AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನುಷ್ಯರ ಮೇಲೆ ಕೊರೊನಾ ಲಸಿಕೆ ಪ್ರಯೋಗ! ಚೀನಾದಿಂದ ಮಹತ್ತರ ಹೆಜ್ಜೆ

ಕೊರೊನಾ ಹೆಮ್ಮಾರಿಯನ್ನ ಹತ್ತಿಕ್ಕಲು ಹಲವು ದೇಶಗಳು ಪ್ರಯತ್ನಿಸುತ್ತಿವೆ. ಎಲ್ಲರಿಗಿಂತ ಮೊದಲು ನಾವೇ ಮದ್ದು ಕಂಡುಹಿಡಿಯಬೇಕು ಎಂಬ ವಾಂಛೆ ಎಲ್ಲರಿಗೂ ಇದೆ. ಇವುಗಳಲ್ಲಿ ವೈರಸ್​ನ ತವರು ದೇಶವಾದ ಚೀನಾ ಕೂಡ ಒಂದು. ಹೌದು, ಚೀನಾದ ಸಿನೋವಾಕ್ ಬಯೋಟೆಕ್ (Sinovac Biotech) ಕಂಪನಿಯು ಕೊರೊನಾ ಲಸಿಕೆಯೊಂದನ್ನು ಕಂಡುಹಿಡಿದಿದೆ. ಕಳೆದ ವಾರ ಅನುಮೋದನೆ ಪಡೆದ ಬಳಿಕ ಮೂರನೇ ಹಂತವಾಗಿ ಮಾನವನ ಮೇಲೆ ಅದರ ಪ್ರಯೋಗ ಆರಂಭವಾಗಿದೆ. ಆದರೆ, ವಿಪರ್ಯಾಸವೆಂದರೆ, ಈ ಚೀನಾ ಕಂಪನಿ ಬ್ರೆಜಿಲ್​ನಲ್ಲಿರುವ ಸೋಂಕಿತರ ಮೇಲೆ ಲಸಿಕೆಯ ಪ್ರಯೋಗಕ್ಕೆ ಮುಂದಾಗಿದೆ. […]

ಮನುಷ್ಯರ ಮೇಲೆ ಕೊರೊನಾ ಲಸಿಕೆ ಪ್ರಯೋಗ! ಚೀನಾದಿಂದ ಮಹತ್ತರ ಹೆಜ್ಜೆ
KUSHAL V
| Edited By: |

Updated on:Jul 08, 2020 | 6:47 PM

Share

ಕೊರೊನಾ ಹೆಮ್ಮಾರಿಯನ್ನ ಹತ್ತಿಕ್ಕಲು ಹಲವು ದೇಶಗಳು ಪ್ರಯತ್ನಿಸುತ್ತಿವೆ. ಎಲ್ಲರಿಗಿಂತ ಮೊದಲು ನಾವೇ ಮದ್ದು ಕಂಡುಹಿಡಿಯಬೇಕು ಎಂಬ ವಾಂಛೆ ಎಲ್ಲರಿಗೂ ಇದೆ. ಇವುಗಳಲ್ಲಿ ವೈರಸ್​ನ ತವರು ದೇಶವಾದ ಚೀನಾ ಕೂಡ ಒಂದು.

ಹೌದು, ಚೀನಾದ ಸಿನೋವಾಕ್ ಬಯೋಟೆಕ್ (Sinovac Biotech) ಕಂಪನಿಯು ಕೊರೊನಾ ಲಸಿಕೆಯೊಂದನ್ನು ಕಂಡುಹಿಡಿದಿದೆ. ಕಳೆದ ವಾರ ಅನುಮೋದನೆ ಪಡೆದ ಬಳಿಕ ಮೂರನೇ ಹಂತವಾಗಿ ಮಾನವನ ಮೇಲೆ ಅದರ ಪ್ರಯೋಗ ಆರಂಭವಾಗಿದೆ.

ಆದರೆ, ವಿಪರ್ಯಾಸವೆಂದರೆ, ಈ ಚೀನಾ ಕಂಪನಿ ಬ್ರೆಜಿಲ್​ನಲ್ಲಿರುವ ಸೋಂಕಿತರ ಮೇಲೆ ಲಸಿಕೆಯ ಪ್ರಯೋಗಕ್ಕೆ ಮುಂದಾಗಿದೆ. ಬರೋಬ್ಬರಿ, 9 ಸಾವಿರ ಜನರ ಮೇಲೆ ಸಿನೋವಾಕ್ ಅದರ ಪ್ರಯೋಗ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಇಂಟರೆಸ್ಟಿಂಗ್​ ವಿಷಯ ಅಂದರೆ, ಸಿನೋವಾಕ್ ಬಯೋಟೆಕ್ ಕಂಪನಿಯ ವ್ಯಾಕ್ಸಿನ್​ ಅಲ್ಲದೆ, ಆಕ್ಸ್‌ಫರ್ಡ್ (Oxford) ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿ ಅಸ್ಟ್ರಾ ಜೆನೆಕಾ (Astra Zeneca) ಕಂಪನಿ ತಯಾರಿಸುತ್ತಿರುವ ಲಸಿಕೆಯ ಪ್ರಯೋಗವೂ 3ನೇ ಹಂತ ತಲುಪಿದೆ. ವಿಶ್ವದಲ್ಲಿ ಈ ಎರಡು ಲಸಿಕೆ ಮಾತ್ರ ಮೂರನೇ ಹಂತಕ್ಕೆ ಕಾಲಿಟ್ಟಿರೋದು.

ಇನ್ನುಳಿದ ಪ್ರಯೋಗಗಳೆಲ್ಲಾ ಮೊದಲು ಅಥವಾ ಎರಡನೇ ಹಂತದಲ್ಲಿವೆ. ಅದರಲ್ಲಿ ಸ್ವದೇಶಿ ನಿರ್ಮಿತ ಭಾರತ ಬಯೋಟೆಕ್ ಮತ್ತು ಐಸಿಎಂಆರ್​ನ ಕೋವ್ಯಾಕ್ಸಿನ್ ಸದ್ಯಕ್ಕೆ ಮೊದಲನೇ ಹಂತದಲ್ಲಿ ಇದೆ.

Published On - 2:14 pm, Wed, 8 July 20

Follow Us
KUSHAL V
KUSHAL V
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್