೂರು:ಕೊರೊನಾದಿಂದಾಗಿ ಮೃತಪಟ್ಟವರ ಮೃತ ದೇಹಗಳನ್ನ ಆರೋಗ್ಯ ಇಲಾಖೆಯ ಸಿಬ್ಬಂದಿ ತೀರ ಅಮಾನವೀಯವಾಗಿ ಅಂತ್ಯಸಂಸ್ಕಾರ ಮಾಡುತ್ತಿದ್ದ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಹಾಗಾಗಿ ಹೈಕೋರ್ಟ್ ಪ್ರಕರಣದ ಹಿನ್ನೆಲೆಯಲ್ಲಿ ಸೋಂಕಿತರ ಅಂತ್ಯಕ್ರಿಯೆ ಶಿಷ್ಟಾಚಾರದಲ್ಲಿ ಕೆಲವೊಂದು ಬದಲಾವಣೆ ತಂದಿದೆ.
ಅಂತ್ಯಕ್ರಿಯೆ ವೇಳೆ ಕುಟುಂಬದ ಐವರು ಭಾಗಿಯಾಗಬಹುದು ಎಂಬ ಆದೇಶವನ್ನು ಹೈಕೋರ್ಟ್ ಹೊರಡಿಸಿದ್ದು, ದೇಹವನ್ನು ಕವರ್ ನಿಂದ ಮುಚ್ಚಿ ಚಿತಾಗಾರಕ್ಕೆ ರವಾನೆ ಮಾಡಬೇಕೆಂದು ತಿಳಿಸಿದೆ. ಜೊತೆಗೆ ಹೈಕೋರ್ಟ್ ಅಂತ್ಯಸಂಸ್ಕಾರ ಸಂಬಂಧವಾಗಿ ಸರ್ಕಾರದಿಂದ ಕೆಲ ಸ್ಪಷ್ಟನೆ ಕೇಳಿದೆ.
ಅವುಗಳೆಂದರೆ:
1) ಮೃತದೇಹವನ್ನು ಕುಟುಂಬಸ್ಥರ ವಶಕ್ಕೆ ನೀಡಲಾಗುವುದೇ?
2) ಮುಖವನ್ನೂ ಮುಚ್ಚಲಾಗುವುದರಿಂದ ಮೃತಪಟ್ಟವರ ಗುರುತು ಪತ್ತೆ ಹೇಗೆ?
3) ಮೃತದೇಹದಿಂದ ಕೊರೊನಾ ಹರಡುವುದಕ್ಕೆ ವೈಜ್ಞಾನಿಕ ಆಧಾರವಿದೆಯೇ?
4) ಕುಟುಂಬಸ್ಥರಿಗೆ ಅಂತಿಮ ಕ್ರಿಯೆ ನೆರವೇರಿಸುವ ಸ್ವಾತಂತ್ರ್ಯ ನೀಡಲಾಗುತ್ತದೆಯೇ?
ಎಂಬಿತ್ಯಾದಿ ಸ್ಪಷ್ಟನೆ ಕೇಳಿರುವ ಹೈಕೋರ್ಟ್ ಈ ಬಗ್ಗೆ ಜು. 23ರಂದು ಉತ್ತರಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ.