Cauvery Water: 2023-24 ನೇ ಸಾಲಿನಲ್ಲಿ ತಮಿಳುನಾಡಿಗೆ ಹರಿದುಹೋದ ಕಾವೇರಿ ನೀರೆಷ್ಟು?

ಮಳೆ ಕೊರತೆಯ ಮಧ್ಯೆಯೂ ಕಳೆದ ವರ್ಷವಿಡೀ ನಿರಂತರವಾಗಿ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರು ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚನೆ ನೀಡುತ್ತಲೇ ಬಂದಿತ್ತು. ಅದಕ್ಕೆ ಕರ್ನಾಟಕ ಆಕ್ಷೇಪವನ್ನೂ ಸಲ್ಲಿಸಿತ್ತು. ಆದಾಗ್ಯೂ ನೀರು ಬಿಡಬೇಕಾಗಿ ಬಂದಿದ್ದು ನಿಜ. ಆದರೆ ತಮಿಳುನಾಡಿಗೆ ಕರ್ನಾಟಕ ಬಿಟ್ಟ ನೀರಿನ ಪ್ರಮಾಣವೆಷ್ಟು? ನಿಜಕ್ಕೂ ಹೆಚ್ಚು ನೀರು ಬಿಡಲಾಗಿತ್ತೇ? ಇಲ್ಲಿದೆ ವಿವರ.

Cauvery Water: 2023-24 ನೇ ಸಾಲಿನಲ್ಲಿ ತಮಿಳುನಾಡಿಗೆ ಹರಿದುಹೋದ ಕಾವೇರಿ ನೀರೆಷ್ಟು?
ಕೆಆರ್​ಎಸ್ ಜಲಾಶಯ

Updated on: Jun 03, 2024 | 3:06 PM

ಬೆಂಗಳೂರು, ಜೂನ್ 3: ನೈಋತ್ಯ ಮತ್ತು ಈಶಾನ್ಯ ಮುಂಗಾರು (Monsoon Rain) ಮಳೆ ಕೊರತೆಯ ಮಧ್ಯೆಯೂ ಕರ್ನಾಟಕ 202ರ ಜೂನ್​ನಿಂದ 2024ರ ಮೇ ಅವಧಿಯಲ್ಲಿ ತಮಿಳುನಾಡಿಗೆ 81.33 ಟಿಎಂಸಿ ಅಡಿ ಕಾವೇರಿ ನೀರನ್ನು (Cauvery Water) ಬಿಡುಗಡೆ ಮಾಡಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಈ ಅವಧಿಯಲ್ಲಿ ವರ್ಷದಲ್ಲಿ, ಕಾವೇರಿ ಜಲ ವಿವಾದ ನ್ಯಾಯಾಧಿಕರಣದ ಅಂತಿಮ ತೀರ್ಪಿನ ಪ್ರಕಾರ ರಾಜ್ಯವು ತಮಿಳುನಾಡಿಗೆ 177.25 ಟಿಎಂಸಿ ಅಡಿ ಕಾವೇರಿ ನೀರನ್ನು ಬಿಡುಗಡೆ ಮಾಡಬೇಕಿತ್ತು.

ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿತ್ತು. ಹಾಗಾಗಿ ಹೆಚ್ಚುವರಿ ಕಾವೇರಿ ನೀರನ್ನು ತಮಿಳುನಾಡಿನ ಬಿಳಿಗುಂಡ್ಲು ಮಾಪನ ಕೇಂದ್ರಕ್ಕೆ ಹರಿಯಬಿಡಲಾಗಿತ್ತು. ಆದರೆ, ಕಳೆದ ವರ್ಷ ಹಾಗಾಗಲಿಲ್ಲ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿ ವರ್ಷದಲ್ಲಿ, ಅಂದರೆ 2022 ರ ಜೂನ್​ನಿಂದ 2023 ರ ಮೇ ನಡುವೆ, ರಾಜ್ಯವು ತಮಿಳುನಾಡಿಗೆ ದಾಖಲೆಯ 667.24 ಟಿಎಂಸಿ ಅಡಿ (489.99 ಟಿಎಂಸಿ ಅಡಿ ಹೆಚ್ಚುವರಿ ಸೇರಿ) ಕಾವೇರಿ ನೀರನ್ನು ಬಿಡುಗಡೆ ಮಾಡಿತ್ತು. 2021 ರ ಜೂನ್​ನಿಂದ 2022 ರ ಮೇ ನಡುವೆ 278 ಟಿಎಂಸಿ ಅಡಿ (101 ಟಿಎಂಸಿ ಅಡಿ ಹೆಚ್ಚುವರಿ ಸೇರಿ) ಕಾವೇರಿ ನೀರನ್ನು ಬಿಡುಗಡೆ ಮಾಡಲಾಗಿತ್ತು.

2023 ರಲ್ಲಿ, ಕೆಆರ್​ಎಸ್ ಅಣೆಕಟ್ಟೆಯ ನೀರಿನ ಮಟ್ಟವು 124.8 ಅಡಿಗಳ ಗರಿಷ್ಠ ಮಟ್ಟದ ಬದಲಾಗಿ 113.44 ಅಡಿಗಳಷ್ಟಿತ್ತು. ಕಬಿನಿ 2,282.73 ಅಡಿ, ಹೇಮಾವತಿ 2,915.05 ಅಡಿ ಮತ್ತು ಹಾರಂಗಿ ಅಣೆಕಟ್ಟು 2,858.65 ಅಡಿ ಇತ್ತು.

2023 ರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ ಶೇ 25 ರಷ್ಟು ಮಳೆ ಕೊರತೆಯಾಗಿತ್ತು. ಕಾವೇರಿ ನದಿ ಜಲಾನಯನ ಪ್ರದೇಶ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಶೇ 27 ರಷ್ಟು ಮಳೆ ಕೊರತೆಯಾಗಿತ್ತು.

2024 ರ ಮೇ 31 ರ ವೇಳೆಗೆ, ಕೃಷ್ಣ ರಾಜ ಸಾಗರ ಜಲಾಶಯದ ನೀರಿನ ಮಟ್ಟವು 83.90 ಅಡಿಗಳಷ್ಟಿತ್ತು. 49.45 ಟಿಎಂಸಿ ಅಡಿಗಳ ಒಟ್ಟು ಸಾಮರ್ಥ್ಯಕ್ಕೆ ಬದಲಾಗಿ 12.61 ಟಿಎಂಸಿ ಅಡಿ (ಅದರ ಒಟ್ಟು ಸಾಮರ್ಥ್ಯದ ಶೇಕಡಾ 26) ನೀರನ್ನು ಹೊಂದಿತ್ತು. ಕಬಿನಿ ಅಣೆಕಟ್ಟೆಯ ನೀರಿನ ಮಟ್ಟ ಗರಿಷ್ಠ 2,284 ಅಡಿಗಳಿಗೆ ಹೋಲಿಸಿದರೆ 2,260.53 ಅಡಿ ಇತ್ತು. ಒಟ್ಟು ಸಾಮರ್ಥ್ಯದ ಶೇಕಡಾ 39ರಷ್ಟು ಮಾತ್ರ ಹೊಂದಿತ್ತು.

ಇದನ್ನೂ ಓದಿ: ಬೆಂಗಳೂರು ಮಳೆ; ವರುಣನಿಂದ ಸೃಷ್ಟಿಯಾದ ಅವಾಂತರಗಳು ಒಂದಾ ಎರಡಾ, 206 ಮರಗಳು ಧರಾಶಾಹಿ

ಜನವರಿಯಿಂದ ಕರ್ನಾಟಕದಲ್ಲಿ ಶೇ 33ರಷ್ಟು ಅಧಿಕ ಮಳೆಯಾಗಿದೆ. ಭಾರತೀಯ ಹವಾಮಾಣ ಇಲಾಖೆ ಮುನ್ಸೂಚನೆಗಳ ಪ್ರಕಾರ, ಈ ಬಾರಿ ನೈಋತ್ಯ ಮಾನ್ಸೂನ್ ಸವಾಡಿಕೆಗಿಂತ ಹೆಚ್ಚಾಗಿರುವ ನಿರೀಕ್ಷೆ ಇದೆ. ರಾಜ್ಯವು 20 ಪ್ರತಿಶತಕ್ಕಿಂತ ಹೆಚ್ಚಿನ ಮಳೆಯನ್ನು ಪಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ