AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಫಿಕ್ ಸಿಗ್ನಲ್ ಗೆರೆ ದಾಟಿಲ್ಲವೆಂದು ಸವಾರ ತಕರಾರು ಎತ್ತಿದ್ದಕ್ಕೆ.. ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್

ಸಣ್ಣ ಪ್ರಕರಣಗಳಲ್ಲಿ ಮೇಲ್ಮನವಿಗೆ ಅವಕಾಶ ಕೋರಿ ಸಲ್ಲಿಸಲಾದ ರಿಟ್​ನ ವಿಚಾರಣೆ ನಡೆಸಿದ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯಸರ್ಕಾರಗಳಿಗೆ ನೋಟಿಸ್ ನೀಡಿದೆ. ಶ್ರೀಪತಿ ರಾವ್ ಎಂಬುವವರು CrPC ಸೆಕ್ಷನ್‌ 376ರ ನಿರ್ಬಂಧ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಟ್ರಾಫಿಕ್ ಸಿಗ್ನಲ್ ಗೆರೆ ದಾಟಿಲ್ಲವೆಂದು ಸವಾರ ತಕರಾರು ಎತ್ತಿದ್ದಕ್ಕೆ.. ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್
ಕರ್ನಾಟಕ ಹೈಕೋರ್ಟ್​
Follow us
KUSHAL V
|

Updated on: Jan 28, 2021 | 11:36 PM

ಬೆಂಗಳೂರು: ಸಣ್ಣ ಪ್ರಕರಣಗಳಲ್ಲಿ ಮೇಲ್ಮನವಿಗೆ ಅವಕಾಶ ಕೋರಿ ಸಲ್ಲಿಸಲಾದ ರಿಟ್​ನ ವಿಚಾರಣೆ ನಡೆಸಿದ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯಸರ್ಕಾರಗಳಿಗೆ ನೋಟಿಸ್ ನೀಡಿದೆ. ಶ್ರೀಪತಿ ರಾವ್ ಎಂಬುವವರು CrPC ಸೆಕ್ಷನ್‌ 376ರ ನಿರ್ಬಂಧ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಏನಿದು ಪ್ರಕರಣ? ಟ್ರಾಫಿಕ್ ಸಿಗ್ನಲ್ ಗೆರೆ ಮೇಲೆ ವಾಹನ ನಿಲ್ಲಿಸಿದ ಆರೋಪದಡಿ ಶ್ರೀಪತಿ ರಾವ್​ಗೆ ಪೊಲೀಸರು 100 ರೂ. ದಂಡ ವಿಧಿಸಿದ್ದರು. ಆದರೆ, ತಾನು ಸಿಗ್ನಲ್ ದಾಟಿಲ್ಲವೆಂದು ಶ್ರೀಪತಿರಾವ್ ತಕರಾರು ಎತ್ತಿದ್ದ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯ್ದೆಯಡಿ ಜಯನಗರ ಟ್ರಾಫಿಕ್ ಪೊಲೀಸರು ಕೇಸ್ ದಾಖಲಿಸಿದ್ದರು.

ಇದಾದ ಬಳಿಕ, ನಗರದ ಟ್ರಾಫಿಕ್ ಕೋರ್ಟ್ 200 ರೂಪಾಯಿ ದಂಡ ವಿಧಿಸಿತ್ತು. ಜೊತೆಗೆ, ದಂಡ ತಪ್ಪಿಸಿದರೆ 15 ದಿನಗಳ ಸೆರೆವಾಸದ ಆದೇಶ ಸಹ ನೀಡಿತ್ತು. ಇದನ್ನು ಪ್ರಶ್ನಿಸಿ ಶ್ರೀಪತಿ ಸೆಷನ್ಸ್​ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, CrPC ಸೆಕ್ಷನ್‌ 376ರ ಅಡಿಯಲ್ಲಿ ಸಣ್ಣ ಪ್ರಕರಣಗಳಲ್ಲಿ ಮೇಲ್ಮನವಿಗೆ ಅವಕಾಶವಿಲ್ಲ. ಹೀಗಾಗಿ, ಸೆಷನ್ಸ್ ಕೋರ್ಟ್ ಶ್ರೀಪತಿ ರಾವ್​ರ ಮೇಲ್ಮನವಿಯನ್ನ ತಿರಸ್ಕರಿಸಿತ್ತು. ಆದ್ದರಿಂದ, CrPC ಸೆಕ್ಷನ್‌ 376 ರದ್ದು ಕೋರಿ ಶ್ರೀಪತಿ ರಾವ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಕೆರೆ ಒತ್ತುವರಿ ಮಾಡಿ ಮಸೀದಿ ನಿರ್ಮಾಣ ಆರೋಪ: ಸರ್ವೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್ ಸೂಚನೆ