ಈ ವರ್ಷ ಶಾಲೆ ಆರಂಭಿಸದಿರಲು ಕೀನ್ಯಾ ಸರ್ಕಾರ ಮಹತ್ವದ ನಿರ್ಧಾರ
ಕೊರೊನಾ ಮಹಾಮಾರಿಯನ್ನು ಊರಲ್ಲಿ ಇಟ್ಕೊಂಡು ಶಾಲೆಗಳನ್ನು ಆರಂಭಿಸಲು ಆಗದು. ಮೊದಲು ಅದಕ್ಕೊಂದು ಗತಿ ಕಾಣಿಸಿ, ಆಮೇಲೆ ಅಂದ್ರೆ ಮುಂದಿನ ವರ್ಷದಿಂದ ಶಾಲೆಗಳನ್ನು ತೆರೆಯುವ ಬಗ್ಗೆ ಆಲೋಚಿಸುವುದಾಗಿ ಕೀನ್ಯಾ ಸರ್ಕಾರ ಘೋಷಿಸಿದೆ. ಕೀನ್ಯಾದಲ್ಲಿ ಶೈಕ್ಷಣಿಕ ವರ್ಷ ಜನವರಿಯಲ್ಲಿ ಪ್ರಾರಂಭವಾಗಿ ನವೆಂಬರ್ ತಿಂಗಳಲ್ಲಿ ಕೊನೆಗೊಳ್ಳುತ್ತದೆ. ಹಾಗಾಗಿ ಪ್ರೈಮರಿ ಮತ್ತು ಸೆಕೆಂಡೆರಿ ಶಾಲಾ ಮಕ್ಕಳು ಜನವರಿ ನಂತರವಷ್ಟೇ ಶಾಲೆಗಳಿಗೆ ಬರಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಹಾಗಾದ್ರೆ ಪ್ರಸ್ತುತ ಶೈಕ್ಷಣಿಕ ವರ್ಷದ ಲೆಕ್ಕಾಚಾರ ಹೇಗೆ ಎಂದು ಕೇಳಿದಾಗ ಅಲ್ಲಿನ ಶಿಕ್ಷಣ ಸಚಿವ ಜಾರ್ಜ್ […]
ಕೊರೊನಾ ಮಹಾಮಾರಿಯನ್ನು ಊರಲ್ಲಿ ಇಟ್ಕೊಂಡು ಶಾಲೆಗಳನ್ನು ಆರಂಭಿಸಲು ಆಗದು. ಮೊದಲು ಅದಕ್ಕೊಂದು ಗತಿ ಕಾಣಿಸಿ, ಆಮೇಲೆ ಅಂದ್ರೆ ಮುಂದಿನ ವರ್ಷದಿಂದ ಶಾಲೆಗಳನ್ನು ತೆರೆಯುವ ಬಗ್ಗೆ ಆಲೋಚಿಸುವುದಾಗಿ ಕೀನ್ಯಾ ಸರ್ಕಾರ ಘೋಷಿಸಿದೆ.
ಕೀನ್ಯಾದಲ್ಲಿ ಶೈಕ್ಷಣಿಕ ವರ್ಷ ಜನವರಿಯಲ್ಲಿ ಪ್ರಾರಂಭವಾಗಿ ನವೆಂಬರ್ ತಿಂಗಳಲ್ಲಿ ಕೊನೆಗೊಳ್ಳುತ್ತದೆ. ಹಾಗಾಗಿ ಪ್ರೈಮರಿ ಮತ್ತು ಸೆಕೆಂಡೆರಿ ಶಾಲಾ ಮಕ್ಕಳು ಜನವರಿ ನಂತರವಷ್ಟೇ ಶಾಲೆಗಳಿಗೆ ಬರಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಹಾಗಾದ್ರೆ ಪ್ರಸ್ತುತ ಶೈಕ್ಷಣಿಕ ವರ್ಷದ ಲೆಕ್ಕಾಚಾರ ಹೇಗೆ ಎಂದು ಕೇಳಿದಾಗ ಅಲ್ಲಿನ ಶಿಕ್ಷಣ ಸಚಿವ ಜಾರ್ಜ್ ಮಗೊಹಾ ಅವರು ‘2020ನೇ ಸಾಲಿನ ಶೈಕ್ಷಣಿಕ ವರ್ಷ ಕೊರೊನಾ ವೈರಸ್ ನಿರ್ಬಂಧಗಳಿಂದಾಗಿ ಕೊನೆಗೊಂಡಿದೆ ಎಂದು ಪರಿಗಣಿಸಲಾಗುವುದು. ಜೊತೆಗೆ ಯಾವುದೇ ಪರೀಕ್ಷೆಯನ್ನು ಸಹ ನಡೆಸುವುದಿಲ್ಲ’ ಎಂದು ಸಾರಿದ್ದಾರೆ.
ಮಾರ್ಚ್ ತಿಂಗಳಲ್ಲಿ ಕೀನ್ಯಾದಲ್ಲಿ 3 ಕೊವಿಡ್ ಕೇಸ್ಗಳು ಪತ್ತೆಯಾಗುತ್ತಿದ್ದಂತೆ ಅದೇ ತಿಂಗಳು 25ರಿಂದ ಶಾಲೆಗಳನ್ನು ಮುಚ್ಚಲಾಗಿದೆ. ತಾಜಾ ಮಾಹಿತಿ ಪ್ರಕಾರ ಪೂರ್ವ ಆಫ್ರಿಕಾ ರಾಷ್ಟ್ರವಾದ ಕೀನ್ಯಾದಲ್ಲಿ 8 ಸಾವಿರ ಸೋಂಕು ಪತ್ತೆಯಾಗಿದೆ. ಸೋಂಕಿಗೆ 164 ಮಂದಿ ಪ್ರಾಣ ತೆತ್ತಿದ್ದಾರೆ.
Published On - 3:49 pm, Wed, 8 July 20