
ದೇವನಹಳ್ಳಿ: ಹೊಸ ವರ್ಷ ಸಂಭ್ರಮಕ್ಕೆ ಕ್ಷಣಗಣನೆ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊರವಲಯದ ಹೋಟೆಲ್ಗಳು ಬಣ್ಣ ಬಣ್ಣದ ಬಲೂನುಗಳಿಂದ, ಬಣ್ಣ ಬಣ್ಣದ ಲೈಟ್ಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿವೆ.
ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 7 ರಲ್ಲಿರುವ ಹೋಟೆಲ್ಗಳು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಬಲೂನ್ ಹಾಗೂ ಚಿಕ್ಕ ಚಿಕ್ಕ ವಿದ್ಯುತ್ ಬಲ್ಬ್ಗಳಿಂದ ಅಲಂಕಾರಗೊಳಿಸಲಾಗಿದೆ. ರಾತ್ರಿ 11 ಗಂಟೆವರೆಗೂ ಹೋಟೆಲ್ಗಳು ತೆರೆಯಲು ಅನುಮತಿಯಿದ್ದು, ಬರುವ ಗ್ರಾಹಕರಿಗೆ ಶುಭಾಷಯ ತಿಳಿಸುವ ನಿಟ್ಟಿನಲ್ಲಿ ಹೋಟೆಲ್ಗಳು ಸಿಂಗಾರಗೊಂಡಿವೆ. ರಾಜ್ಯದ ಬಹುತೇಕ ಇತರೆ ಕಡೆಗಳಲ್ಲೂ ಇಂತಹುದೇ ವಾತಾವರಣ ಕಳೆಕಟ್ಟಿದೆ.
ಹೊಸ ವರ್ಷಕ್ಕೆ ಹೊಸ ಸಂಕಲ್ಪ: ಮಾಂಸಾಹಾರ ತ್ಯಜಿಸುತ್ತಿರುವ ಮೋಹಕ ತಾರೆ ರಮ್ಯಾ