Facebookನಲ್ಲಿ ಅಸಭ್ಯ ಪೋಸ್ಟ್ ಹಾಕಿದ್ದಕ್ಕೆ.. ಮನನೊಂದು ಗೃಹಿಣಿ ಆತ್ಮಹತ್ಯೆಗೆ ಯತ್ನ

ನೆರೆಮನೆಯವನು ತನ್ನ ಬಗ್ಗೆ ಫೇಸ್‌ಬುಕ್‌‌ನಲ್ಲಿ ಅಸಭ್ಯ ಪೋಸ್ಟ್ ಹಾಕಿದ್ದಕ್ಕೆ ಮನನೊಂದು ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಮಹದೇವಿ ಕಾಲೋನಿಯಲ್ಲಿ ನಡೆದಿದೆ. ಫೇಸ್​​ಬುಕ್​ ಪೋಸ್ಟ್​ಗೆ ಮನನೊಂದ ಗೃಹಿಣಿ ಪವಿತ್ರಾ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

Facebookನಲ್ಲಿ ಅಸಭ್ಯ ಪೋಸ್ಟ್ ಹಾಕಿದ್ದಕ್ಕೆ.. ಮನನೊಂದು ಗೃಹಿಣಿ ಆತ್ಮಹತ್ಯೆಗೆ ಯತ್ನ
ಒಳಚಿತ್ರ: ಆರೋಪಿ ಕೃಷ್ಣ; ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪವಿತ್ರಾ

Updated on: Dec 17, 2020 | 4:55 PM

ಮೈಸೂರು: ನೆರೆಮನೆಯವನು ತನ್ನ ಬಗ್ಗೆ ಫೇಸ್‌ಬುಕ್‌‌ನಲ್ಲಿ ಅಸಭ್ಯ ಪೋಸ್ಟ್ ಹಾಕಿದ್ದಕ್ಕೆ ಮನನೊಂದ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಮಹದೇವಿ ಕಾಲೋನಿಯಲ್ಲಿ ನಡೆದಿದೆ. ಫೇಸ್​​ಬುಕ್​ ಪೋಸ್ಟ್​ಗೆ ಮನನೊಂದ ಗೃಹಿಣಿ ಪವಿತ್ರಾ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಏನಿದು ಪ್ರಕರಣ?
ಪವಿತ್ರಾ ಗಂಡ ಮಹದೇವ ಕಾಲೋನಿಯಲ್ಲಿ ಮನೆ ಕಟ್ಟಿಸುತ್ತಿದ್ದಾನೆ. ಈ ವಿಚಾರವಾಗಿ ಆತ ಹಾಗೂ ಅದೇ ರಸ್ತೆಯ ಕೃಷ್ಣ ಎಂಬುವವನ ನಡುವೆ ಗಲಾಟೆ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಕೃಷ್ಣ, ಫೇಸ್‌ಬುಕ್‌ನಲ್ಲಿ ಅಸಭ್ಯವಾಗಿ ಪೋಸ್ಟ್ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ಇದರಿಂದ ಮನನೊಂದ ಪವಿತ್ರಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪವಿತ್ರಾಳನ್ನು ಆಕೆಯ ಪತಿ ತಕ್ಷಣವೇ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾನೆ. ಸದ್ಯ, ಗೃಹಿಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕೃಷ್ಣ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ವರುಣ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Kidney Racket ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕಿಡ್ನಿ ಮಾರಾಟ ದಂಧೆ: ಹಾಸ್​ಮ್ಯಾಟ್​ ಆಸ್ಪತ್ರೆ ಹೆಸರು ಬಳಸಿ ವಂಚನೆ

Published On - 4:55 pm, Thu, 17 December 20