ಲೆಡೀಸ್​ ಬೈಕ್​ ಱಲಿಯಲ್ಲಿ M.P.ರೇಣುಕಾಚಾರ್ಯ.. ಪತ್ನಿ ಜೊತೆ ಹೊನ್ನಾಳಿ ಶಾಸಕರ ಬಿಂದಾಸ್​ ಬೈಕ್ ಸವಾರಿ!

ತಮ್ಮ ಕ್ಷೇತ್ರದ ಜನರ ನೋವು ನಲಿವಿನಲ್ಲಿ ಭಾಗಿಯಾಗುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಎಲ್ಲಾ ಕಾರ್ಯಕ್ರಮಗಳಲ್ಲಿ ಕೊಂಚ ವಿಭಿನ್ನವಾಗಿಯೇ ಪಾಲ್ಗೊಳ್ಳುತ್ತಾರೆ. ಇತರೆ ಗಣ್ಯರಂತೆ ಜನಸಾಮಾನ್ಯರಿಂದ ಮಾರುದೂರ ಇರದೆ ತಮ್ಮ ಕ್ಷೇತ್ರದ ಜನರೊಂದಿಗೆ ಬೆರೆತು ಎಲ್ಲಾ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾರೆ.

ಲೆಡೀಸ್​ ಬೈಕ್​ ಱಲಿಯಲ್ಲಿ M.P.ರೇಣುಕಾಚಾರ್ಯ.. ಪತ್ನಿ ಜೊತೆ ಹೊನ್ನಾಳಿ ಶಾಸಕರ ಬಿಂದಾಸ್​ ಬೈಕ್ ಸವಾರಿ!
ಪತ್ನಿ ಜೊತೆ ಹೊನ್ನಾಳಿ ಶಾಸಕರ ಬಿಂದಾಸ್​ ಬೈಕ್ ಸವಾರಿ!
Follow us
KUSHAL V
|

Updated on: Mar 14, 2021 | 5:44 PM

ದಾವಣಗೆರೆ: ತಮ್ಮ ಕ್ಷೇತ್ರದ ಜನರ ನೋವು ನಲಿವಿನಲ್ಲಿ ಭಾಗಿಯಾಗುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಎಲ್ಲಾ ಕಾರ್ಯಕ್ರಮಗಳಲ್ಲಿ ಕೊಂಚ ವಿಭಿನ್ನವಾಗಿಯೇ ಪಾಲ್ಗೊಳ್ಳುತ್ತಾರೆ. ಇತರೆ ಗಣ್ಯರಂತೆ ಜನಸಾಮಾನ್ಯರಿಂದ ಮಾರುದೂರ ಇರದೆ ತಮ್ಮ ಕ್ಷೇತ್ರದ ಜನರೊಂದಿಗೆ ಬೆರೆತು ಎಲ್ಲಾ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾರೆ. ಅಂತೆಯೇ, ಈ ಬಾರಿ ಸಹ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇಂದು ಮಹಿಳಾಮಣಿಗಳೊಟ್ಟಿಗೆ ಸೇರಿ ಶಾಸಕರು ತುಸು ಡಿಫರೆಂಟ್​ ಆಗಿಯೇ ಸಮಾರಂಭವನ್ನು ಆಚರಿಸಿದರು.

DVG MP RENUKACHARYA BIKE RALLY 9

ಱಲಿ ಆರಂಭಕ್ಕೆ ಮುನ್ನ.. ರೆಡಿ, ಸ್ಟೆಡಿ, ಗೋ!

DVG MP RENUKACHARYA BIKE RALLY 10

ಮಾನಿನಿಯರ ಬೈಕ್​ ಱಲಿಯಲ್ಲಿ ಪತ್ನಿ ಜೊತೆ ಬೈಕ್​ ಮೇಲೆ ಶಾಸಕರ ಸಖತ್​ ಪೋಸ್​

DVG MP RENUKACHARYA BIKE RALLY 11

ಮಡದಿ ಜೊತೆ ಪಕ್ಷದ ಬಾವುಡ ಹಿಡಿದು ಪಟ್ಟಣದ ರೌಂಡ್​ ಹೊಡೆದ ಶಾಸಕ ರೇಣುಕಾಚಾರ್ಯ

DVG MP RENUKACHARYA BIKE RALLY 12

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಬೈಕ್​ ಱಲಿ

DVG MP RENUKACHARYA BIKE RALLY 13

ಪತ್ನಿ ಜೊತೆ ಬೈಕ್​ ಱಲಿಯಲ್ಲಿ ಶಾಸಕ ಫುಲ್​ ಮಿಂಚಿಂಗ್​

DVG MP RENUKACHARYA BIKE RALLY 14

ಬೈಕ್​ ಱಲಿಯಲ್ಲಿ ಶಾಸಕ ರೇಣುಕಾಚಾರ್ಯ

ಹೌದು, ಇಂದು ದಿನಾಚರಣೆ ಪ್ರಯುಕ್ತ ಏಪರ್ಡಿಸಲಾಗಿದ್ದ ಆಲ್​ ಲೆಡೀಸ್​ ಬೈಕ್ ಱಲಿಯಲ್ಲಿ ಶಾಸಕರು ಸಹ ಪಾಲ್ಗೊಂಡರು. ತಮ್ಮ ಮಡದಿ ಜೊತೆ ಬೈಕ್ ಏರಿ ಬಂದ ಶಾಸಕ ಎಂ.ಪಿ.ರೇಣುಕಾಚಾರ್ಯ ಇತರೆ ಮಾನಿನಿಯರೊಂದಿಗೆ ಸೇರಿ ಬಿಂದಾಸ್​ ಆಗಿ ಱಲಿಯಲ್ಲಿ ಮಿಂಚಿದರು. ದಾರಿಯುದ್ದಕ್ಕೂ ಮಡಿದಿಯೊಂದಿಗೆ ಪಕ್ಷದ ಬಾವುಟ ಹಿಡಿದು ಹಾರ್ನ್​ ಹೊಡೆಯುತ್ತಾ ಸಾಗಿದರು.

DVG MP RENUKACHARYA BIKE RALLY 6

ಬೈಕ್​ ಱಲಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

DVG MP RENUKACHARYA BIKE RALLY 7

ಱಲಿ ವೇಳೆ ಸಂಗೊಳ್ಳಿ ರಾಯಣ್ಣರ ಪ್ರತಿಮೆಗೆ ಮಾಲಾರ್ಪಣೆ

DVG MP RENUKACHARYA BIKE RALLY 8

ಸಂಗೊಳ್ಳಿ ರಾಯಣ್ಣರ ಪ್ರತಿಮೆ ಬಳಿ ಶಾಸಕರ ಖಡಕ್​ ಪೋಸ್​!

ಬಳಿಕ, ಸಮಾರಂಭದಲ್ಲಿ ಭಾಗವಹಿಸಿದ ಶಾಸಕರಿಗೆ ಭರ್ಜರಿ ಸ್ವಾಗತ ಕೋರಿದ ಮಾನಿನಿಯರು ನಂತರ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನಾ ಮುಂದು ತಾ ಮುಂದು ಎಂದು ಸುತ್ತಿಕೊಂಡರು. ಜಿಲ್ಲೆಯ ಹೊನ್ನಾಳಿಯಲ್ಲಿ ಮಹಿಳಾ ಮೋರ್ಚಾದಿಂದ ಱಲಿ ಆಯೋಜನೆ ಮಾಡಲಾಗಿತ್ತು. ಪಟ್ಟಣದ ಹಿರೇಕಲ್ಮಠದ ಆವರಣದಿಂದ ಗುರುಭವನದವರೆಗೆ ಬೈಕ್ ಱಲಿ ನಡೆಯಿತು.

DVG MP RENUKACHARYA BIKE RALLY 4

ಸಮಾರಂಭಕ್ಕೆ ಆಗಮಿಸಿದ ಶಾಸಕರಿಗೆ ಮಹಿಳಾಮಣಿಗಳಿಂದ ಅದ್ದೂರಿ ಸ್ವಾಗತ

DVG MP RENUKACHARYA BIKE RALLY 3

ಸ್ವಾಗತದ ನಂತರ ಕ್ಯಾಮರಾಗೆ ಸಖತ್​ ಪೋಸ್​!

DVG MP RENUKACHARYA BIKE RALLY 2

ಮಾನಿನಿಯರ ಜೊತೆ ಒಂದು ಸೆಲ್ಫಿ

DVG MP RENUKACHARYA BIKE RALLY 1

‘ಸಾರ್​ ಒಂದೇ ಒಂದು ಸೆಲ್ಫಿ’

DVG MP RENUKACHARYA BIKE RALLY 5

ಚಿಣ್ಣರ ಜೊತೆ ಒಂದು ಸೆಲ್ಫಿ!

ಇದನ್ನೂ ಓದಿ: ನಮಗೆ ಯಾರು ದಿಕ್ಕಿಲ್ಲವೆಂದು ನನ್ನ ಮಗನನ್ನು ಬಿಟ್ಟು ಕಳಿಸಿಲ್ಲ -SIT ವಶದಲ್ಲಿರುವ ಪುತ್ರ ಬಾರದಿದ್ದಕ್ಕೆ ತಾಯಿ ಕಣ್ಣೀರು