ಸದ್ಯಕ್ಕೆ ಮಸೀದಿಯಲ್ಲಿ ಲೌಡ್ ಸ್ಪೀಕರ್ ಬಳಕೆ ನಿಲ್ಲಿಸಲಾಗಿದೆ: ಹೈಕೋರ್ಟ್​ಗೆ ಮೆಮೋ ಸಲ್ಲಿಸಿದ ಪೊಲೀಸರು

| Updated By: ಸಾಧು ಶ್ರೀನಾಥ್​

Updated on: Dec 22, 2020 | 4:45 PM

ಗೋವಿಂದರಾಜನಗರ ಮಸೀದಿಯಲ್ಲಿ ಲೌಡ್ ಸ್ಪೀಕರ್ ಬಳಕೆಯ ವಿರುದ್ಧ ಸಲ್ಲಿದ ಮೆಮೋವನ್ನು ಗಮನಿಸಿದ ಹೈಕೋರ್ಟ್​ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಲು ಪೊಲೀಸರಿಗೆ ಸೂಚನೆ ನೀಡಿದೆ. ಶಬ್ಧ ಮಾಲಿನ್ಯದ ಕುರಿತು ದೂರು ಬಂದರೆ ಅವುಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಸದ್ಯಕ್ಕೆ ಮಸೀದಿಯಲ್ಲಿ ಲೌಡ್ ಸ್ಪೀಕರ್ ಬಳಕೆ ನಿಲ್ಲಿಸಲಾಗಿದೆ: ಹೈಕೋರ್ಟ್​ಗೆ ಮೆಮೋ ಸಲ್ಲಿಸಿದ ಪೊಲೀಸರು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಗೋವಿಂದರಾಜನಗರ ಮಸೀದಿಯಲ್ಲಿ ಲೌಡ್ ಸ್ಪೀಕರ್ ಬಳಕೆ ಮಾಡಿದ ಬಗ್ಗೆ ಸುಮಂಗಲ ಎ. ಸ್ವಾಮಿ  ಎಂಬುವವರು ಕೋರ್ಟ್​ಗೆ ಪಿಐಎಲ್ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಸ್ಥಳ ಪರಿಶೀಲನೆ ನಡೆಸಿ, ಹೆಚ್ಚಿನ ಮಾಹಿತಿ ನೀಡುವಂತೆ  ಪೊಲೀಸರಿಗೆ ತಿಳಿಸಿತ್ತು. ಅದರಂತೆ  ಪರಿಶೀಲನೆ ನಡೆಸಿ, ಸದ್ಯಕ್ಕೆ ಮಸೀದಿಯಲ್ಲಿ ಲೌಡ್ ಸ್ಪೀಕರ್ ಬಳಕೆ ನಿಲ್ಲಿಸಲಾಗಿದೆ ಎಂದು ಪೊಲೀಸರು ಹೈಕೋರ್ಟ್​ಗೆ ಮೆಮೋ ಸಲ್ಲಿಸಿದ್ದಾರೆ.

ಗೋವಿಂದರಾಜನಗರ ಮಸೀದಿಯಲ್ಲಿ ಲೌಡ್ ಸ್ಪೀಕರ್ ಬಳಕೆಯ ವಿರುದ್ಧ ಸಲ್ಲಿಸಿದ ಮೆಮೋವನ್ನು ಗಮನಿಸಿದ ಹೈಕೋರ್ಟ್​ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಲು ಪೊಲೀಸರಿಗೆ ಸೂಚನೆ ನೀಡಿದೆ. ಈ ಮಧ್ಯೆ, ಶಬ್ಧ ಮಾಲಿನ್ಯದ ಕುರಿತು ದೂರು ಬಂದರೆ ಅವುಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ಸೂಚನೆ ನೀಡಿದ್ದು, ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿದೆ. ಈ ಸಂಬಂಧದ ವಿಚಾರಣೆಯನ್ನು ಹೈಕೋರ್ಟ್ ಜನವರಿ 21ಕ್ಕೆ ಮುಂದೂಡಿದೆ.

ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ: ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ