ಸರ್ಕಾರಿ ಜಮೀನು ಒತ್ತುವರಿ ಆರೋಪ: ಬೆಂ.ದಕ್ಷಿಣ BJP ಶಾಸಕ M.ಕೃಷ್ಣಪ್ಪ ವಿರುದ್ಧ PIL

ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಆರೋಪದಡಿ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ವಿರುದ್ಧ PIL ದಾಖಲಾಗಿದೆ. ಸ.ನಂ.111ನಲ್ಲಿರುವ ಸರ್ಕಾರಿ ಭೂಮಿ ಮತ್ತು ಕೆರೆ ಜಾಗವನ್ನು ಶಾಸಕರು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಕೃಷ್ಣಪ್ಪ ವಿರುದ್ಧ PIL ದಾಖಲಾಗಿದೆ.

ಸರ್ಕಾರಿ ಜಮೀನು ಒತ್ತುವರಿ ಆರೋಪ: ಬೆಂ.ದಕ್ಷಿಣ BJP ಶಾಸಕ M.ಕೃಷ್ಣಪ್ಪ ವಿರುದ್ಧ PIL
M Krishnappa
Updated By: Digi Tech Desk

Updated on: Nov 23, 2022 | 11:55 AM

ಬೆಂಗಳೂರು: ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಆರೋಪದಡಿ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ವಿರುದ್ಧ PIL ದಾಖಲಾಗಿದೆ. ಸ.ನಂ.111ನಲ್ಲಿರುವ ಸರ್ಕಾರಿ ಭೂಮಿ ಮತ್ತು ಕೆರೆ ಜಾಗವನ್ನು ಶಾಸಕರು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಕೃಷ್ಣಪ್ಪ ವಿರುದ್ಧ PIL ದಾಖಲಾಗಿದೆ.

PIL ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಒತ್ತುವರಿ ನಡೆದಿರುವ ಜಾಗದ ಸರ್ವೆ ನಡೆಸಿ ವರದಿ ನೀಡಲು ಆದೇಶ ಹೊರಡಿಸಿದೆ. ಒತ್ತುವರಿ ಮಾಡಲಾಗಿದೆಯೇ ಎಂದು ಪರಿಶೀಲಿಸಲು ಹೈಕೋರ್ಟ್​ ಸೂಚನೆ ನೀಡಿದೆ. ಜೊತೆಗೆ, ಸರ್ವೆಯಲ್ಲಿ ಒತ್ತುವರಿ ಕಂಡುಬಂದರೆ ಕೋರ್ಟ್​ ಅದರ ತೆರವಿಗೆ ಸೂಚನೆ ಸಹ ನೀಡಿದೆ. ಶಾಸಕ ಕೃಷ್ಣಪ್ಪ ವಿರುದ್ಧ ಪ್ರಜಾ ಹಕ್ಕುಗಳ ವೇದಿಕೆ PIL ದಾಖಲಿಸಿತ್ತು.

Published On - 7:21 pm, Fri, 15 January 21