ಗ್ಯಾಸ್, ಸಕ್ಕರೆ-ಬೆಲ್ಲ ಬೆಲೆ ಏರಿಕೆ ಎಫೆಕ್ಟ್​: ಕಾಫಿ-ಟೀ ಪ್ರಿಯರಿಗೆ ಬಿಗ್ ಶಾಕ್!

ಇಸ್ರೇಲ್- ಅಮೆರಿಕ ಯುದ್ಧದ ಹಿನ್ನೆಲೆ, ಈಗಾಗಲೇ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಮೇಲೆ ಒಂದು ಸಾವಿರ ರುಪಾಯಿವರೆಗೆ ದರ ಏರಿಕೆ ಆಗಿದೆ. ಕಳೆದ ಒಂದು ತಿಂಗಳಲ್ಲಿ ಬೆಲ್ಲ ಮತ್ತು ಸಕ್ಕರೆ ಬೆಲೆ ಏರಿಕೆ ಅಗಿದ್ದು, ಈ ಹಿಂದೆ ಯಾವ ಹೋಟೆಲ್ ಬೆಲೆ ಏರಿಕೆ ಮಾಡಿರಲಿಲ್ವೋ ಅಂತಹ ಹೋಟೆಲ್ ಮಾಲೀಕರು ಇದೀಗ ಕಾಫಿ-ಟೀ ಬೆಲೆಯಲ್ಲಿ ಏರಿಕೆ ಆಗಿದ್ದು, ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ‌.

ಗ್ಯಾಸ್, ಸಕ್ಕರೆ-ಬೆಲ್ಲ ಬೆಲೆ ಏರಿಕೆ ಎಫೆಕ್ಟ್​:  ಕಾಫಿ-ಟೀ ಪ್ರಿಯರಿಗೆ ಬಿಗ್ ಶಾಕ್!
Tea Coffee
Edited By:

Updated on: Sep 08, 2026 | 8:27 PM

ಬೆಂಗಳೂರು, (ಸೆಪ್ಟೆಂಬರ್ 08): ಯುದ್ಧದ ಹಿನ್ನೆಲೆ ಕಮರ್ಷಿಯಲ್ ಸಿಲಿಂಡರ್ ಮೇಲೆ 987 ರುಪಾಯಿ ಅಷ್ಟು ಏರಿಕೆ ಆಗಿದೆ. ಮಾರ್ಚ್ ನಲ್ಲಿ ಒಂದು ಕಮರ್ಷಿಯಲ್ ಸಿಲಿಂಡರ್ ಬೆಲೆ 1845 ರುಪಾಯಿ ಇದ್ದದ್ದು ಸೆಪ್ಟೆಂಬರ್ ನಲ್ಲಿ 2832 ರುಪಾಯಿ ಆಗಿದೆ. ಜುಲೈನಲ್ಲಿ‌ 44 ರುಪಾಯಿ ಒಂದು ಕೆಜಿ ಇದ್ದ ಸಕ್ಕರೆ, ಆಗಸ್ಟ್ ನಲ್ಲಿ ಒಂದು ಕೆಜಿ ಸಕ್ಕರೆ ಬೆಲೆ 64 ರುಪಾಯಿ ಆಗಿತ್ತು. ಸದ್ಯ ಒಂದು ಕೆಜಿ ಸಕ್ಕರೆ 56 ರುಪಾಯಿ ಆಗಿದೆ. ಒಂದು ಕೆಜಿ ಬೆಲ್ಲ 55 ರುಪಾಯಿ ಇತ್ತು ನಂತರ 70 ರುಪಾಯಿಗೆ ಏರಿಕೆ ಆಗಿತ್ತು. ಇದೀಗ ಒಂದು ಕೆಜಿ ಬೆಲ್ಲ 60 ರುಪಾಯಿಗೆ ಮಾರಾಟ ಆಗ್ತಿದೆ. ‌ಹೋಲ್ ಸೇಲ್ ನಲ್ಲೆ ಕಾಫಿ ಮತ್ತು ಟೀ ಪೌಡರ್ ಮೇಲೂ ಬೆಲೆ ಏರಿಕೆ ಆಗಿದೆ. ಹೀಗಾಗಿ ಕಾಫಿ-ಟೀ ಮತ್ತು ‌ಬಾದಮಿ ಹಾಲಿನ ಮೇಲೆ 3 ರಿಂದ 5 ರುಪಾಯಿ ದರ ಏರಿಕೆ ಮಾಡಲಾಗಿದೆ.

ಇನ್ನೂ ಕಾಫಿ-ಟೀ ಬಾದಾಮಿ ಹಾಲು, ಬೂಸ್ಟ್, ಹಾರ್ಲಿಕ್ಸ್ ಬೆಲೆ ಏರಿಕೆಗೆ ಪ್ರಮುಖ ಕಾರಣಗಳನ್ನು ನೋಡಿದ್ರೆ, ಈಗಾಗಲೇ ದಿನ ನಿತ್ಯ ಬಳಸೋ ವಸ್ತುಗಳ ಬೆಲೆ ಏರಿಕೆ ಆಗಿದೆ. ಸಿಲೆಂಡರ್, ಬಾಡಿಗೆ, ನೌಕರರ ವೇತನ ಸೇರಿ ಎಲ್ಲದರ ದರ ಕೂಡ ಜಾಸ್ತಿ ಆಗಿದೆ.ಕಳೆದ ತಿಂಗಳು ಸಕ್ಕರೆ ಹಾಗೂ ಬೆಲ್ಲದ ದರ ಏರಿಕೆ ಆಗಿತ್ತು.ಆದರೂ ಯಾರು ಕೂಡ ದರ ಏರಿಕೆ ಮಾಡಿಲ್ಲ ಇದರಿಂದ ಹೋಟೆಲ್ ಮಾಲೀಕರಿಗೆ ನಷ್ಟ ಆಗ್ತಿದೆ. ಹೀಗಾಗಿ ಈಗ ದರ ಏರಿಕೆ ಮಾಡದೇ ಬೇರೆ ದಾರಿ ಇಲ್ಲ ಅಂತಿರೋ ಮಾಲೀಕರು.

ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್​ನ್ಯೂಸ್: ಬಡಾವಣೆಗಳಿಂದ ಮೆಟ್ರೋಗೆ ಸಂಪರ್ಕ ಕಲ್ಪಿಸಲು 200 ಹೊಸ ಎಸಿ ಮಿನಿ ಬಸ್!

ಮುಂದಿನ ದಿನಗಳಲ್ಲಿ ಊಟ-ತಿಂಡಿಯ ದರವೂ ಏರಿಕೆ ಮಾಡೋ ಸಾಧ್ಯತೆ ಇದ್ಯಂತೆ. ಈ ಬಗ್ಗೆ ಮಾತನಾಡಿದ ಗ್ರಾಹಕರು ಪ್ರತಿದಿನ ಮೂರ್ನಾಲ್ಕು ಕಾಫಿ-ಟೀ ಕುಡಿಯುತ್ತಿವಿ. ಬೆಲೆ ಏರಿಕೆಯಿಂದ ದಿನಕ್ಕೆ 20 ರಿಂದ 25 ರುಪಾಯಿವರೆಗೆ ಹೆಚ್ಚುವರಿ ಹೊರೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಟ್ನಲ್ಲಿ ಗ್ಯಾಸ್, ಸಕ್ಕರೆ, ಬೆಲ್ಲದ ದರ ಏರಿಕೆಯಿಂದ ನಗರದ ಕೆಲವು ಹೋಟೆಲ್‌ಗಳು ಸದ್ದಿಲ್ಲದೆ ಕಾಫಿ-ಟೀ ದರವನ್ನು ದಿಢೀರ್ 3 ರಿಂದ 5 ರುಪಾಯಿ ಏರಿಕೆ ಮಾಡಿದ್ದು, ಇದರಿಂದ ಗ್ರಾಹಕರು ಶಾಕ್ ಆಗಿರುವುದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us