2 ದಿನ ಆದ್ರೂ ಮೃತದೇಹ ಕೊಟ್ಟಿಲ್ಲ, ಶವಾಗಾರದ ಮುಂದೆ ಕುಟುಂಬಸ್ಥರ ಆಕ್ರಂದನ
ಮಂಡ್ಯ: ನಗರದ ಸ್ವರ್ಣಸಂದ್ರದ 53 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯ ವಿಮ್ಸ್‌ನಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ಆದರೆ 2 ದಿನ ಕಳೆದರೂ ವ್ಯಕ್ತಿಯ ಮೃತದೇಹ ನೀಡದ ಹಿನ್ನೆಲೆಯಲ್ಲಿ ಮಿಮ್ಸ್ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬಸ್ಥರು ಶವಾಗಾರದ ಮುಂದೆ ಎರಡು ದಿನದಿಂದ ಕಾಯುತ್ತಿದ್ದಾರೆ. ಎರಡು ದಿನ ಕಳೆದರೂ ಮಂಡ್ಯ ಮಿಮ್ಸ್ ಸಿಬ್ಬಂದಿ ಮೃತನ ಶವ ನೀಡಿಲ್ಲ. ಶವಗಾರದ ಮುಂದೆ ಸತ್ತವರ ಕುಟುಂಬಸ್ಥರ ಆಕ್ರಂದನ […]
ಮಂಡ್ಯ: ನಗರದ ಸ್ವರ್ಣಸಂದ್ರದ 53 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯ ವಿಮ್ಸ್‌ನಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ಆದರೆ 2 ದಿನ ಕಳೆದರೂ ವ್ಯಕ್ತಿಯ ಮೃತದೇಹ ನೀಡದ ಹಿನ್ನೆಲೆಯಲ್ಲಿ ಮಿಮ್ಸ್ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬಸ್ಥರು ಶವಾಗಾರದ ಮುಂದೆ ಎರಡು ದಿನದಿಂದ ಕಾಯುತ್ತಿದ್ದಾರೆ. ಎರಡು ದಿನ ಕಳೆದರೂ ಮಂಡ್ಯ ಮಿಮ್ಸ್ ಸಿಬ್ಬಂದಿ ಮೃತನ ಶವ ನೀಡಿಲ್ಲ. ಶವಗಾರದ ಮುಂದೆ ಸತ್ತವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದೇ ಶವಾಗಾರದಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಶವಾಗಾರದ ಪಕ್ಕದಲ್ಲೇ ಕೋವಿಡ್ ವಾರ್ಡ್ ಇದೆ. ಕೊರೊನಾ ಹರಡುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬಸ್ಥರಿದ್ದಾರೆ.
ಊರಿನಲ್ಲಿ ಶವಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಂಡಿದ್ದೇವೆ. ಬಂದ ನೆಂಟರು ಎಲ್ಲಾ ಹೋಗ್ತಾ ಇದ್ದಾರೆ. ಇವರ ಬಾಯಿಗೆ ಮಣ್ಣಾಕಾ, ಶವ ಯಾಕೆ ಕೊಡ್ತಾ ಇಲ್ಲ. ಅವನು ಸತ್ತ ಈಗ ಇವರು ಬದುಕಿದ್ದವರನ್ನು ಸಾಯಿಸುತ್ತಾ ಇದ್ದಾರೆ. ಇಂತಹ ಆಸ್ಪತ್ರೆಗಳು ಯಾಕೆ ಇರಬೇಕು. ಕೊರೊನಾ ಇದೆ, ಹೊರಗೆ ಬರಬೇಡಿ ಅಂತಾರೆ. ಈಗ ನಮ್ಮನ್ನ ಎರಡು ದಿನದಿಂದ ಶವಾಗಾರದ ಬಳಿ ಕೂರಿಸಿದ್ದಾರೆ ಎಂದು ಮಂಡ್ಯ ಮಿಮ್ಸ್ ಆಸ್ಪತ್ರೆಯ ಅಧಿಕಾರಿಗಳಿಗೆ ಕುಟುಂಬಸ್ಥರು ಹಿಡಿ ಶಾಪ ಹಾಕಿದ್ದಾರೆ.
Published On - 2:36 pm, Wed, 8 July 20