AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ: ಸ್ನೇಹಿತನ ನೆರವಿನಿಂದ ಗಂಡನ ಕೊಲೆ

ಸ್ನೇಹಿತನಾದ ಚಲುವರಾಜ್ ನೆರವಿನಿಂದ ಡಿ.7ರಂದು ಪತಿ ಶಿವರಾಜ್​ಗೆ ಕಂಠಪೂರ್ತಿ ಕುಡಿಸಿ ಕೈಕಾಲು ಕಟ್ಟಿ ಹಾಕಿ ಹತ್ಯೆ ನಡೆಸಿದ್ದು, ಡಿ.16ರಂದು ಅಡಹಳ್ಳಿಯ ಬಳಿ ಕಬಿನಿ ಬಲದಂಡೆ ನಾಲೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ: ಸ್ನೇಹಿತನ ನೆರವಿನಿಂದ ಗಂಡನ ಕೊಲೆ
ಹುಲ್ಲಹಳ್ಳಿ ಪೊಲೀಸ್ ಠಾಣೆ, ಪತ್ನಿ ಸೌಮ್ಯ
sandhya thejappa
| Edited By: |

Updated on: Dec 17, 2020 | 4:20 PM

Share

ಮೈಸೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಸ್ನೇಹಿತನ ನೆರವಿನಿಂದ ಪತಿಯನ್ನೇ ಹತ್ಯೆಗೈದ ಘಟನೆ ನಂಜನಗೂಡು ತಾಲೂಕಿನ ಅಡಹಳ್ಳಿಯಲ್ಲಿ ನಡೆದಿದ್ದು, ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸ್ನೇಹಿತನಾದ ಚಲುವರಾಜ್ ನೆರವಿನಿಂದ ಡಿ.7ರಂದು ಪತಿ ಶಿವರಾಜ್​ಗೆ ಕಂಠಪೂರ್ತಿ ಕುಡಿಸಿ ಕೈಕಾಲು ಕಟ್ಟಿ ಹಾಕಿ ಹತ್ಯೆ ನಡೆಸಲಾಗಿತ್ತು. ಡಿ. 16ರಂದು ಅಡಹಳ್ಳಿಯ ಬಳಿ ಕಬಿನಿ ಬಲದಂಡೆ ನಾಲೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪ್ರಕರಣ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ  ದಾಖಲಾಗಿತ್ತು.

ಪತಿ ಶಿವರಾಜ್ (29) ನಾಪತ್ತೆಯಾಗಿ ಒಂದು ವಾರವಾದರೂ ಆತನ ಪತ್ನಿ ನಾಪತ್ತೆ ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡು ನಂಜನಗೂಡು ಠಾಣೆ ಪೊಲೀಸರು ತನಿಖೆ ನಡೆಸಿದ್ದರು. ಆ ವೇಳೆ ಪತ್ನಿ ಸೌಮ್ಯಾ ನಿಜ ಬಣ್ಣ ಬಯಲಾಗಿದೆ. ಪ್ರಿಯತಮೆ ಮಾತು ಕೇಳಿ ಕೊಲೆ ಮಾಡಿದ ಪ್ರಿಯಕರ ಯೋಗೇಶ್ ಹಾಗೂ ಸ್ನೇಹಿತ ಚಲುವರಾಜ್ ಇದೀಗ ಜೈಲು ಪಾಲಾಗಿದ್ದಾರೆ.

ಟೋ ಡ್ರೈವರ್​ನೊಂದಿಗೆ ಅಕ್ರಮ ಸಂಬಂಧ: ಸೌಮ್ಯಾಳೊಂದಿಗೆ ಶಿವರಾಜ್ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದ. ಶುಂಠಿ ಕೆಲಸಕ್ಕೆ ಪ್ರತಿದಿನ ಆಟೋದಲ್ಲಿ ತೆರಳುತ್ತಿದ್ದ ಸೌಮ್ಯ ಆಟೋ ಡ್ರೈವರ್ ಯೋಗೇಶ್ ಜೊತೆ ಸಲುಗೆ ಬೆಳೆಸಿಕೊಂಡಿದ್ದಳು. ಈ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಗಲಾಟೆಗಳು ನಡೆಯುತ್ತಿತ್ತು, ಶುಂಠಿ ಕೆಲಸಕ್ಕೆ ಹೋಗದಂತೆಯೂ ಪತ್ನಿಗೆ ತಡೆ ಒಡ್ಡಿದ್ದ. ಇದೇ ಕಾರಣಕ್ಕೆ ತನ್ನ ಗಂಡನನ್ನೇ ಹತ್ಯೆಗೈದಿದ್ದಾಳೆಂದು ತಿಳಿದುಬಂದಿದೆ.

ಮೈದುನನ ಜೊತೆ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿ: ಪತಿಯನ್ನೇ ಕೊಲೆ ಮಾಡಿದ ಪತ್ನಿ

Follow Us
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ