ನಗರದಲ್ಲಿ ಇಂದೂ ಮುಂದುವರಿಯಲಿದೆ ನಿಷೇಧಾಜ್ಞೆ, ಟೌನ್‌ ಹಾಲ್‌ ಬಳಿ ಬಿಗಿಭದ್ರತೆ

|

Updated on: Dec 20, 2019 | 9:12 AM

ಬೆಂಗಳೂರು: ಪೌರತ್ವ ತಿದ್ದುಪಡಿ ವಿರೋಧಿಸಿ ನಗರದಲ್ಲಿ ಪ್ರತಿಭಟನೆ ಹಿನ್ನೆಲೆ ಇಂದೂ ಕೂಡ ನಿಷೇಧಾಜ್ಞೆ ಮುಂದುವರಿಯಲಿದೆ. ನಿನ್ನೆ ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆ ನಡೆದಿತ್ತು. ಧರಣಿನಿರತರಾಗಿದ್ದ 244 ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು 8 ಎಫ್​ಐಆರ್ ದಾಖಲಿಸಿದ್ದರು. ಹೀಗಾಗಿ ಇಂದು ಕೂಡ ಪ್ರತಿಭಟನೆ ನಡೆಸುವ ಸಾಧ್ಯತೆ ಹೆಚ್ಚಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಟೌನ್‌ ಹಾಲ್‌ ಬಳಿ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಕೆಎಸ್​ಆರ್​ಪಿ ಹಾಗೂ ಸಿಎಆರ್‌ ತುಕಡಿಗಳ ನಿಯೋಜನೆ ಮಾಡಲಾಗಿದೆ. ಟೌನ್‌ ಹಾಲ್‌ ಸಂಪರ್ಕಿಸುವ ರಸ್ತೆ ದ್ವಾರದಲ್ಲಿ ಪ್ರತಿಭಟನಾಕಾರರನ್ನು ತಡೆಯಲು ಬ್ಯಾರಿಕೇಡ್​ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ನಗರದಲ್ಲಿ ಇಂದೂ ಮುಂದುವರಿಯಲಿದೆ ನಿಷೇಧಾಜ್ಞೆ, ಟೌನ್‌ ಹಾಲ್‌ ಬಳಿ ಬಿಗಿಭದ್ರತೆ
Follow us on

ಬೆಂಗಳೂರು: ಪೌರತ್ವ ತಿದ್ದುಪಡಿ ವಿರೋಧಿಸಿ ನಗರದಲ್ಲಿ ಪ್ರತಿಭಟನೆ ಹಿನ್ನೆಲೆ ಇಂದೂ ಕೂಡ ನಿಷೇಧಾಜ್ಞೆ ಮುಂದುವರಿಯಲಿದೆ. ನಿನ್ನೆ ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆ ನಡೆದಿತ್ತು. ಧರಣಿನಿರತರಾಗಿದ್ದ 244 ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು 8 ಎಫ್​ಐಆರ್ ದಾಖಲಿಸಿದ್ದರು.

ಹೀಗಾಗಿ ಇಂದು ಕೂಡ ಪ್ರತಿಭಟನೆ ನಡೆಸುವ ಸಾಧ್ಯತೆ ಹೆಚ್ಚಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಟೌನ್‌ ಹಾಲ್‌ ಬಳಿ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಕೆಎಸ್​ಆರ್​ಪಿ ಹಾಗೂ ಸಿಎಆರ್‌ ತುಕಡಿಗಳ ನಿಯೋಜನೆ ಮಾಡಲಾಗಿದೆ. ಟೌನ್‌ ಹಾಲ್‌ ಸಂಪರ್ಕಿಸುವ ರಸ್ತೆ ದ್ವಾರದಲ್ಲಿ ಪ್ರತಿಭಟನಾಕಾರರನ್ನು ತಡೆಯಲು ಬ್ಯಾರಿಕೇಡ್​ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

Published On - 7:31 am, Fri, 20 December 19