ಆನ್​ಲೈನ್ ಶಿಕ್ಷಣಕ್ಕೆ ಹೈಕೋರ್ಟ್ ಅಸ್ತು, ಆದರೆ?

[lazy-load-videos-and-sticky-control id=”yWH1Om-bHdQ”] ಬೆಂಗಳೂರು: ಆನ್​ಲೈನ್ ಶಿಕ್ಷಣಕ್ಕೆ ಕರ್ನಾಟಕ ಹೈಕೋರ್ಟ್ ಸಮ್ಮತಿ ನೀಡಿದೆ. ಆನ್​ಲೈನ್ ಶಿಕ್ಷಣ ವಿದ್ಯಾರ್ಥಿಗಳ ಮೂಲಭೂತ ಹಕ್ಕು. ಹಾಗಾಗಿ, ಸರ್ಕಾರ ಮೂಲಭೂತ ಹಕ್ಕನ್ನು ನಿರ್ಬಂಧಿಸುವಂತಿಲ್ಲ ಎಂದು ತನ್ನ ತೀರ್ಪಿನಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಹೈಕೋರ್ಟ್​ ಮುಖ್ಯನ್ಯಾಯಮೂರ್ತಿ AS ಒಕಾ ಹಾಗೂ ನ್ಯಾಯಮೂರ್ತಿ R ನಟರಾಜ್​ರವರ ಪೀಠವು ತೀರ್ಪನ್ನು ನೀಡಿದೆ. ಸರ್ಕಾರ ಆನ್​ಲೈನ್ ಶಿಕ್ಷಣಕ್ಕೆ ನಿರ್ಬಂಧ ಹೇರಿದೆ. ಸರ್ಕಾರದ ಎರಡೂ ಆದೇಶಗಳು ಕಾನೂನುಬಾಹಿರವಾಗಿದೆ. ಹೀಗಾಗಿ, ಸರ್ಕಾರ ಜೂನ್ 15ಮತ್ತು ಜೂನ್ 27ರಂದು ಹೊರಡಿಸಿದ್ದ ಎರಡೂ ಆದೇಶಗಳಿಗೆ […]

ಆನ್​ಲೈನ್ ಶಿಕ್ಷಣಕ್ಕೆ ಹೈಕೋರ್ಟ್ ಅಸ್ತು, ಆದರೆ?
ಕರ್ನಾಟಕ ಹೈಕೋರ್ಟ್​
Updated By:

Updated on: Jul 08, 2020 | 7:56 PM

[lazy-load-videos-and-sticky-control id=”yWH1Om-bHdQ”] ಬೆಂಗಳೂರು: ಆನ್​ಲೈನ್ ಶಿಕ್ಷಣಕ್ಕೆ ಕರ್ನಾಟಕ ಹೈಕೋರ್ಟ್ ಸಮ್ಮತಿ ನೀಡಿದೆ. ಆನ್​ಲೈನ್ ಶಿಕ್ಷಣ ವಿದ್ಯಾರ್ಥಿಗಳ ಮೂಲಭೂತ ಹಕ್ಕು. ಹಾಗಾಗಿ, ಸರ್ಕಾರ ಮೂಲಭೂತ ಹಕ್ಕನ್ನು ನಿರ್ಬಂಧಿಸುವಂತಿಲ್ಲ ಎಂದು ತನ್ನ ತೀರ್ಪಿನಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಹೈಕೋರ್ಟ್​ ಮುಖ್ಯನ್ಯಾಯಮೂರ್ತಿ AS ಒಕಾ ಹಾಗೂ ನ್ಯಾಯಮೂರ್ತಿ R ನಟರಾಜ್​ರವರ ಪೀಠವು ತೀರ್ಪನ್ನು ನೀಡಿದೆ.

ಸರ್ಕಾರ ಆನ್​ಲೈನ್ ಶಿಕ್ಷಣಕ್ಕೆ ನಿರ್ಬಂಧ ಹೇರಿದೆ. ಸರ್ಕಾರದ ಎರಡೂ ಆದೇಶಗಳು ಕಾನೂನುಬಾಹಿರವಾಗಿದೆ. ಹೀಗಾಗಿ, ಸರ್ಕಾರ ಜೂನ್ 15ಮತ್ತು ಜೂನ್ 27ರಂದು ಹೊರಡಿಸಿದ್ದ ಎರಡೂ ಆದೇಶಗಳಿಗೆ ಉಚ್ಛ ನ್ಯಾಯಾಲಯ ತಡೆ ನೀಡಿದೆ.

‘ಹೈಕೋರ್ಟ್ ಆನ್​ಲೈನ್ ಶಿಕ್ಷಣ ಕಡ್ಡಾಯ ಮಾಡಿಲ್ಲ’
ಆದರೆ, ಹೈಕೋರ್ಟ್ ಆನ್​ಲೈನ್ ಶಿಕ್ಷಣವನ್ನ ಕಡ್ಡಾಯ ಮಾಡಿಲ್ಲ. ಹೆಚ್ಚುವರಿ ಶುಲ್ಕ ನಿಗದಿಗೂ ಶಾಲೆಗಳಿಗೆ ಸೂಚನೆ ನೀಡಿಲ್ಲ. ಹಾಗಾಗಿ, ತಾನು ನೀಡಿರುವ ಆದೇಶವನ್ನು ತಪ್ಪಾಗಿ ವ್ಯಾಖ್ಯಾನಿಸದಂತೆ ಕೋರ್ಟ್ ಸೂಚಿಸಿದೆ. ಕೊವಿಡ್ ಪರಿಸ್ಥಿತಿಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಸದ್ಯದ ಪರಿಸ್ಥಿತಿಯಲ್ಲಿ ಮಾತ್ರ ಆನ್ ಲೈನ್ ಶಿಕ್ಷಣ ನೀಡಿ ಎಂದು ಸಹ ಹೇಳಿದೆ.

ಜೊತೆಗೆ, ಸರ್ಕಾರಿ ವಿದ್ಯಾರ್ಥಿಗಳಿಗೂ ಆನ್​ಲೈನ್ ಶಿಕ್ಷಣ ಸೌಲಭ್ಯ ಕಲ್ಪಿಸಬೇಕು. ಸರ್ಕಾರ ಗ್ರಾಮೀಣ ಭಾಗಕ್ಕೂ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಹೇಳಿದೆ. ಸೌಕರ್ಯ ಕಲ್ಪಿಸಲು ಸರ್ಕಾರ ವಿಫಲವಾದರೆ ಅದು ಬೇರೆಯವರು ಹೊಣೆಯಲ್ಲ. ಸರ್ಕಾರಕ್ಕೆ ಸಾಧ್ಯವಿಲ್ಲವೆಂದು ಖಾಸಗಿಯವರಿಗೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಆದೇಶಿಸಿದೆ. 1983 ರ ಕಾಯ್ದೆಯಲ್ಲಿಯೂ ನಿರ್ಬಂಧ ವಿಧಿಸುವ ಅಧಿಕಾರವಿಲ್ಲ. ಸರ್ಕಾರ ಒಂದೆಡೆ ಆನ್ ಲೈನ್ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು ಎಂದಿದೆ. ಮತ್ತೊಂದೆಡೆ ಆನ್​ಲೈನ್ ಶಿಕ್ಷಣಕ್ಕೆ ನಿರ್ಬಂಧ ವಿಧಿಸಿದೆ. ಹೀಗಾಗಿ, ಸರ್ಕಾರದ ಧೋರಣೆ ಒಪ್ಪಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ಹೊರಡಿಸಿದೆ.

Published On - 4:14 pm, Wed, 8 July 20