ಪಾದರಸದಂತೆ ಓಡಾಡುತ್ತಿದ್ದ ಶಾಸಕ ರೇಣುಕಾಚಾರ್ಯ ಪಾದಕ್ಕೆ ಮುಂಬೈನಲ್ಲಿ ಶಸ್ತ್ರಚಿಕಿತ್ಸೆ; ಒಂದು ತಿಂಗಳು ಚುಟ್ಟಿ

| Updated By: ಸಾಧು ಶ್ರೀನಾಥ್​

Updated on: Oct 28, 2021 | 8:38 AM

MP Renukacharya: ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಪಾದರಸದಂತೆ ಓಡಾಡುತ್ತಿದ್ದರು. ಆದರೆ ಈಗ ಅವರು ತಮ್ಮ ಪಾದಗಳಿಗೆ ಏನೋ ಮಾಡಿಕೊಂಡಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರ ಕಾಲಿಗೆ ತಜ್ಞ ವೈದ್ಯರು ಸರ್ಜರಿ ಮಾಡಿದ್ದಾರೆ.

ಪಾದರಸದಂತೆ ಓಡಾಡುತ್ತಿದ್ದ ಶಾಸಕ ರೇಣುಕಾಚಾರ್ಯ ಪಾದಕ್ಕೆ ಮುಂಬೈನಲ್ಲಿ ಶಸ್ತ್ರಚಿಕಿತ್ಸೆ; ಒಂದು ತಿಂಗಳು ಚುಟ್ಟಿ
ಪಾದರಸದಂತೆ ಓಡಾಡುತ್ತಿದ್ದ ಶಾಸಕ ರೇಣುಕಾಚಾರ್ಯ ಪಾದಕ್ಕೆ ಮುಂಬೈನಲ್ಲಿ ಶಸ್ತ್ರಚಿಕಿತ್ಸೆ; ಒಂದು ತಿಂಗಳು ಚುಟ್ಟಿ
Follow us on

ಬೆಂಗಳೂರು: ನಾಡನ್ನು ಇತ್ತೀಚೆಗೆ ಇನ್ನಿಲ್ಲದಂತೆ ಕಾಡಿದ ಕೊರೊನಾ ಸೋಂಕಿನ ದುರ್ಭರ ಕಾಲದಲ್ಲಿ ತಮ್ಮ ಕ್ಷೇತ್ರದ ಬಾಧಿತರ ಮನೆಗಳಿಗೆ ಎಡತಾಕುತ್ತಿದ್ದ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಪಾದರಸದಂತೆ ಓಡಾಡುತ್ತಿದ್ದರು. ಆದರೆ ಈಗ ಅವರು ತಮ್ಮ ಪಾದಗಳಿಗೆ ಏನೋ ಮಾಡಿಕೊಂಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಪಘಾತವಾಗಿದ್ದು, ಕಾಲಿಗೆ ಪೆಟ್ಟಾಗಿತ್ತು. ಮೂರು ತಿಂಗಳಿಂದ ಕಾಲು ನೋವು ಬಾಧೆ ಹೆಚ್ಚಾಗಿತ್ತು. ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಮಾಡಿಸಿಕೊಂಡಿರುವೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನನ್ನ ಕಾಲಿಗೆ ತಜ್ಞ ವೈದ್ಯರು ಸರ್ಜರಿ ಮಾಡಿದ್ದಾರೆ. ಸದ್ಯಕ್ಕೆ ರೆಸ್ಟ್​​ನಲ್ಲಿರುವೆ. ಮುಂದಿನ 15 ದಿನ ಬೆಂಗಳೂರಿನಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗುವೆ. ನಿಮ್ಮಗಳ ಹಾರೈಕೆ ಇರಲಿ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂಪಿ ರೇಣುಕಾಚಾರ್ಯ ಅವರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಆತ್ಮೀಯ ಶಾಸಕ ಮಿತ್ರರಾದ ಡಾ. ಶಿವರಾಜ್ ಪಾಟೀಲ್ ಅವರ ಮಾರ್ಗದರ್ಶನ ಹಾಗೂ ಡಾ. ವಿಜಯ್ ಶೆಟ್ಟಿ ನೇತೃತ್ವದ ತಂಡ ಯಶಸ್ವಿಯಾಗಿ ಮೊಣಕಾಲಿನ ಸರ್ಜರಿ ನೆಡೆಸಿದೆ. ನಿಮ್ಮೆಲ್ಲರ ಆಶೀರ್ವಾದ ಹಾಗೂ ಹಾರೈಕೆಯಿಂದ ಆದಷ್ಟು ಬೇಗ ಗುಣಮುಖನಾಗಿ ಜನಸೇವೆಗೆ ಮರುಳಲಿದ್ದೇನೆ ಎಂದಿದ್ದಾರೆ.

(Honnali bjp mla mp renukacharya undergo surgery for leg in mumbai private hospital)

Published On - 8:30 am, Thu, 28 October 21