ಬೆಳಗಾವಿ: ಪೊಲೀಸರು ನೀಡುತ್ತಿದ್ದ ಸಮನ್ಸ್ ಖಾಸಗೀಕರಣಕ್ಕೆ ಚಿಂತನೆ ನಡೆಸಲಾಗಿರುವ ಬಗ್ಗೆ ಸುಳಿವು ಲಭ್ಯವಾಗಿದೆ. ಈ ಬಗ್ಗೆ, ಬೆಳಗಾವಿ ಜಿಲ್ಲೆ ಕಿತ್ತೂರಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಬೇರೆ ಏಜೆನ್ಸಿ ಮೂಲಕ ಸಮನ್ಸ್ ಕೊಡಿಸುವ ಚಿಂತನೆ ಇದೆ. ಇದರಿಂದ ಇಲಾಖೆಯಲ್ಲಿ ಮ್ಯಾನ್ ಪವರ್ ಉಳಿಯುತ್ತದೆ. ಇಲ್ಲದಿದ್ರೆ ಪೋಸ್ಟ್ ಆಫೀಸ್ ಮೂಲಕ ಮಾಡುವ ಚಿಂತನೆ ಇದೆ. ಪೋಸ್ಟ್ ಆಫೀಸ್ಗಳಿಗೆ ಹಣಕೊಟ್ಟು ಮಾಡಿಸಬೇಕು ಎಂದಿದೆ. ಪೊಲೀಸರಿಗೆ ಎಲ್ಲಾ ರೀತಿಯ ಟ್ರೇನಿಂಗ್ ಕೊಟ್ಟಿರುತ್ತೇವೆ. ಅವರನ್ನ ಪೋಸ್ಟ್ಮ್ಯಾನ್ ಕೆಲಸಕ್ಕೆ ಹಚ್ಚೋದು ಸರಿಯಲ್ಲ ಎಂದು ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ನಟಿ, ಸ್ಟಾರ್ ನಿರೂಪಕಿ ಅನುಶ್ರೀ ಡ್ರಗ್ಸ್ ಕೇಸ್ ವಿಚಾರವಾಗಿ ಆರಗ ಜ್ಞಾನೇಂದ್ರ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆ ಬಗ್ಗೆ ಈಗಾಗಲೇ ವಿಚಾರಣೆ ಆಗಿದೆ, ಚಾರ್ಜ್ಶೀಟ್ ಸಹ ಸಲ್ಲಿಕೆ ಆಗಿದೆ. ಮತ್ತೇನಾದರೂ ಇದ್ದರೆ ಪುನಃ ಕೇಸ್ನ ವಿಚಾರಣೆ ಆಗುತ್ತೆ. ಕೋರ್ಟ್ ಹಾಗೂ ಪೊಲೀಸರು ಹೆಸರು ಪ್ರಸ್ತಾಪಿಸಿಲ್ಲ. ಮಧ್ಯದಲ್ಲಿ ಯಾರೋ ಹೆಸರು ಪ್ರಸ್ತಾಪ ಮಾಡುತ್ತಿದ್ದಾರೆ. ಅದನ್ನು ತೆಗೆದುಕೊಂಡು ನಾವೇನು ಮಾಡಬೇಕು? ಆ ಬಗ್ಗೆ ನಾನು ಪ್ರತಿಕ್ರಿಯಿಸಲು ಆಗುತ್ತಾ ಎಂದು ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.
ಕರಾವಳಿ ಪ್ರದೇಶದಲ್ಲಿ ತುಂಬಾ ವಿಚಿತ್ರ ಶಕ್ತಿಗಳು ತಲೆ ಎತ್ತುವ ಸ್ಥಿತಿಯಿದೆ. ಗೋವಾದಿಂದ ಕೇರಳದ ಗಡಿಯವರೆಗೆ ಕಟ್ಟೆಚ್ಚರ ವಹಿಸಬೇಕಿದೆ. ಮೀನುಗಾರರ ವೇಷದಲ್ಲಿ ಬಂದು ಮುಂಬೈನಲ್ಲಿ ನಡೆಸಿದ ಕೃತ್ಯ ಎಲ್ಲರಿಗೂ ಗೊತ್ತಿದೆ. ಹೀಗಾಗಿ ಕರಾವಳಿ ಕಾವಲು ಪಡೆ ಇನ್ನಷ್ಡು ಬಲಗೊಳ್ಳಬೇಕು. ಕರಾವಳಿ ಕಾವಲು ಪಡೆ ಸ್ಪೀಡ್ ಬೋಟ್ಗಳನ್ನು ಇನ್ನಷ್ಟು ಒದಗಿಸಲು ಸಿದ್ದರಾಗಿದ್ದೇವೆ. ದೇಶ ವಿರೋಧಿ ಕೃತ್ಯ, ದಂದೆ ನಡೆಸುವವರ ಮೇಲೆ ಕಣ್ಗಾವಲು ಇಡಲು ಹೇಳಿದ್ದೇವೆ. ಪಟ್ಟಣ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥಿತ ಭಂಗ ಮಾಡುವ ರೌಡಿ ಪಡೆಗಳನ್ನು ಮೆಟ್ಟಿ ನಿಲ್ಲಬೇಕು ಎಂದು ತಿಳಿಸಿದ್ದೇನೆ. ಜನರ ನೆಮ್ಮದಿ ಬದುಕಿಗೆ ತೊಂದರೆ ಉಂಟುಮಾಡುವ ದುಷ್ಕರ್ಮಿಗಳನ್ನು ಮಟ್ಟ ಹಾಕಲು ಸೂಚಿಸಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಈ ಮೊದಲು ತಿಳಿಸಿದ್ದರು.
ಅನೇಕ ಮಾನದಂಡಗಳನ್ನು ಆಧರಿಸಿ ರೌಡಿ ಶೀಟರ್ ಪಟ್ಟಿಯನ್ನು ಪರಾಮರ್ಶೆ ಮಾಡುತ್ತೇವೆ. ರಾಜ್ಯದಾದ್ಯಂತ ಸಣ್ಣಪುಟ್ಟ ಚಳುವಳಿಗಾರರ ಮೇಲೆ ರೌಡಿಶಿಟ್ ಹಣೆ ಪಟ್ಟಿ ಕಟ್ಟಿದ್ದಾರೆ. ಇದರಲ್ಲಿ ಯಾವುದೇ ಬೇರೆ ಉದ್ದೇಶವಿಲ್ಲ. ಜತೆಗೆ ರಾಜಕೀಯ ಕಾರಣಕ್ಕೂ ನಾವು ಹೀಗೆ ಮಾಡಿಲ್ಲ. ರೌಡಿ ಶೀಟರ್ ಮಾನದಂಡದ ಆಧಾರದ ಮೇಲೆ ಪಟ್ಟಿಯನ್ನು ಪರಾಮರ್ಶನೆ ಮಾಡುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಆರಗ ಜ್ಞಾನೇಂದ್ರ, ಸಿಟಿ ರವಿ ಡ್ರಗ್ಸ್ ತಗೊಂಡಂತೆ ಮಾತಾಡ್ತಾರೆ; ಅವರ ಕೂದಲನ್ನು ಪರೀಕ್ಷೆಗೆ ಕಳಿಸಬೇಕು: ಶಿವರಾಜ್ ತಂಗಡಗಿ
ಇದನ್ನೂ ಓದಿ: ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಆದಾಯ ಮಿತಿಗೆ ತಿದ್ದುಪಡಿ ತರಲು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ